ಪುಣೆ ಬಂಟರ ಸಂಘದ ಸಂಭ್ರಮದ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ

0
257
ಅತಿಥಿಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು

ಪುಣೆ :(www.kiranvarta.com) ಪುಣೆ ಬಂಟರ ಸಂಘದ ವಾರ್ಷಿಕೋತ್ಸವ ಸಮಾರಂಭವು ಜನವರಿ 26 ರಂದು “ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ  ನಡೆಯಿತು . ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ ಬೆಟ್ಟು  ಸಂತೋಷ್  ವಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ  ,ಗೌರವಾಧ್ಯಕ್ಷ  ಜಗನ್ನಾಥ  ಬಿ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಂಡಾರಿ ಫೌಂಡೇಶನ್ ನ ಸ್ಥಾಪಕ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ,ಎಂಆರ್ ಜಿ ಗ್ರೂಪ್ ಬೆಂಗಳೂರು ಇದರ ಕಾರ್ಯಾಧ್ಯಕ್ಷರಾದ ಪ್ರಕಾಶ್  ಶೆಟ್ಟಿ, ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ  ಉಪಸ್ಥಿತರಿದ್ದರು . ಈ ಸಂದರ್ಭ ಪ್ರತೀ ವರ್ಷ ಸಮಾಜದ ಶ್ರೇಷ್ಠ ಸಾಧಕನನ್ನು ಗುರುತಿಸಿ ಕೊಡಮಾಡುವ ದಿ .ಗುಂಡೂರಾಜ್ ಎಂ  ಶೆಟ್ಟಿ ಅತ್ಯುತ್ತಮ ಸಮಾಜಸೇವಕ ಪ್ರಶಸ್ತಿ -೨೦೧೮-೧೯ನ್ನು ಎಂಆರ್ ಜಿ ಗ್ರೂಪ್ ಬೆಂಗಳೂರು ಇದರ ಕಾರ್ಯಾಧ್ಯಕ್ಷರಾದ ಪ್ರಕಾಶ್ ಶೆಟ್ಟಿಯವರಿಗೆ ಪ್ರದಾನಿಸಲಾಯಿತು .ಈ ಸಂದರ್ಭ ವಿನಯ್ ಗುಂಡೂರಾಜ್ ಶೆಟ್ಟಿ  ಉಪಸ್ಥಿತರಿದ್ದರು .  ಅತಿಥಿಗಳು ದೀಪ ಪ್ರಜ್ವಲಿಸಿ ತೆಂಗಿನ ಹಿಂಗಾರವನ್ನು ಅರಳಿಸಿ ಸಮಾರಂಭಕ್ಕೆ ಚಾಲನೆಯಿತ್ತರು .ವೇದಿಕೆಯಲ್ಲಿ  ಮುಖ್ಯ ಅತಿಥಿಗಳಾದ ಭಂಡಾರಿ ಫೌಂಡೇಶನ್ ನ ಸ್ಥಾಪಕ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ, ಎಂಆರ್ ಜಿ ಗ್ರೂಪ್ ಬೆಂಗಳೂರು ಇದರ ಕಾರ್ಯಾಧ್ಯಕ್ಷರಾದ ಪ್ರಕಾಶ್  ಶೆಟ್ಟಿ,ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ,ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ ಶೆಟ್ಟಿ ,ಅಧ್ಯಕ್ಷ  ಸಂತೋಷ್ ವಿ ಶೆಟ್ಟಿ ,ಉಪಾಧ್ಯಕ್ಷರಾದ ಸತೀಶ್ ಆರ್ ಶೆಟ್ಟಿ ಮತ್ತು ಮೋಹನ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಕೆ . ಅಜಿತ್ ಹೆಗ್ಡೆ ,ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ ,ಸಾಂಸ್ಕೃತಿಕ ಸಮಿತಿ  ಕಾರ್ಯಾಧ್ಯಕ್ಷ  ಪ್ರವೀಣ್ ಶೆಟ್ಟಿ ಪುತ್ತೂರು ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ,ಯುವ ವಿಭಾಗದ  ಕಾರ್ಯಾಧ್ಯಕ್ಷ  ಯಶ್ ರಾಜ್ ಶೆಟ್ಟಿ ,ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ಗಣೇಶ್ ಜೆ ಪೂಂಜಾ ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ ಶೆಟ್ಟಿ ,ಉತ್ತರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್ ಶೆಟ್ಟಿ  ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಅಂಬಿಕಾ ವಿ ಶೆಟ್ಟಿ ಉಪಸ್ಥಿತರಿದ್ದರು.

           ಗಣರಾಜ್ಯೋತ್ಸವ ಆಚರಣೆಯಂಗವಾಗಿ ನಿವೃತ್ತ ಭಾರತೀಯ ಸೇನೆಯ ಯೋಧ ಶ್ಯಾಮರಾಜ್ ಇ  ವಿ ಇವರನ್ನು ಸಂಘದ  ಯುವ ವಿಭಾಗದ ವತಿಯಿಂದ ವಿಶೇಷವಾಗಿ ಸಮ್ಮಾನಿಸಲಾಯಿತು .ದಿವ್ಯಾ ಎಸ್ ಶೆಟ್ಟಿ ,ಪ್ರಮೀಳಾ ಎಸ್ ಶೆಟ್ಟಿ ಮತ್ತು ಅಂಬಿಕಾ ವಿ ಶೆಟ್ಟಿ ಪ್ರಾರ್ಥಿಸಿದರು . ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು  ಸ್ವಾಗತಿಸಿದರು . ಅತಿಥಿಗಳನ್ನು ಎಲೆಅಡಿಕೆ  ನೀಡಿ ಸ್ವಾಗತಿಸಲಾಯಿತು .ಕಾಂತಿ ಸೀತಾರಾಮ ಶೆಟ್ಟಿ ಹಾಗೂ ಪತ್ರಕರ್ತ ಕಿರಣ್ ಬಿ ರೈ ಕರ್ನೂರು ಕಾರ್ಯಕ್ರಮವನ್ನು ನಿರೂಪಿಸಿದರು .ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ವಂದಿಸಿದರು . ಅಕ್ಷತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು . ರೋಹನ್ ಆರ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು .ಗೀತಾ ಆರ್ ಶೆಟ್ಟಿ  ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು .  ಅತಿಥಿಗಣ್ಯರನ್ನು ಮಹಾರಾಷ್ಟ್ರದ ಪೇಟ ತೊಡಿಸಿ ,ಶಾಲು ,ಸ್ಮರಣಿಕೆ ಫಲಪುಷ್ಪ ಗಳನ್ನು ನೀಡಿ ಸಮ್ಮಾನಿಸಲಾಯಿತು . ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸದಸ್ಯರುಗಳ ಮಕ್ಕಳಿಂದ ನೃತ್ಯ ವೈವಿದ್ಯಗಳು ,ರಾಧಾಕೃಷ್ಣ ನೃತ್ಯ ಅಕಾಡೆಮಿ ಮುಂಬಯಿ ಕಲಾವಿದರಿಂದ “ಸಮುದ್ರ ಮಂಥನ “ನೃತ್ಯರೂಪಕ ಹಾಗೂ ಮನೋರಂಜನೆಯಂಗವಾಗಿ ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ “ಪುರುಸೊತ್ತಿಜ್ಜಿ “ತುಳು ನಾಟಕ ಪ್ರದರ್ಶನಗೊಂಡಿತು .ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ,ಮಹಿಳಾ ವಿಭಾಗ ,ಯುವ ವಿಭಾಗ ,ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು . ಸಂಘದ ಮಾಜಿ ಅಧ್ಯಕ್ಷರುಗಳಾದ ಕುಶಲ್ ಹೆಗ್ಡೆ ,ಸದಾನಂದ ಕೆ ಶೆಟ್ಟಿ , ಜಯಂತ್ ಶೆಟ್ಟಿ ,ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ,ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ,ಪದಾಧಿಕಾರಿಗಳು ಮತ್ತು ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ