ಪುಣೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

0
241

ಪುಣೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ 

ಪುಣೆ :(www.kiranvarta.com) ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಫೆ 19 ರಂದು ಹೋಟೆಲ್ ನ್ಯೂ ಸಾಗರ್ ವಾರ್ಜೆ ಇಲ್ಲಿ  ಜಮ್ಮು ಕಾಶ್ಮೀರದ  ಪುಲ್ವಾಮದಲ್ಲಿ  ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾಗಿ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಸಿ ಆರ್ ಪಿ ಎಫ್ ಯೋಧರಿಗಾಗಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು . ಸಂಘದ ಅಧ್ಯಕ್ಷರಾದ ಪಾಂಗಾಳ ವಿಶ್ವನಾಥ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ  ನಾಟ್ಯಗುರು ಮದಂಗಲ್ಲು ಆನಂದ ಭಟ್ ,ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು ,ಕಿರಣ್ ವಾರ್ತಾ ಪ್ರಧಾನ ಸಂಪಾದಕ ಕಿರಣ್ ಬಿ ರೈ ಕರ್ನೂರು ಇವರುಗಳು ಉಪಸ್ಥಿತರಿದ್ದು ದೀಪ ಹಚ್ಚಿಟ್ಟು ಹುತಾತ್ಮರಿಗೆ ಪುಷ್ಪನಮನಗಳನ್ನು ಸಲ್ಲಿಸಿದರು .
      ಈ ಸಂದರ್ಭ ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಮಾತನಾಡಿ  ಫೆ ೧೪ ರಂದು ಮೋಸದಿಂದ ನಮ್ಮ ಸೈನಿಕರನ್ನು ಬಲಿಪಡೆದ ನರರಾಕ್ಷಸರ ಕೃತ್ಯವನ್ನು ದೇಶವಾಸಿಗಳೆಲ್ಲರೂ ಯಾವುದೇ ಭೇದಭಾವ ಮಾಡದೆ ಖಂಡಿಸಲೇಬೇಕಾಗಿದೆ . ಹುತಾತ್ಮರಾದ ನಮ್ಮ ಹೆಮ್ಮೆಯ ಸೈನಿಕರ ಕುಟುಂಬದೊಂದಿಗೆ ನಾವೆಲ್ಲರೂ ದುಃಖದ ಘಳಿಗೆಯಲ್ಲಿದ್ದೇವೆ .  ಇಂತಹ ಕೃತ್ಯಗಳು ಇನ್ನೆಂದೂ ನಡೆಯದಿರಲೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಾ ಅಗಲಿದ ವೀರಯೋಧರ ಆತ್ಮಗಳಿಗೆ ಭಗವಂತ ಚಿರಶಾಂತಿ ನೀಡಲಿ ಎಂದು ಎರಡು ನಿಮಿಷಗಳ  ಮೌನಪ್ರಾರ್ಥನೆಯನ್ನು ಸಲ್ಲಿಸೋಣ . ಇದು ದೇಶದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುತ್ತೇನೆ ಎಂದರು .
     ನಾಟ್ಯಗುರು ಮದಂಗಲ್ಲು ಆನಂದ ಭಟ್ ಮಾತನಾಡಿ  ಇಂದು ನಾವು ನೆಮ್ಮದಿಯಿಂದ ದೇಶದಲ್ಲಿ ಯಾವುದೇ ಭಯವಿಲ್ಲದೆ ಬದುಕಲು ನಮ್ಮ ದೇಶರಕ್ಷಣೆ ಹೊತ್ತ ಸೈನಿಕರೇ ಕಾರಣ . ಅವರು  ಇಂದು ಭಯೋತ್ಪಾದಕರ ಕುಕೃತ್ಯಕ್ಕೆ ಬಲಿಯಾಗಿದ್ದು ನಮಗೆಲ್ಲರಿಗೂ ಅತೀವ ನೋವಿನ ಸಂಗತಿಯಾಗಿದೆ . ಅವರ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಸಮಾನ ದುಃಖಿಗಳಾಗಿದ್ದೇವೆ . ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ . ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ . ನಮ್ಮ ದೇಶದ ಪ್ರಧಾನಮಂತ್ರಿಗಳು ಮಾಡುವ ಉತ್ತಮ ಕಾರ್ಯಗಳಿಗೆ ನಾವೆಲ್ಲರೂ ಬೆಂಬಲಿಸೋಣ ಎಂದರು . ಈ ಸಂದರ್ಭ ಸಂಘದ ಕಲಾವಿದರಾದ ವಾಸು ಕುಲಾಲ್ ವಿಟ್ಲ ,ಸುಕೇಶ್ ಶೆಟ್ಟಿ ಎಣ್ಣೆಹೊಳೆ ,ನಯನಾ ಸಿ ಶೆಟ್ಟಿ ,ಗೀತಾ ಡಿ ಪೂಜಾರಿ ,ಸರಸ್ವತಿ ಸಿ ಕುಲಾಲ್ ,ಸಹನಾ ಸಿ ಕುಲಾಲ್,ಪ್ರತೀಕ್ಷಾ ಡಿ  ಪೂಜಾರಿ ,ರೀಶ್ಮಾ ಆರ್ ಶೆಟ್ಟಿ ಸದಸ್ಯರಾದ  ಸಾಧು ಶೆಟ್ಟಿ ,ನಿತಿನ್ ಶೆಟ್ಟಿ ,ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಪುಷ್ಪನಮಾನಗಳನ್ನು ಸಲ್ಲಿಸಿದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ