ತುಳುಕೂಟದ ಪಿಂಪ್ರಿ ಚಿಂಚ್ವಾಡ್ ವಾರ್ಷಿಕ ಕ್ರೀಡಾಕೂಟ “ಗೊಬ್ಬು “-2018 ಉದ್ಘಾಟನಾ ಸಮಾರಂಭ

0
167

ಆರೋಗ್ಯವೇ ಶ್ರೇಷ್ಠ ಸಂಪತ್ತು -ಹರೀಶ್ ಶೆಟ್ಟಿ  ಕುರ್ಕಾಲ್ 

ಪುಣೆ : ಆಧುನಿಕ ಯಾಂತ್ರೀಕೃತ ಬದುಕಿನಲ್ಲಿ ನಮ್ಮ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು  ಎಲ್ಲಕ್ಕಿಂತ ಮುಖ್ಯವಾಗಿದೆ . ಅದಕ್ಕಾಗಿ ದೈನಂದಿನ ಯೋಗ ,ವ್ಯಾಯಾಮ, ದೈಹಿಕ ಶ್ರಮ,ಕ್ರೀಡೆಗಳಲ್ಲಿ  ಪಾಲ್ಗೊಳ್ಳುವುದು ಅಗತ್ಯವಾಗಿದೆ . ಇದರಿಂದ ರೋಗರುಜಿನಗಳನ್ನು ಬಾರದಂತೆ ತಡೆಗಟ್ಟಿ ನಮ್ಮ ಆರೋಗ್ಯವಂತ ಜೀವನವನ್ನು ಹೊಂದಬಹುದಾಗಿದೆ .ಆದುದರಿಂದ ಮಾನವನಿಗೆ ಎಲ್ಲಕ್ಕಿಂತ ಅಮೂಲ್ಯವಾದ ಸಂಪತ್ತೆಂದರೆ ಅದು ಆರೋಗ್ಯವಾಗಿದೆ . ಪ್ರತಿಯೊಬ್ಬರೂ  ಜೀವನದಲ್ಲಿ ತಮ್ಮ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ತುಳುಕೂಟ ಪಿಂಪ್ರಿ ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಅಭಿಪ್ರಾಯಪಟ್ಟರು .   ಅವರು ಡಿ 16 ರಂದು ನಿಗ್ಡಿ ಯ ಮದನ್ ಲಾಲ್ ಡಿಂಗ್ರಾ ಮೈದಾನದಲ್ಲಿ ನಡೆದ ಪಿಂಪ್ರಿ ಚಿಂಚ್ವಾಡ್ ತುಳುಕೂಟದ  ವಾರ್ಷಿಕ ಕ್ರೀಡೋತ್ಸವ ಗೊಬ್ಬು -2018 ಉದ್ಘಾಟನಾ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ತುಳುಕೂಟದಿಂದ ಕಳೆದ 7 ವರ್ಷಗಳಿಂದ ತುಳುಕನ್ನಡಿಗರನ್ನು ಒಗ್ಗೂಡಿಸಿಕೊಂಡು ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದ್ದೇವೆ . ಮುಖ್ಯವಾಗಿ ನಮ್ಮ  ಮಕ್ಕಳಿಗೆ ಕ್ರೀಡೆಯ ಬಗ್ಗೆ ಒಲವು ಮೂಡಿಸುವುದೇ ನಮ್ಮ ಉದ್ದೇಶವಾಗಿದ್ದು, ಭವಿಷ್ಯದಲ್ಲಿ ನಮ್ಮ ಮಕ್ಕಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಬೇಕೆಂಬ ಹಂಬಲ ನಮ್ಮದಾಗಿದೆ .  ಹೆತ್ತವರು ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ಕ್ರೀಡಾಭ್ಯಾಸದ ಅಭಿರುಚಿಯನ್ನು ಬೆಳೆಸಬೇಕಾಗಿದೆ . ಇದು ಭವಿಷ್ಯದಲ್ಲಿ ಜೀವನದಲ್ಲಿ ಬಹಳಷ್ಟು ಉಪಯೋಗವಾಗಲಿದೆ . ಇಂದಿನ ಈ ಕ್ರೀಡಾಕೂಟ ಆಯೋಜಿಸಲು ಸಂಘದ ಪದಾಧಿಕಾರಿಗಳು ,ದಾನಿಗಳು ಸಹಕಾರ ನೀಡಿದ್ದು ಅವರೆಲ್ಲರಿಗೂ ಕೃತಜ್ಞತೆಗಳು . ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು .

 ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಿಂಪ್ರಿ ಚಿಂಚ್ವಾಡ್ ನಗರಸೇವಕರಾದ ವಿಜಯ್ ಗೋರಖ್ ಶಿಂದೆ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಪರಿಸರದ ತುಳುನಾಡ ಬಾಂಧವರು ಒಟ್ಟು ಸೇರಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ . ಇಂದಿನ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅತೀವ ಆನಂದವಾಗುತ್ತಿದೆ . ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವಲ್ಲಿ ಪ್ರಯತ್ನಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ . ಎಲ್ಲರಿಗೂ ನನ್ನ ಶುಭಕಾಮನೆಗಳು ಎಂದರು .
ವೇದಿಕೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ  ಅನೂಪ್ ಮೋರೆ ,ಪಿಂಪ್ರಿ ಚಿಂಚ್ವಾಡ್  ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ ,ಸೌತ್ ವೆಲ್ಫೇರ್ ಅಸೋಸಿಯೇಶನ್  ಪಿಂಪ್ರಿ ಚಿಂಚ್ವಾಡ್ ಇದರ  ಅಧ್ಯಕ್ಷ ಕೆ . ಪದ್ಮನಾಭ ಶೆಟ್ಟಿ ,ಮಾಜಿ ನಗರಸೇವಕ ಪ್ರಸಾದ್ ಶೆಟ್ಟಿ ,ಸಂಘದ ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ ,ಶೇಖರ್ ಚಿತ್ರಾಪು ,ಕಾರ್ಯದರ್ಶಿ ವಿನಯ್ ಶೆಟ್ಟಿ ನಿಟ್ಟೆ ,ಕೋಶಾಧಿಕಾರಿ  ಗಣೇಶ್ ಅಂಚನ್ ,ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ,ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ ,ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ  ನಿತಿನ್ ಶೆಟ್ಟಿ ನಿಟ್ಟೆ ಉಪಸ್ಥಿತರಿದ್ದರು .
      ಅತಿಥಿಗಣ್ಯರು ದೀಪ ಪ್ರಜ್ವಲಿಸಿ ,ಬಲೂನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು .ಅತಿಥಿಗಳನ್ನು ಸತ್ಕರಿಸಲಾಯಿತು. ಜಯಲಕ್ಷ್ಮಿ ಪಿ ಶೆಟ್ಟಿಯವರು ಸೇರಿದ್ದ ಸದಸ್ಯರಿಗೆ ಶಿಸ್ತಿನಿಂದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಬದ್ಧತಾ ವಚನವನ್ನು ಬೋಧಿಸಿದರು .  ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಸ್ವಾಗತಿಸಿದರು  ನೂತನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು  . ನಿತಿನ್ ಶೆಟ್ಟಿ ವಂದಿಸಿದರು .ಕಾರ್ಯಕ್ರಮದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ  ಮಹೇಶ್ ಹೆಗ್ಡೆ ಕಟ್ಟಿಂಗೇರಿಮನೆ ,ಪಿಂಪ್ರಿ ಚಿಂಚ್ವಾಡ್ ಕುಲಾಲ ಸಂಘದ ಸ್ಥಾಪಕಾಧ್ಯಕ್ಷ  ನ್ಯಾಯವಾದಿ ಅಪ್ಪು ಮೂಲ್ಯ,ಸಂಘದ ಪದಾಧಿಕಾರಿಗಳು ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ