ಪುಣೆ ಬಂಟರ ಸಂಘ ಮಹಿಳಾ ವಿಭಾಗದಿಂದ “ವಿಶ್ವ ಮಹಿಳಾ ದಿನಾಚರಣೆ “

0
317
ಪುಣೆ :(www.kiranvarta.com) ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ಮಾ 8  ರಂದು  ಓಣಿಮಜಲು ಜಗನ್ನಾಥ  ಶೆಟ್ಟಿ ಸಾಂಸ್ಕೃತಿಕ  ಬಂಟರ ಭವನದ ಬಾಂಕ್ವೆಟ್ ಹಾಲ್ ನಲ್ಲಿ “ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು . ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಯವರ ನೇತೃತ್ವದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಸಮಾಜಬಾಂಧವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು . ಈ ಸಂದರ್ಭ  ಮನಸ್ಸಿಗೆ  ಮುದ ನೀಡುವ ಆಟಗಳನ್ನು ಆಯೋಜಿಸಲಾಗಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು .ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು .
ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಉಪಸ್ಥಿತರಿದ್ದು ಶುಭ ಹಾರೈಸಿದರು .ಸಂತೋಷ್ ಶೆಟ್ಟಿಯವರನ್ನು  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿಯವರು ಪುಷ್ಪಗಫುಚ್ಚ ನೀಡಿ ಗೌರವಿಸಿದರು . ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ,ಜೊತೆ  ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು ,ಜೊತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ,ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಸಂಧ್ಯಾ ವಿ ಶೆಟ್ಟಿ ಉಪಸ್ಥಿತರಿದ್ದರು . ಮಹಿಳಾ ವಿಭಾಗದ  ಕಾರ್ಯದರ್ಶಿ ಸುಚಿತ್ರಾ ಶ್ರೀನಿವಾಸ್ ಶೆಟ್ಟಿ  ,ಕೋಶಾಧಿಕಾರಿ  ಶಮ್ಮಿ ಅಜಿತ್ ಹೆಗ್ಡೆ   ,ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷೆ ದಿವ್ಯಾ ಸಂತೋಷ್ ಶೆಟ್ಟಿ ,ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ಸಾರಿಕಾ ಚಂದ್ರಹಾಸ ಶೆಟ್ಟಿ  ,ಶಿಕ್ಷಣ  ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷೆ  ಸಂಧ್ಯಾ ರಾಮಕೃಷ್ಣ ಶೆಟ್ಟಿ  ,ನೀನಾ ಬಾಲಕೃಷ್ಣ ಶೆಟ್ಟಿ ,ನಯನಾ ಜಯ ಶೆಟ್ಟಿ ,ನಿವೇದಿತಾ ಸುಧಾಕರ್ ಶೆಟ್ಟಿ ,ವಿನಯಾ ಉಮಾನಾಥ ಶೆಟ್ಟಿ ಹಾಗೂ ಗೀತಾ ಜಯ ಶೆಟ್ಟಿ , ವೀಣಾ ಪ್ರಶಾಂತ್ ಶೆಟ್ಟಿ ,ಗೀತಾ ರತ್ನಾಕರ್ ಶೆಟ್ಟಿ , ಆಶಾ ಪ್ರವೀಣ್ ಶೆಟ್ಟಿ .ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಪ್ರಮೀಳಾ ಎಸ್ ಶೆಟ್ಟಿ ,ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ ಶೆಟ್ಟಿ  ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ