ಪುಣೆ ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ ದಾಸಸಾಹಿತ್ಯ ಪರೀಕ್ಷೆ

2
160
ದಾಸ ಸಾಹಿತ್ಯ ಜೀವನಾನುಭವದ ಸಾರ -ಗೋಪಾಲ ಕಟಗೇರಿ 
ಪುಣೆ :ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಕೃಪಾರ್ಶಿವಾದದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪುಣೆ,ಪ್ರಿಂಪ್ರಿ-ಚಿಂಚವಾಡ ಕೇಂದ್ರವು ಜನೇವರಿ ೧೩ರಂದು ದಾಸ ಹಾಗೂ ದಾಸಶ್ರೀ ವರ್ಗದ ಷಾಣ್ಮಾಸಿಕ ಪರಿಕ್ಷೇ ನಡೆಸಲಾಯಿತು. ಶ್ರೀ ವರದೇಂದ್ರ ಮಠ ಪುಣೆ ಹಾಗೂ ರಮೇಶ ಕಾತರಕಿ ಅವರ ನಿವಾಸ ಚಿಂಚ್ವಾಡ್  ಈ ಎರಡು ‌ಕೇಂದ್ರಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚು ಜನ ಪರಿಕ್ಷೇ ಬರೆದರು.
ಪಂ.ರುಚಿರಾಚಾರ ಬುರ್ಲಿ , ವರದೇಂದ್ರ ಮಠದ ವ್ಯವಸ್ಥಾಪಕರಾದ ಪಂ.ವೇಣುಗೋಪಾಲ ಆಚಾರ ಹಾಗೂ ಹಿರಿಯ ಜ್ಞಾನಿಗಳಾದ ಸಂಗೂರಾಮ ಅವರು ಪ್ರಶ್ನೆ ಪತ್ರಿಕೆಯನ್ನು ಉದ್ಘಾಟಿಸಿದರು.
     ಪುಣೆ ಕೇಂದ್ರದ ವ್ಯವಸ್ಥಾಪಕರಾದ ಗೋಪಾಲ‌ ಕಟಗೇರಿ‌ ಅವರು‌ ಮಾತನಾಡಿ ದಾಸ ಸಾಹಿತ್ಯವು ಜೀವನಾನುಭವದ  ಸಾಹಿತ್ಯವಾಗಿದೆ. ದಾಸ ಸಾಹಿತ್ಯದಿಂದ ಭಕ್ತಿ ಮಾರ್ಗದಿಂದ  ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದಾಗಿದೆ . ನಾವೆಲ್ಲರೂ ಗುರುಗಳ ದಾಸರಾದರೆ ಮಾತ್ರ ಭಗವಂತನು ಒಲಿಯುತ್ತಾನೆ ಎಂದರು .
ವಿದ್ಯಾಲಯದ ಕಾರ್ಯಕರ್ತರಾದ ವಿಣಾ ಕಾವೇರಿ, ವಿಜಯ ಖಾಸನಿಸ, ರಾಮಚಂದ್ರ ಸವದತ್ತಿ. ಯಜುರ್ವೇದಿ, ಪೂಜಾರ,  ಹಾಗೂ ರಮಾ ಕಾತರಕಿ ಎಲ್ಲರೂ ಯಶಸ್ವಿಯಾಗಿ ಪರಿಕ್ಷೇ ನಡೆಯಲು ಸಹಕಾರ ಮಾಡಿದರು.

2 ಕಾಮೆಂಟ್ಗಳು

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ