ಯಾವ ಪುರುಷಾರ್ಥಕ್ಕಾಗಿ ಮುಂಬೈ ಬಂಟರ ಸಂಘದ ಸ್ಪರ್ಧೆಗಳು…?

0
3370
"ತ್ರಿಶಾ'ಳಿಗೆ ನೀಡಲಾದ ಸ್ಮರಣಿಕೆ

ಯಾವ ಪುರುಷಾರ್ಥಕ್ಕಾಗಿ ಮುಂಬೈ ಬಂಟರ ಸಂಘದ ಸ್ಪರ್ಧೆಗಳು…?

(ಲೇಖನ :ಡಾ.ದಿನೇಶ್ ಶೆಟ್ಟಿ , ರೆಂಜಾಳ,ಮುಂಬಯಿ )
 ಬಂಟರ ಸಂಘ ಮುಂಬೈ ಪ್ರತಿವರ್ಷ ಹಲವಾರು ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಬಹಳ ಸಂತೋಷದ ವಿಷಯ. ಪ್ರತಿ ಸ್ಪರ್ಧೆಗಳು ನಡೆದಾಗಲೂ ಮರುದಿವಸ  ಪತ್ರಿಕಾಲಯಕ್ಕೆ ಪಾರ್ಶ್ಯಾಲಿಟಿ ಎಂಬ  ದೂರನ್ನು ಹೊತ್ತ ಒಂದಷ್ಟು ಪತ್ರಗಳು, ಫೊನ್ ಕರೆಗಳು ಬರುತ್ತಿದ್ದವು.
ಇದರ ಹಿಂದಿನ ಮರ್ಮವನ್ನು ಅರಿಯಲು  ಫೆ. 2 ರಂದು ನಡೆದ ಚಿಣ್ಣರ ಚಿಲಿಪಿಲಿ ಫ್ಯಾಷನ್ ಶೊ ಸ್ಫರ್ಧೆಯಲ್ಲಿ ಒಲ್ಲದ ಮನಸಿನಿಂದ ನನ್ನ ಸೊಸೆಯನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ  ಮಾಡಿದೆ. ಇದಕ್ಕೆ ನನ್ನ ಸ್ನೇಹಿತರು ಮತ್ತು ಸಂಘದ ಹಿಂದಿನ ಹಲವು ಸ್ಪರ್ಧೆಗಳಲ್ಲಿ  ಭಾಗವಹಿಸಿ ಪಾರ್ಶ್ಯಾಲಿಟಿ ಎಂಬ ಗುಮ್ಮಕ್ಕೆ ತುತ್ತಾದ ಹಲವಾರು ಮಂದಿ ಕೈ ಜೋಡಿಸಿದರು.
ಎಲ್ಲರ ಸಹಕಾರದಿಂದ ಸ್ಪರ್ಧೆಯ ನಿಯಮದಂತೆ ಆನ್ ಲೈನ್ ಮುಖಾಂತರ ಅತಿ ಹೆಚ್ಚು ಲೈಕ್ ಪಡೆಯುವಲ್ಲಿ ಆ ಮಗು ಯಶಸ್ವಿಯಾಗಿದ್ದಳು.  ಆದರೆ ಕೊನೆಯ ಹಂತದಲ್ಲಿ ಸ್ಫರ್ಧೆಯ ಆನ್ ಲೈನ್ ಲೈಕ್ ನ್ನು ಕಾರಣಾಂತರದಿಂದ ಎಂಬ ನೆಪವೊಡ್ಡಿ ಆಯೋಜಕರು ಕೈಬಿಟ್ಟರು. ಅದರಲ್ಲೂ ಅವರಿಗೆ ಬೇಕಾದವರ ಮಕ್ಕಳಿರಲಿಲ್ಲವೋ ಏನೋ. ಇರಲಿ ಬಿಡಿ ಎಂದು ಅದಕ್ಕೂ ಸುಮ್ಮನಾಗಿ ಸ್ಪರ್ಧೆಯಲ್ಲಿ ಮುಂದುವರಿಯುವಂತೆ ನಾವು ಪ್ರೋತ್ಸಾಹಿಸಿದೆವು.
 ಸ್ಪರ್ಧೆಯ ದಿನ ಅಂತಿಮ ಹಂತದ ತರಬೇತಿ ಶಿಬಿರದ ಸಂದರ್ಭದಲ್ಲಿ ಅವಳ ಹೆಸರನ್ನು ಕೈಬಿಡಲಾಗಿತ್ತು ಸ್ಪರ್ಧಿಗಳ ಪಟ್ಟಿಯಲ್ಲಿ ಅವಳ ಹೆಸರೇ ಇಲ್ಲದಷ್ಟು negelegency? ಅವಳಿಗೆ ಕೊಟ್ಟ ಮೊಮೆಂಟೋದಲ್ಲಿ ಹೆಸರೂ ಇಲ್ಲ. ಹಳೆಯದಾದ ಏನೂ ಬರೆಯದೇ ಇದ್ದ ಮೊಮೆಂಟೋ ಇಲ್ಲಿ ಹಾಕಿರುವೆ. ತಾವೇ ನೋಡಿ
ತಪ್ಪು ಯಾರದ್ದೆಂದು  ಯಾರಲ್ಲಿ ಕೇಳಬೇಕು?. ಸ್ಪರ್ಧೆಯಲ್ಲಿ  ತೀರ್ಪುಗಾರರಾಗಿ ಸಹಕರಿಸಿದವರಲ್ಲಿ ವಿಚಾರಿಸಿದಾಗಲೂ ಅವರಿಂದ ಉತ್ತಮ ಪ್ರತಿಕ್ರಿಯೆ ದೊರೆತಾಗ ನನಗೆ ಮತ್ತಷ್ಟು ದು:ಖವಾದದ್ದು ಸಹಜ. ಅವರೆಲ್ಲರೂ ಈ ಮಗುವಿನಲ್ಲಿ ಅಂತಿಮ ಸುತ್ತಿಗೆ ಬರುವ ಎಲ್ಲ ಲಕ್ಷಣಗಳೂ ಇದ್ದವು. ಅವಳು ಆಯ್ಕೆಯಾಗದಿರುವುದು ನಮಗೂ ಆಶ್ಚರ್ಯ ತಂದಿದೆ ಎಂದಿದ್ದಾರೆ. ಸೇರಿದ್ದ ಸಭಿಕರಲ್ಲಿ ಕೆಲವರು ಇದೇ  ಮಾತನ್ನು ಆಡಿದ್ದರು.
ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕೋ ಅಥವಾ ಈ ರೀತಿ ಎಳವೆಯಲ್ಲಿ ಚಿಗುರುವ ಮುನ್ನ ಅವರಲ್ಲಿನ ಆತ್ಮವಿಶ್ವಾಸವನ್ನು ಮುರುಟಿಹಾಕಬೇಕೋ…ತಾವೇ ತಿಳಿಸಿ.
*ತೀರ್ಪನ್ನು ಪ್ರಭಾವಿ ಮೈಕಾಸುರರು ಬದಲಾಯಿಸುತ್ತಾರೆ ಎನ್ನುವುದು ಈ ಸಂಸ್ಥೆಯಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಸಂಗತಿ.
ಆ ಹಕ್ಕನ್ನು ಅವರಿಗೆ ಕೊಟ್ಟವರಾರು? ಸಂಘದ ಅಧ್ಯಕ್ಷರೇ? ಆಯೋಜಕರೇ ಅಥವಾ ತನ್ನೊಳಗಿನ ಸರ್ವಾಧಿಕಾರವೇ? ನಮ್ಮವರು ಪ್ರತಿ ಸ್ಪರ್ಧೆಯಾದಾಗಲೂ ನೋವಿನಿಂದ ಮರಳುತ್ತಾರೆಯೇ ಹೊರತೂ ಯಾರೂ ಬಾಯಿ ಬಿಡುವುದಿಲ್ಲ. ಯಾಕೆ? ಭಯವಿರಬಹುದೇ?.
ಬಂಟರಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿದ್ದಾರೆ. ಆದರೆ ಇಲ್ಲಿ ಅಂತಹ ಪ್ರತಿಭೆಗಳಿಗೆ ಅವಕಾಶ ಸಿಗುವುದು ವಿರಳವಾಗಿದೆ. ಸ್ಪರ್ಧೆಯ ಮೂಲಕವಾದರೂ ಪ್ರತಿಭೆ ಹೊರ ತರೋಣವೆಂದರೆ ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತವೆ. 
ಮಕ್ಕಳನ್ನು ಬೆಳೆಸುವ ಬದಲಿಗೆ ಮನಸ್ಸಿಗೆ ನೋವನ್ನುಂಟು ಮಾಡುವ ಇಂತಹ ಸ್ಪರ್ಧೆಗಳು ಬೇಕೇ?. ಮುಗ್ಧ ಮಕ್ಕಳ ಪ್ರತಿಭೆಯೊಂದಿಗೆ ಆಟ ಆಡುವ  ಷಂಡರನ್ನು ದೇವರೆಂದು ಕ್ಷಮಿಸಲಾರ. ನನಗೆ ಸಂಘದ ಮೇಲೆ ಬಹಳಷ್ಟು ಗೌರವವಿದೆ. ವೈಯಕ್ತಿಕವಾಗಿ ಯಾರ ಮೇಲೆಯೂ ಬೇಸರವಿಲ್ಲ. ಆದರೆ ಮುಂದೆ ಹೀಗಾಗಬಾರದು ಎನ್ನುವ ಉದ್ದೇಶ ನನ್ನ ಈ ಲೇಖನಿಯದ್ದು. 
ನನ್ನ ತ್ರಿಶಾಳ ಜೊತೆಯಲ್ಲಿ ನಾನಿದ್ದೇನೆ. ಅವಳಲ್ಲಿ ಧೈರ್ಯ ತುಂಬ ಬಲ್ಲೆ. ಆದರೆ ಅವಳಂತಹ ಅದೆಷ್ಟೋ ಪ್ರತಿಭೆಗಳು ಮತ್ತೆ ಬಂಟರ ಸಂಘದ ವೇದಿಕೆಗೆ ಬರುವ ಧೈರ್ಯ ತೋರಲಾರವು. ಆ ಜಾಗೃತಿ ಮೂಡಿಸುವುದಷ್ಟೇ ನನ್ನ ಉದ್ದೇಶ. 
(ಈ ಲೇಖನದಲ್ಲಿ ಹಾಕಲಾಗಿರುವ ದ್ರುತಿ ಚಂದ್ರಹಾಸ್ ಶೆಟ್ಟಿಯ ಸ್ಮರಣಿಕೆಯ ಫೊಟೊ ಮತ್ತು ನನ್ನ ಲೇಖನಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅವಳ ಸ್ಮರಣಿಕೆಯನ್ನು ಕೇವಲ ಕಂಪೇರ್ ಮಾಡಲು ಅಳವಡಿಸಲಾಗಿದೆ. ಇದನ್ನು ಅಪಾರ್ಥವಾಗಿ ಭಾವಿಸಬೇಡಿ. ನೋವಾಗಿದ್ದರೆ ಕ್ಷಮೆಯಾಚಿಸುವೆ).

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ