ಎ 29-ಮೇ 1,2:ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೇರ್ ಎಸೋಸಿಯೇಶನ್ :ಆರನೇ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಹಾಗೂ ನಾಗಬ್ರಹ್ಮ ಮಂಡಲೋತ್ಸವ

0
115
।। ಶ್ರೀ ವಿಷ್ಣು ಮೂರ್ತಿ ಪ್ರಸನ್ನ ।।

(kiranvarta-,ಕಿರಣ್ ವಾರ್ತಾ )ಉಡುಪಿ :ಮಜೂರು ದೊಡ್ಡಮನೆ ಕುಟುಂಬಸ್ಥರ ಮೂಲಸ್ಥಾನ ಮಜೂರು ಇಲ್ಲಿ 2019 ಏಪ್ರಿಲ್ 29.ಮೇ 1ಹಾಗೂ 2 ರಂದು ಆರನೆಯ  ಧಾರ್ಮಿಕ ಕಾರ್ಯಕ್ರಮದಂಗವಾಗಿ ಮೂಲ ದೈವ -ದೇವರುಗಳ ಸೇವಾ ಕಾರ್ಯ ಹಾಗೂ  ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದೆ .

   ಏಪ್ರಿಲ್ 29 ರ ಸೋಮವಾರದಂದು ಬೆಳಿಗ್ಗೆ ಗಣಹೋಮ ,ತೋರಣ ಮಹೂರ್ತ ,ಉಗ್ರಾಣ ಮಹೂರ್ತ ,ಮದ್ಯಾಹ್ನ ಗಂಟೆ 2:00 ರಿಂದ ವಾರ್ಷಿಕ ಮಹಾಸಭೆ ನಡೆಯಲಿದ್ದು ಸಂಜೆ ಗಂಟೆ 4:00 ರಿಂದ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೂವಿನ ಪೂಜೆ ,ನಂತರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ದೊಡ್ಡಮನೆ ಕುಟುಂಬಸ್ಥರ ಮೂಲಸ್ಥಾನಕ್ಕೆ ಹೊರಡಲಿದೆ . ನಂತರ ಸಪ್ತಶುದ್ಧಿ ,ಪ್ರಸಾದ ಶುದ್ಧಿ ,ವಾಸ್ತು ಹೋಮ ,ವಾಸ್ತು ಪೂಜೆ ಮತ್ತು ಪ್ರಾಕಾರ ಬಲಿ ನಡೆಯಲಿದೆ .
ಮೇ 1 ರಂದು ಬುಧವಾರ ಬೆಳಿಗ್ಗೆ ಗಂಟೆ 7:00 ರಿಂದ  ಪುಣ್ಯಾಹ ,ಪವಮಾನ ಹೋಮ ,ತಿಲಹೋಮ ,ಕೂಷ್ಮಂಡ ಹೋಮ ,ಪ್ರಧಾನ ಹೋಮ ,ನಾಗ -ಬ್ರಹ್ಮಾದಿ ಪರಿವಾರ ದೇವತೆಗಳ ಕಲಶಾಧಿವಾಸ ,ಆಶ್ಲೇಷ ಬಲಿ .ದುರ್ಗಾಹೋಮ .ಪಂಚಾಮೃತ ಅಭಿಷೇಕ ,ಕಲಶಾಭಿಷೇಕ ಹಾಗೂ ಪ್ರಸನ್ನ ಪೂಜೆ ನಡೆಯಲಿದೆ . ಬೆಳಿಗ್ಗೆ ಗಂಟೆ 10:00 ರಿಂದ ವಟು ಆರಾಧನೆ ,ಕನ್ನಿಕಾರಾಧನೆ ,ಬ್ರಾಹ್ಮಣ ಸುವಾಸಿನಿ ಆರಾಧನೆ ,ಮಧ್ಯಾಹ್ನ ಗಂಟೆ 11:00 ರಿಂದ ನಾಗದರ್ಶನ ,ಪಲ್ಲಪೂಜೆ ,ಪ್ರಸಾದ ವಿತರಣೆ ,ಮದ್ಯಾಹ್ನ ಗಂಟೆ 12:00 ರಿಂದ  ದೀಪಾವಳಿ ಹಬ್ಬದ ಸೇವೆ ,ತುಳಸಿ ಪೂಜೆ ,ಮಧ್ಯಾಹ್ನ ಗಂಟೆ 1:00 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ .
ಐಕಳ ಹರೀಶ್ ಶೆಟ್ಟಿ

ಕಾಪು ಲೀಲಾಧರ ಶೆಟ್ಟಿ

ಶ್ರೀಕಾಂತ್ ಶೆಟ್ಟಿ

ವಿಶ್ವನಾಥ ಡಿ ಶೆಟ್ಟಿ

ಮಾ।ಹರ್ಷಲ್ ಎಸ್ ಶೆಟ್ಟಿ

ಮಧ್ಯಾಹ್ನ ಗಂಟೆ 2:00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ ಗಂಟೆ 4:00 ರಿಂದ ಧಾರ್ಮಿಕ  ಸಭೆ ನಡೆಯಲಿದೆ . ಈ  ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವ ಬಂಟರ ಸಂಘಗಳ ಒಕ್ಕೊಟಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ,ಗೌರವ ಅತಿಥಿಗಳಾಗಿ ಖ್ಯಾತ ಸಮಾಜಸೇವಕ  ,ಕಲಾಪೋಷಕ ಕಾಪು ಲೀಲಾಧರ ಶೆಟ್ಟಿ  ಭಾಗವಹಿಸಲಿದ್ದಾರೆ .ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಪ್ರವಚನ ನೀಡಲಿದ್ದಾರೆ . ಈ ಸಂದರ್ಭ ಪುಣೆಯ ಉದ್ಯಮಿ ಹಾಗೂ ಸಮಾಜಸೇವಕರಾದ ವಿಶ್ವನಾಥ ಡಿ ಶೆಟ್ಟಿ ,ಕಟ್ಟಿಂಗೇರಿಮನೆ -ಎಡ್ಮೇರ್  ತಾಕಡಬೈಲು  ಹಾಗೂ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆ ,ದುಬಾಯಿ -2018 ಪುರಸ್ಕೃತ ಮಾ।ಹರ್ಷಲ್ ಎಸ್ ಶೆಟ್ಟಿ ,ಮುಕ್ಕ ಐಂಗಳ  ಇವರುಗಳನ್ನು ವಿಶೇಷ ಸಾಧರನ್ನಾಗಿ ಸಮ್ಮಾನಿಸಲಾಗುವುದು .

ಸಂಜೆ ಗಂಟೆ 6:00ರಿಂದ ಧಾರ್ಮಿಕ ಕಾರ್ಯಕ್ರಮದಂಗವಾಗಿ ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದ್ದು ರಾತ್ರಿ 9:30 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ  ನಡೆಯಲಿದೆ .
    ಎರ್ಮಾಳ್ ಗಣಪತಿ ಭಟ್ ಮತ್ತು ವೇದ ಮೂರ್ತಿ ಎರ್ಮಾಳ್ ಗುರುರಾಜ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ  ವಿಧಾನಗಳು ಜರಗಲಿದ್ದು ವೇದಮೂರ್ತಿ ಕಕ್ಕುಂಜೆ ನಾಗಾನಂದ ವಾಸುದೇವಾಚಾರ್ಯ  ರವರು ನಾಗಪಾತ್ರಿಯಾಗಿ ,ಮುದ್ದೂರು ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗ ವೈದ್ಯರಾಗಿ ಹಾಗೂ ನಟರಾಜ ವೈದ್ಯ ಮತ್ತು ಬಾಲಕೃಷ್ಣ ವೈದ್ಯ ನಾಗಕನ್ನಿಕೆಯರಾಗಿ ಸೇವೆ ನೀಡಲಿದ್ದಾರೆ .
ಮೇ 2 ರಂದು ಗುರುವಾರ ಸಂಜೆ ಗಂಟೆ 4:00 ರಿಂದ ಸಿರಿ ತುಳುವ ಚಾವಡಿ ,ಒಡಿಪು ನಡೆಪಾವುನ ಪಗ್ಗು ತಿಂಗೊಲ್ದ 77 ನೇ ಮುಂದಿಲ್ದ ಕೂಟ ,ಸಂಜೆ ಗಂಟಿವ 6:00 ರಿಂದ ವಾರ್ಷಿಕ ತಂಬಿಲ ಸೇವೆ ,ದೈವದರ್ಶನ ಹಾಗೂ ರಾತ್ರಿ ಗಂಟೆ 9:00 ರಿಂದ ಅನ್ನ  ಸಂತರ್ಪಣೆ ನಡೆಯಲಿದೆ .
ಸುಭಾಶ್ಚಂದ್ರ ಎಸ್ ಹೆಗ್ಡೆ

ಡಾ।ಎನ್ .ನಾರಾಯಣ ಶೆಟ್ಟಿ

ಭಾಸ್ಕರ ಡಿ ಶೆಟ್ಟಿ

ಸುಕೇಶ್ ಎಸ್ ಶೆಟ್ಟಿ
ಆತ್ಮೀಯ ಭಗವದ್ಭಕ್ತರಾದ ತಾವೆಲ್ಲರೂ ಸಕುಟುಂಬ ,ಬಂಧು -ಮಿತ್ರ ಪರಿವಾರ ಸಮೇತರಾಗಿ ಆಗಮಿಸಿ ಈ ಧಾರ್ಮಿಕ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೇರ್ ಎಸೋಸಿಯೇಶನ್ ಇದರ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಎಸ್ ಹೆಗ್ಡೆ ,ಗೌರವಾಧ್ಯಕ್ಷರಾದ ಆಡ್ವೇ ಚಿಂಕ್ರೀಗುತ್ತು ಡಾ।ಎನ್ .ನಾರಾಯಣ ಶೆಟ್ಟಿ ,ಗೌರವ ಕಾರ್ಯದರ್ಶಿಯಾದ ಪಡುಬೆಳ್ಳೆ ಬೈಲುಮನೆ ಭಾಸ್ಕರ ಡಿ ಶೆಟ್ಟಿ ,ಗೌರವ ಕೋಶಾಧಿಕಾರಿ ಬೋಳ ಕರಂಡೆಮನೆ ಸುಕೇಶ್ ಎಸ್ ಶೆಟ್ಟಿ ,ಉಪಾಧ್ಯಕ್ಷರುಗಳಾದ ಲ।ಜಯರಾಮ್ ಎಲ್ ಶೆಟ್ಟಿ ,ಕಳತ್ತೂರು ಅಂಗಡಿಗುತ್ತು ,ಗುಡ್ಡ ಎಲ್ ಶೆಟ್ಟಿ ,ಸಾಂತೂರು ಮಣ್ಣಗುಂಡಿ ಹೊಸೊಕ್ಲು ,ಚಂದ್ರಶೇಖರ ಹೆಚ್ ಶೆಟ್ಟಿ ,ಬೆಳಪುಗುತ್ತು ,ಸತೀಶ್ ಆರ್ ಶೆಟ್ಟಿ ,ಆಡ್ವೇ ಚಿಂಕ್ರೀಗುತ್ತು ,ಗಂಗಾಧರ ವಿ ಶೆಟ್ಟಿ ,ಅತಿಕಾರಿಬೆಟ್ಟು ಬರ್ಕೆತೋಟ ,ರಮೇಶ್ ಎ ಶೆಟ್ಟಿ ,ಪಿಲಾರು ಪೆರ್ಗೊಟ್ಟು ಮನೆ ,ಜೊತೆ ಕಾರ್ಯದರ್ಶಿ ಡಾ।ಪ್ರೇಮಲತಾ ಆರ್ ಶೆಟ್ಟಿ ,ಪಿಲಾರು ಪೆರ್ಗೊಟ್ಟು ಮನೆ,ಜೊತೆ ಕೋಶಾಧಿಕಾರಿ ಚಂದ್ರಶೇಖರ ಆರ್ ಶೆಟ್ಟಿ , ಪಿಲಾರು ಪೆರ್ಗೊಟ್ಟು ಮನೆ ಮತ್ತಿತರ ಸದಸ್ಯರು ವಿನಂತಿಸಿದ್ದಾರೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ