ಪುಣೆ ಕೋವಿಡ್ ಕೇರ್ ಸೆಂಟರ್ ನಲ್ಲಿ ರೋಗಿ ಆತ್ಮಹತ್ಯೆ – ಕಿರಣ್ ವಾರ್ತಾ

0
237

ಪುಣೆ : (ಕಿರಣ್ ವಾರ್ತಾ -www.kiranvarta.com)ಕೊರೋನಾ ಪಾಸಿಟಿವ್ ಹೊಂದಿದ  60 ವರ್ಷದ ರೋಗಿಯೊಬ್ಬ  ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು  ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ವರದಿಯಾಗಿದೆ . ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಣೆ ನಗರದ ಕೊಂಡ್ವ  ದಲ್ಲಿರುವ ಸಿಂಹಘಡ್ ಇನ್ಸ್ಟಿಟ್ಯೂಟ್ ಕೋವಿಡ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ . ಆದರೆ ಆತ್ಮಹತ್ಯೆಗೈದ ಕಾರಣ ತಿಳಿದುಬಂದಿಲ್ಲ . ಗುಂಡಪ್ಪ ಶೆವರೆ (60,ಬಿಬ್ವೆವಾಡಿ ನಿವಾಸಿ ) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು ಮಹಾನಗರಪಾಲಿಕೆಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಮೃತ ವ್ಯಕ್ತಿ ಹಾಗೂ ಆತನ ಮಗನನ್ನು ಕೋವಿಡ್ ಪಾಸಿಟಿವ್ ಬಂದ  ನಂತರ ಕೊಂಡ್ವ ಸಿಂಹಘಡ್ ಇನ್ಸ್ಟಿಟ್ಯೂಟ್ ಕೋವಿಡ್ ಕೇರ್ ಸೆಂಟರ್  ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು . ಇವರಿಬ್ಬರಿಗೂ ಜುಲೈ ೪ ರಿಂದ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು . ಇವರಿಬ್ಬರೊಂದಿಗೆ ಇನ್ನಿಬ್ಬರು ರೋಗಿಗಳು ಇವರಿದ್ದ ಕೊಠಡಿಯಲ್ಲಿದ್ದರು . ಸೋಮವಾರ ಬೆಳಗ್ಗೆ ಉಪಾಹಾರಕ್ಕೆಂದು ಎಲ್ಲರೂ ಕೊಠಡಿಯಿಂದ ಹೊರಬಂದಿದ್ದರು . ಡ್ರೆ ಮೃತ ವ್ಯಕ್ತಿ ಹೊರ ಬಂದಿರಲಿಲ್ಲ . ಉಳಿದ ಮೂವರು ಉಪಾಹಾರ ಮಾಡಿ ಕೊಠಡಿಗೆ ವಾಪಸ್ ಬರುವಾಗ ಸೀಲಿಂಗ್ ಫ್ಯಾನ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಕಂಡು ಬಂತು . ಸ್ಥಳೀಯ ಪೊಲೀಸರು ಪಂಚನಾಮೆ ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ .


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ