ಅ .18;ತುಳು ಸೇವಾ ಸಂಘ ನಾಸಿಕ್  ವತಿಯಿಂದ “ಚಾ ಪರ್ಕ “ಕಲಾವಿದರಿಂದ “ಪುಷ್ಪಕ್ಕನ ಇಮಾನ “ನಾಟಕ ಪ್ರದರ್ಶನ -ಕಿರಣ್ ವಾರ್ತಾ  

0
99
ಪುಣೆ : (ಕಿರಣ್ ವಾರ್ತಾ – www.kiranvarta.com)ತುಳು ಸೇವಾ ಸಂಘ ನಾಸಿಕ್  ವತಿಯಿಂದ ಪ್ರಖ್ಯಾತ ಚಾ ಪರ್ಕ ಕಲಾವಿದರು ಅಭಿನಯಿಸುವ ರಾಜ್ಯಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಖ್ಯಾತಿಯ ಲಯನ್ ದೇವದಾಸ್ ಕಾಪಿಕಾಡ್ ನಟಿಸಿ ,ನಿರ್ದೇಶಿಸುವ ತುಳು ಹಾಸ್ಯಮಯ ನಾಟಕ “ಪುಷ್ಪಕ್ಕನ ಇಮಾನ ” ಅ . 18 ರಂದು ಶುಕ್ರ ವಾರ  ರಾತ್ರಿ  ಗಂಟೆ 9:30 ರಿಂದ “ಮಹಾಕವಿ ಕಾಳಿದಾಸ ಹಾಲ್ ,ಶಾಲಿಮಾರ್ ,ನಾಸಿಕ್  ಇಲ್ಲಿ ಪ್ರದರ್ಶನಗೊಳ್ಳಲಿದೆ . 
ಕಥೆ ,ಸಂಭಾಷಣೆ ,ಗೀತೆ ರಚನೆ ,ಹಿನ್ನೆಲೆ ಗಾಯನ ,ನಿರ್ದೇಶನವನ್ನು ದೇವದಾಸ್ ಕಾಪಿಕಾಡ್ ನಿರ್ವಹಿಸಿದ್ದು ಮುಖ್ಯ ಪಾತ್ರದಲ್ಲಿ ಲಯನ್ ದೇವದಾಸ್ ಕಾಪಿಕಾಡ್ ,ಸಾಯಿ ಕೃಷ್ಣ ,ತಿಮ್ಮಪ್ಪ ಕುಲಾಲ್ ,ಸದಾಶಿವ ಅಮೀನ್ ,ರಿಚರ್ಡ್ ಪಿಂಟೋ ,ಪಾಂಡುರಂಗ ,ಸುಧೀರ್ ಹೆಬ್ರಿ ,ಸುರೇಶ ಕುಲಾಲ್ ಬಿ.ಸಿ ರೋಡ್ ,ಸುಜಾತಾ ,ದೃತಿ ಸಾಯಿ ,ಯೋಗೀಶ್ ಆಚಾರ್ ,ದೀಕ್ಷಿತ್ ಫರಂಗಿಪೇಟೆ ,ಹರೀಶ್ ಆರ್ಲಪದವು ,ಹಾಗೂ ಪ್ರವೀಣ್ ಬಿ .ಸಿ .ರೋಡ್ ಅಭಿನಯಿಸಲಿದ್ದಾರೆ . ಗುರು ಬಾಯಾರ್  ಸಂಗೀತ ನೀಡಲಿದ್ದು ,ಗುರುದೇವ್ ಸೌಂಡ್ಸ್ ಕಾಪಿಕಾಡ್ ,ರಮಾನಂದ ,ರಾಜೇಶ್ ಅಮೀನ್ ಧ್ವನಿ ,ಬೆಳಕನ್ನು ಸಂಯೋಜಿಸಲಿದ್ದು ಮೇಕಪ್ ನಲ್ಲಿ ಸುರೇಶ್ ಮಾಸ್ಟರ್ ಹಾಗೂ ಗುರುದೇವ ಆರ್ಟ್ಸ್ ಕಾಪಿಕಾಡ್ ರಂಗಾಲಂಕಾರದಲ್ಲಿ ಸಹಕಾರ ನೀಡಲಿದ್ದಾರೆ . 
   ಈ  ನಾಟಕ ಪ್ರದರ್ಶನದಲ್ಲಿ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸಂಸ್ಥೆಗೆ ಸಹಕಾರ ನೀಡುವಂತೆ ತುಳು ಸೇವಾ ಸಂಘ ನಾಸಿಕ್ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು  ಪ್ರಕಟಣೆ ನೀಡಿರುತ್ತಾರೆ  . 
  

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ