ನವಿ ಮುಂಬಯಿ ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭ

0
396
ಸಾಂದರ್ಭಿಕ ಚಿತ್ರ
ನವಿ ಮುಂಬಯಿ :(www.kiranvarta.com)ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಹಾಗೂ ನವಿ ಮುಂಬಯಿ ಕನ್ನಡ ಸಂಘ ವಾಶಿ ಇದರ ಜಂಟಿ ಪ್ರಾಯೋಜಕತ್ವದಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನ ಪರಂಪರೆಯನ್ನು ಉಳಿಸುವ  ಬೆಳೆಸುವ ದೃಷ್ಟಿಯಿಂದ ಕಲಿಕಾಸಕ್ತರಿಗೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಮಾರ್ಚ್ 31 ರಂದು ಸಂಜೆ ಗಂಟೆ 5 ಕ್ಕೆ ಸರಿಯಾಗಿ ನವಿಮುಂಬಯಿ ಕನ್ನಡ ಸಂಘ ವಾಶಿ ಇಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆಯ ಪ್ರಸನ್ನ ಘಳಿಗೆಯಲ್ಲಿ “ಯಕ್ಷ ಶಿಕ್ಷಣ”ದ ಉದ್ಘಾಟನಾ ಸಮಾರಂಭವು ನಡೆಯಲಿದೆ .
ಪುಣೆಯ ಯಕ್ಷರಂಗದ ಹಿರಿಯ ಕಲಾವಿದ,ದಿ .ಕುರಿಯ ವಿಠಲ ಶಾಸ್ತ್ರಿಯವರ ಸೋದರಳಿಯ ,ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ಇದರ ಪ್ರಧಾನ ಕಾರ್ಯದರ್ಶಿ ,ನಾಟ್ಯಗುರು ಮದಂಗಲ್ಲು ಆನಂದ ಭಟ್ ಇವರು ಯಕ್ಷ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ . ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಡಾ . ವ್ಯಾಸರಾಯ ನಿಂಜೂರು (ಬಡಗುತಿಟ್ಟಿನ ಹೆಜ್ಜೆಗಾರಿಕೆ ಮತ್ತು ಮೇಳಗಳ  ತಿರುಗಾಟ) ಮತ್ತು ಹಿರಿಯ ಯಕ್ಷಗಾನ ಅರ್ಥಧಾರಿ ಕೆ . ಕೆ . ಶೆಟ್ಟಿ   ಭಾಗವಹಿಸಲಿದ್ದಾರೆ .
ಶಿಕ್ಷಣದ ವಿವರ 
ಚೆಂಡೆ ,ಮದ್ದಳೆ ಮತ್ತು ಭಾಗವತಿಕೆ ಯಾ ಬಗ್ಗೆ ಭಾಗವತ ಜಯಪ್ರಕಾಶ್ ನಿಡ್ವಣ್ಣಾಯ ,ತೆಂಕುತಿಟ್ಟಿನ ಹೆಜ್ಜೆಗಾರಿಕೆಯ ಬಗ್ಗೆ ವಾಸುದೇವ ಮಾರ್ನಾಡ್ ,ಬಡಗುತಿಟ್ಟಿನ ಹೆಜ್ಜೆಗಾರಿಕೆಯ ಬಗ್ಗೆ ರಮೇಶ್ ಬಿರ್ತಿ ,ಯಕ್ಷಗಾನ ಸಾಹಿತ್ಯ ,ಅರ್ಥಗಾರಿಕೆ ಮತ್ತು ಮುಖವರ್ಣಿಕೆ ಯ ಬಗ್ಗೆ ಹೆಚ್ .ಎಲ್ .ರಾವ್ ಪ್ರಶಿಕ್ಷಣ ನೀಡಲಿದ್ದಾರೆ .
ಯಕ್ಷಗಾನದ ಸಮಗ್ರ ಶಿಕ್ಷಣದ ಉದ್ದೇಶದ ಈ ಶಿಬಿರಕ್ಕೆ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ,ಯಕ್ಷಗಾನ ಕಲಾವಿದೆ ವಿದುಷಿ ಸಹನಾ ಭಾರದ್ವಾಜ್ ,ಕಲಾವಿದ ಡಾ . ಸುರೇಂದ್ರ ಕುಮಾರ್ ಹೆಗ್ಡೆ ಕಲಾವಿದ ವೈ . ವಿ . ಮಧುಸೂದನ್ ರಾವ್ ,ಎಸ್. ಕೆ .ಕುಂದರ್ ,ಸಾ . ದಯಾ ಮತ್ತು ನಿತ್ಯಾನಂದ ಕೋಟ್ಯಾನ್ ಸಹಕಾರ ನೀಡಲಿದ್ದಾರೆ .
ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭ ಹಾಗೂ ಉಚಿತವಾದ ಯಕ್ಷ ಶಿಕ್ಷಣ ಪಡೆಯುವಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕನ್ನಡಿಗರು ಹೆಸರನ್ನು ನೂಂದಾಯಿಸಿ ಪ್ರಯೋಜನ ಪಡೆದುಕೊಳ್ಳುವಂತೆ ನವಿ ಮುಂಬಯಿ ಕನ್ನಡ ಸಂಘ ಇದರ ಅಧ್ಯಕ್ಷರಾದ  ಹೆಚ್ . ಕುಟ್ಟಿ ಹಾಗೂ ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಇದರ ಅಧ್ಯಕ್ಷರಾದ ಹೆಚ್ . ಬಿ . ಎಲ್ . ರಾವ್ ವಿನಂತಿಸಿದ್ದಾರೆ . ಹೆಚ್ಚಿನ ಮಾಹಿತಿಗಾಗಿ ಹೆಚ್ . ಬಿ . ಎಲ್ . ರಾವ್ – 27880671,ಸಹನಾ ಭಾರಧ್ವಾಜ್ – 9867202236,ಅನುರಾಧಾ ರಾವ್ – 9004538750,ನವಿಮುಂಬಯಿ ಕನ್ನಡ ಸಂಘ -27653443 ನಂಬರುಗಳನ್ನು ಸಂಪರ್ಕಿಸಲು ಕೋರಲಾಗಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ