ಯಕ್ಷಾಂಗಣ ಮಂಗಳೂರು ;ತಾಳಮದ್ದಳೆ  ಸಪ್ತಾಹದಲ್ಲಿ ದಿ.ಎ.ಕೆ. ನಾರಾಯಣಶೆಟ್ಟಿ – ಮಹಾಬಲ ಶೆಟ್ಟಿ ಸಂಸ್ಮರಣೆ -ಕಿರಣ್ ವಾರ್ತಾ 

0
65

‘ಹಿರಿಯರ ಪರಂಪರೆ ಅನುಸರಣೀಯ’: ಎ.ಕೆ. ಜಯರಾಮ ಶೇಖ
———————–

ಮಂಗಳೂರು: (ಕಿರಣ್ ವಾರ್ತಾ -www.kiranvarta.com) ಮನೆತನದ ಹಿರಿಯರು ಸಂಪಾದಿಸಿಕೊಟ್ಟ ಆಸ್ತಿ – ಸಂಪತ್ತನ್ನು ಅನುಭವಿಸಿದರೆ ಸಾಲದು; ನಾವು ಅವರ ಆಸಕ್ತಿಗಳನ್ನು ಉಳಿಸಿ ಗೌರವಿಸಬೇಕು. ಕಲೆ ,ಸಂಸ್ಕೃತಿ, ಕೃಷಿ, ವಾಣಿಜ್ಯ ವ್ಯವಹಾರಗಳಲ್ಲಿ ನಮ್ಮ ಹಿರಿಯರು ಮಾಡಿದ ಸಾಧನೆಯನ್ನು ಅವರ ಕಾಲಾನಂತರ ಸ್ಮರಿಸಿಕೊಂಡು ಆ ಪರಂಪರೆಯನ್ನು ಅನುಸರಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವಾಗಬೇಕು’  ಎಂದು ಫರಂಗಿಪೇಟೆ ಶ್ರೀರಾಮ ವಿದ್ಯಾ ಸಂಸ್ಥೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮತ್ತು ಖ್ಯಾತ ಸಾರಿಗೆ ಉದ್ಯಮಿ ಎ.ಕೆ.ಜಯರಾಮ ಶೇಖ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು  ಮಂಗಳೂರು ವಿ‌.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ನಾಲ್ಕನೆಯ ದಿನ ಕೀರ್ತಿಶೇಷ ಅರ್ಥಧಾರಿಗಳಾದ ದಿ.ಎ.ಕೆ.ನಾರಾಯಣ ಶೆಟ್ಟಿ ಮತ್ತು ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಸಂಸ್ಮರಣಾ ಜ್ಯೋತಿ ಬೆಳಗಿದರು. ಅವರು ಮಾತನಾಡಿ ‘ಯಕ್ಷಗಾನ, ಹರಿಕಥೆ, ಪುರಾಣ ಪ್ರವಚನಗಳು ಕೇವಲ ಮಠ-ಮಂದಿರಗಳಿಗೆ ಸೀಮಿತವಾಗಿದ್ದ ಕಾಲವೊಂದಿತ್ತು. ಪ್ರಸ್ತುತ ಅದು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂದಿನ ಯುವ ಸಮುದಾಯ ಅದರ ಕಡೆಗೆ ಇನ್ನಷ್ಟು ಹೆಚ್ಚು ಆಕರ್ಷಿತರಾಗುವಂತೆ ಮಾಡುವುದು ನಮ್ಮ ಜವಾಬ್ದಾರಿ’ ಎಂದರು. ಅರ್ಕುಳದ ಉದ್ಯಮಿ ಜಫ್ರುಲ್ಲಾ ಒಡೆಯರ್, ಎಂ.ಆರ್.ಪಿ.ಎಲ್. ಅಧಿಕಾರಿ ಸೀತಾರಾಮ ರೈ ಕೈಕಾರ, ಎ.ಕೆ.ರಮಾನಂದ ಶೆಟ್ಟಿ ಫರಂಗಿಪೇಟೆ, ಪದ್ಮಾವತಿ ಜಯರಾಮ ಶೇಖ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪದಾಧಿಕಾರಿಗಳಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ,ಅಶೋಕ ಮಾಡ ಕುದ್ರಾಡಿಗುತ್ತು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕರುಣಾಕರ ಶೆಟ್ಟಿ ಪಣಿಯೂರು, ಕೆ‌.ಲಕ್ಷ್ಮೀನಾರಾಯಣ ಹರೇಕಳ, ಉಮೇಶ್ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ, ಶೋಭಾ ಕಣ್ಣೂರು ಉಪಸ್ಥಿತರಿದ್ದರು. ಬಳಿಕ ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಯಲ್ಲಿ ‘ಸಂಧಾನ ಸಪ್ತಕ’ ದ ನಾಲ್ಕನೇ ಪ್ರಸಂಗ ‘ಮಾರುತಿ ಸಂಧಾನ’  ಯಕ್ಷಗಾನ ತಾಳಮದ್ದಳೆ ಜರಗಿತು.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ