ನಮ್ಮ ಅಬ್ಬಕ್ಕ – 2019 : ‘ವಿರಾಂಟ್’ ನಿಂದ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ-ಕಿರಣ್ ವಾರ್ತಾ 

0
80

ಮಂಗಳೂರು :  (ಕಿರಣ್ ವಾರ್ತಾ -www.kiranvarta.com)ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಸೆಪ್ಟೆಂಬರ್ 7ರಂದು ನಗರದ ಪುರಭವನದಲ್ಲಿ ಏರ್ಪಡಿಸಿದ್ದ   ‘ ನಮ್ಮ ಅಬ್ಬಕ್ಕ – 2019 ‘ ಶ್ರಾವಣ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಂದು ಬೆಳಿಗ್ಗೆ ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿರುವ ‘ರಾಣಿ ಅಬ್ಬಕ್ಕ’ ಪ್ರತಿಮೆಗೆ ವಿರಾಂಟ್ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ಹಿರಿಯ ಸಮಾಜ ಸೇವಕ ಸೀತಾರಾಮ ಬಂಗೇರ ಪ್ರತಿಷ್ಠಾನದ ಪರವಾಗಿ ಕುದುರೆಯೇರಿದ ಅಬ್ಬಕ್ಕ ರಾಣಿಯ ಪುತ್ಥಳಿಗೆ ಪುಷ್ಪ ಮಾಲಿಕೆ ತೊಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರೊಂದಿಗಿದ್ದರು.

‘ವಿರಾಂಟ್’ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ , ಕೋಶಾಧಿಕಾರಿ ಪಿ.ಡಿ.ಶೆಟ್ಟಿ , ಸಾಂಸ್ಕೃತಿಕ ಸಂಚಾಲಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಪಟ್ಟಣ ಪಂಚಾಯತ್ ಸದಸ್ಯೆ ಜಯಶ್ರೀ ಪ್ರಫುಲ್ಲದಾಸ್, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್ .ಶೆಟ್ಟಿ ,  ಪ್ರತಿಷ್ಠಾನದ ಸದಸ್ಯರಾದ ವಿಜಯಲಕ್ಷ್ಮಿ ಬಿ.ಶೆಟ್ಟಿ , ಸುಮಾ ಪ್ರಸಾದ್ , ಪ್ರತಿಮಾ ಹೆಬ್ಬಾರ್, ಸೀತಾಲಕ್ಷ್ಮಿ ಟಿ., ರಾಜಮ್ಮ ಬಿ.ಇ. , ಶೋಭಾ ಕಣೀರುತೋಟ, ಪ್ರಕಾಶ್ ಸಿಂಫೋನಿ,  ರಘುರಾಮ ಶೆಟ್ಟಿ ಕಾಪಿಕಾಡು , ಆನಂದ ಶೆಟ್ಟಿ ತೊಕ್ಕೊಟ್ಟು , ಸುರೇಶ್ ಶೆಟ್ಟಿ ಅಂಬ್ಲಮೊಗರು, ಶಂಕರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ