ಬಂಟರ ಸಂಘ ಪುಣೆ ಶಿವಾಜಿ ಜಯಂತಿ ಆಚರಣೆ

0
268
ಪುಣೆ :(www.kiranvarta.com)ಬಂಟರ ಸಂಘದ ವತಿಯಿಂದ ಫೆ ೧೯ ರಂದು ಬಾಣೇರ್ ನಲ್ಲಿರುವ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ ಬಂಟರ ಭವನದ ಆವರಣದಲ್ಲಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು . ಭವನದ ಆವರಣದಲ್ಲಿರುವ  ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಲಿನ ಅಭಿಷೇಕವನ್ನು ಮಾಡಿ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರು ಹಾರಾರ್ಪಣೆ ಮಾಡುವ ಮೂಲಕ  ಶಿವಾಜಿ ಜಯಂತಿಯನ್ನು ಆಚರಿಸಲಾಯಿತು .
 ಈ ಸಂದರ್ಭ ಸಂಘದ ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು ,ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ ,ಯುವ ವಿಭಾಗದ ಕೋಶಾಧಿಕಾರಿ ವಿಶಾಲ್ ಶೆಟ್ಟಿ ,ಉಪಕಾರ್ಯಧ್ಯಕ್ಷರಾದ ಉದಯ್ ಶೆಟ್ಟಿ ಮತ್ತು ಪ್ರಫುಲ್ ಶೆಟ್ಟಿ ,ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಅಕ್ಷಯ್ ಶೆಟ್ಟಿ , ಸದಸ್ಯರಾದ ಧೀರಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ