ಬಂಟರ ಸಂಘ ಪುಣೆ “ಬಿಸು ಪರ್ಬ “ದಾನಿಗಳ ದಿನಾಚರಣೆ ,ವಿಶ್ವ ಬಂಟರ ದಿನಾಚರಣೆ ,ಕಲ್ಪವೃಕ್ಷ ತ್ರೈಮಾಸಿಕ ಬಿಡುಗಡೆ -ಕಿರಣ್ ವಾರ್ತಾ

0
159
ಪುಣೆ ಬಂಟರ ಭವನದಲ್ಲಿ ತುಳುನಾಡ ಸಂಸ್ಕೃತಿ ಅನಾವರಣಗೊಂಡಿದೆ – ಪ್ರಕಾಶ್ ಎಲ್ ಶೆಟ್ಟಿ 
(ಚಿತ್ರ ,ವರದಿ :ಕಿರಣ್ ಬಿ ರೈ ಕರ್ನೂರು -ಕಿರಣ್ ವಾರ್ತಾ )
ಪುಣೆ :ಇಂದು ವಿಶ್ವದಾದ್ಯಂತ ನೂರಾರು ಬಂಟರ ಸಂಘಗಳಿದ್ದು ಸಮಾಜದ ಸೇವಾ ಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ . ಸುಮಾರು ನೂರು ವರ್ಷಗಳ ಇತಿಹಾಸವನ್ನು ಅವಲೋಕಿಸಿದರೆ ತುಳುನಾಡೊಂದನ್ನು ಬಿಟ್ಟರೆ ಇನ್ನೆಲ್ಲಿಯೂ ಪುಣೆಯಂತಹ ಸುಂದರವಾದ ,ಭವ್ಯವಾದ  ಭವನ ಇನ್ನೊಂದಿಲ್ಲ ಎಂಬುದು ನನ್ನ  ಅಭಿಪ್ರಾಯವಾಗಿದೆ .ಹಿರಿಯರು ಪಟ್ಟ ಶ್ರಮ , ಸ್ಥಾಪಕರ ದೂರದೃಷ್ಟಿ ,ಸಂಘದ  ಅಭಿವೃದ್ಧಿಗೆ ಶ್ರಮಿಸಿದ  ನೂರಾರು ಸಮಾಜಬಾಂಧವರ  ಪರಿಶ್ರಮ ಇಲ್ಲಿ ಫಲ ನೀಡಿದೆ .ಸಂತೋಷ್ ಶೆಟ್ಟಿಯವರಂತಹ ಯುವ ನೇತೃತ್ವಕ್ಕೆ ಅವಕಾಶ ನೀಡಿದರೆ ಸಂಘದ ಬೆಳವಣಿಗೆ ಹೇಗಾಗುತ್ತದೆ ಎಂಬುದಕ್ಕೆ ಪುಣೆ ಬಂಟರ ಸಂಘವು ಅತ್ಯುತ್ತಮ ಉದಾಹರಣೆಯಾಗಿದೆ . ಇಂದು ಬಿಸುಪರ್ಬದ ಈ ಸುದಿನ ಭವನವನ್ನು ಪ್ರವೇಶಿಸುವಾಗಲೇ ನಮ್ಮ ತುಳುನಾಡಿನಲ್ಲಿ ಹಿರಿಯರ ಗುತ್ತಿನ ಮನೆಯ ಚಾವಡಿಯನ್ನು ಪ್ರವೇಶಿಸಿದ ಅನುಭವವಾಯಿತು . ತುಳುನಾಡಿನ ಸಂಸ್ಕೃತಿಯೇ ಇಲ್ಲಿ ಅನಾವರಣಗೊಂಡ ಅನುಭವವಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಏಜನ್ಸಿ (ಎನ್ ಐ ಎ )ಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಅಭಿಪ್ರಾಯಪಟ್ಟರು .
ಅವರು ಎ 14 ರಂದು ಪುಣೆ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ವತಿಯಿಂದ ನಡೆದ ಬಿಸು ಪರ್ಬ ,ದಾನಿಗಳ ದಿನಾಚರಣೆ ,ವಿಶ್ವ ಬಂಟರ ದಿನಾಚರಣೆ ,ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಸಂಘದ ಮುಖವಾಣಿಯಾಗಿ “ಕಲ್ಪವೃಕ್ಷ “ತ್ರೈಮಾಸಿಕ ಪತ್ರಿಕೆ ಆರಂಭಗೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ . ಸಂಘದ ಕಾರ್ಯಚಟುವಟಿಕೆಗಳ ಮಾಹಿತಿಗಳು ಎಲ್ಲಾ ಸಮಾಜಬಾಂಧವರಿಗೂ ತಲುಪುವಂತಾಗಲು ಇದೊಂದು ಅತ್ಯುತ್ತಮ ಮಾಧ್ಯಮವಾಗಿದೆ , ಮುಂದೆ ಇದು ಮಾಸಿಕ ಪತ್ರಿಕೆಯಾಗಿ ಪ್ರಕಟಗೊಳ್ಳುವಂತಾಗಲಿ ಎಂದರು .
ಇನ್ನೋರ್ವ ಅತಿಥಿಗಳಾದ ಮುಂಬಯಿಯ ಖ್ಯಾತ ಮನೋವೈದ್ಯರಾದ ಡಾ . ಹರೀಶ್ ಶೆಟ್ಟಿ ಯವರು ತನ್ನ ಹಾಸ್ಯಮಿಶ್ರಿತ ಶೈಲಿಯಲ್ಲಿ ಮಾತನಾಡಿ ಜೀವನದಲ್ಲಿ ನಾವು, ನಮ್ಮ ಮನೆಯಲ್ಲಿ ಅಥವಾ ಇತರರೊಂದಿಗೆ ಸಕಾರಾತ್ಮಕ ಚಿಂತನೆಗಳೊಂದಿಗೆ ವ್ಯವಹರಿಸುವ ವಿಧಾನ ,ಸರಿ ತಪ್ಪುಗಳ ಉದಾಹರಣೆ ,ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನವನ್ನು ಯಾವ ರೀತಿ ನಿಭಾಯಿಸಬಹುದು ಎಂಬುದನ್ನು ಸ್ಲೈಡ್ ಶೋ ಮೂಲಕ ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿದರು .ನಮ್ಮ ದೈನಂದಿನ ಜೀವನದಲ್ಲಿ ಸುಖ, ಸಂತೋಷದಿಂದಿರಲು ಉಪಯುಕ್ತ ಸಲಹೆಗಳನ್ನು ನೀಡಿದರು . ಸಂಘದ ಬಿಸುಪರ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಬಹಳ ಆನಂದವಾಗಿದೆ. ಸಂಘದ ಮೂಲಕ ಸಮಾಜಬಾಂಧವರ ಆಶೋತ್ತರಗಳು ಈಡೇರಲಿ ಎಂದರು .
ಅತಿಥಿಗಳಾಗಿ ಉಪಸ್ಥಿತರಿದ್ದ ಕೊಲ್ಲಾಪುರ ತುಳುಕೂಟದ ಸ್ಥಾಪಕಾಧ್ಯಕ್ಷರಾದ ತ್ಯಾಗರಾಜ್ ಶೆಟ್ಟಿಯವರು ಮಾತನಾಡಿ ಇಂದು ಪುಣೆ ಬಂಟರ ಸಂಘದ ಭವ್ಯವಾದ ಭವನದಲ್ಲಿ ಅತ್ಯುತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಅಭಿಮಾನವೆನಿಸುವುತ್ತಿದೆ . ಸಂತೋಷ್ ಶೆಟ್ಟಿಯವರ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ಭವನ ನಿಜಕ್ಕೂ ಅದ್ಭುತವಾಗಿದ್ದು. ನಮ್ಮ ಸಂಘದ ಮೂಲಕ ಈ ವರ್ಷದ ಸಾಧಕ ಪುರಸ್ಕಾರವನ್ನು ಸಂತೋಷ್ ಶೆಟ್ಟಿಯವರಿಗೆ ನೀಡಿರುವುದಕ್ಕೆ ಸಾರ್ಥಕವಾಗಿದೆ ಎನಿಸುತ್ತದೆ . ನಾವು ಸಂಘದ ಕಾರ್ಯದಲ್ಲಿ ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ . ನಮ್ಮ ಸಂಸ್ಕೃತಿ ,ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯ ಅಭಿನಂದನೀಯವಾಗಿದೆ ಎಂದರು .
ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಮಾತನಾಡಿ ನಮ್ಮ ಸಂಘದ ಭವನ ಲೋಕಾರ್ಪಣೆಗೊಂಡು ವರ್ಷಾಚರಣೆಯ ಸಂದರ್ಭ ಭವನದ ದಾನಿಗಳನ್ನು ನೆನಪಿಸುವ ದಾನಿಗಳ ದಿನಾಚರಣೆ , ನಮ್ಮ ಧಾರ್ಮಿಕ ನಂಬಿಕೆಗಳು ,ಆಚಾರವಿಚಾರಗಳನ್ನು ಅನುಸರಿಸಿಕೊಂಡು ಬಿಸು ಪರ್ಬದ ಕಾರ್ಯಕ್ರಮವನ್ನೂ ಆಚರಿಸುತ್ತಿದ್ದೇವೆ , ಅದರೊಂದಿಗೆ ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆಗೆ ಚಾಲನೆ ಇಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ವಕವಾಗಿ ಸಂಘದ ಮೂಲಕ ಆಚರಿಸುತ್ತಿರುವುದಕ್ಕೆ ಅಭಿಮಾನವೆನಿಸುತ್ತದೆ . ಸಂಘದ ಸಮಾಜಮುಖಿ ಚಿಂತನೆಗಳ ಉಪಕ್ರಮವಾಗಿ “ಕಲ್ಪವೃಕ್ಷ “ಸೇವಾ ಯೋಜನೆಯನ್ನು ಈಗಾಗಲೇ ಆರಂಭಿಸಲಾಗಿದ್ದು ಶಿಕ್ಷಣ ,ಆರೋಗ್ಯ ,ಕ್ರೀಡೆ ,ಆಶ್ರಯದಂತಹ ಸೇವಾಕಾರ್ಯಗಳನ್ನು ಸಮಾಜಬಾಂಧವರಿಗೆ ನಿಜಾರ್ಥದಲ್ಲಿ ತಲುಪಿಸುವ ಉದ್ದೇಶ ನಮ್ಮದಾಗಿದ್ದು ಈಗಾಗಲೇ ದಾನಿಗಳು ಈ ಕಾರ್ಯಗಳಿಗೆ ದೇಣಿಗೆ ನೀಡಿ ಬೆಂಬಲಿಸಿರುವುದಕ್ಕೆ ಅವರನ್ನು ವಿಶೇಷವಾಗಿ ಅಭಿನಂದಿಸುತ್ತಿದ್ದೇನೆ . ಅಂತೆಯೇ ಸಮಾಜದ ವಿವಿಧ ಕ್ಷೇತ್ರದ ಸಾಧಕರ ಸಾಧನೆಗಳನ್ನು ಗುರುತಿಸಿ “ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ”ಯನ್ನು ನೀಡುತ್ತಿರುವುದು ನಮ್ಮ ಉದ್ದೇಶಿತ ಕಾರ್ಯಗಳಲ್ಲಿ ಒಂದಾಗಿದ್ದು ಭವಿಷ್ಯದಲ್ಲಿ ಇನ್ನಷ್ಟು ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಸಂಘದಿಂದ ನಡೆಯಲಿದೆ . ಭವಿಷ್ಯದಲ್ಲಿ ಸಂಘದ ಮೂಲಕ ಸಮಾಜಬಾಂಧವರ ಆಶೋತ್ತರಗಳಿಗೆ ಸ್ಪಂದಿಸುವ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುವುದು . ಸಮಾಜಬಾಂಧವರೆಲ್ಲರ ಪ್ರೋತ್ಸಾಹ ಅಗತ್ಯ ಎಂದರು .

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ  ಇನ್ನ ಕುರ್ಕಿಲ್ ಬೆಟ್ಟು ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ,ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ ,ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ ,ಮೋಹನ್  ಶೆಟ್ಟಿ ,ಕಲ್ಪವೃಕ್ಷ ತ್ರೈಮಾಸಿಕ  ಪತ್ರಿಕೆಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ,ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ  ಶೆಟ್ಟಿ ,ಯುವ ವಿಭಾಗದ ಕಾರ್ಯಾಧ್ಯಕ್ಷ  ಯಶ್ ರಾಜ್ ಶೆಟ್ಟಿ ,ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ ಶೆಟ್ಟಿ  ಉಪಸ್ಥಿತರಿದ್ದರು .  ಸಂಘದ ಮುಖವಾಣಿ ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆ ಅತಿಥಿಗಣ್ಯರ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಬೆಳಗ್ಗೆ  ಭವನದ ಉದ್ಘಾಟನೆಗೊಂಡು ವರ್ಷಾಚರಣೆಯಂಗವಾಗಿ ವೇದಮೂರ್ತಿ ಓಂಕಾರ್ ಭಟ್ ನೇತೃತ್ವದಲ್ಲಿ ಗಣಪತಿ ಹೋಮ ,ಸತ್ಯನಾರಾಯಣ ದೇವರ ಮಹಾಪೂಜೆ ,ನಿತ್ಯಾನಂದ ದೇವರ ಅಭಿಷೇಕ ,ಸಾಯಿಬಾಬಾರ ಅಭಿಷೇಕ , ಮಹಾಪೂಜೆ ನಡೆಯಿತು . ತುಳುನಾಡಿನ ಸಂಪ್ರದಾಯ ಪ್ರಕಾರವಾಗಿ ಬಿಸು ಕಣಿ  ಪೂಜೆಯನ್ನು ನಡೆಸಲಾಯಿತು . ಭವನದ ಆವರಣದಲ್ಲಿ ಅತಿಥಿಗಣ್ಯರು  ಧ್ವಜಾವರೋಹಣ ನೆರವೇರಿಸಿದರು .  ಶಿವಾಜಿಯ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು.  ಅತಿಥಿಗಣ್ಯರ ಹಸ್ತದಿಂದ ಭವನದಲ್ಲಿ  ಅಡುಗೆ ಕೋಣೆ ಹಾಗೂ ತಳಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು .
.ಕಾರ್ಯಕ್ರಮದಂಗವಾಗಿ ಸದಸ್ಯರಿಂದ ನೃತ್ಯ ಪ್ರದರ್ಶನಗಳು ,ಎರ್ಮಾಳ್ ಹರೀಶ್ ಶೆಟ್ಟಿಯವರಿಂದ ಗಾಯನ ನಡೆಯಿತು . ಅಧ್ಯಕ್ಷ ಸಂತೋಷ್ ಶೆಟ್ಟಿಯವರ ನೇತೃತ್ವದಲ್ಲಿ  ದೈವದ ಅಭಯ ಪ್ರಾತ್ಯಕ್ಷಿಕೆ  ಭಕ್ತಿ ಪ್ರಧಾನವಾಗಿ ನಡೆಯಿತು . ಮದ್ಯಾಹ್ನ ತುಳುನಾಡಿನ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು .ಕಾರ್ಯಕ್ರಮವನ್ನು ಪತ್ರಕರ್ತ ಕಿರಣ್ ಬಿ ರೈ ಕರ್ನೂರು ,ಕಾಂತಿ ಸೀತಾರಾಮ ಶೆಟ್ಟಿ ಮತ್ತು ಅಕ್ಷತಾ ಸುಜಿತ್ ಶೆಟ್ಟಿ ನಿರೂಪಿಸಿದರು . ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿ ,ಜಯಂತ್ ಶೆಟ್ಟಿ ,ಸೀತಾರಾಮ ಶೆಟ್ಟಿ ,ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ,ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷರಾದ ಆನಂದ್ ಶೆಟ್ಟಿ ಮಿಯಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು . ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು . ಸಂಘದ ಪದಾಧಿಕಾರಿಗಳು ,ಮಹಿಳಾ ವಿಭಾಗ ,ಯುವ ವಿಭಾಗ ,ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ