ಕನ್ನಡ  ಸಂಘ ಪುಣೆ -ಕಾವೇರಿ ವಿದ್ಯಾ ಸಮೂಹದಲ್ಲಿ “ಮುಂಬೈ ಡಬ್ಬಾವಾಲ” ಅನುಭವ ಕಥನ-ಕಿರಣ್ ವಾರ್ತಾ 

0
47

ಪುಣೆ : (ಕಿರಣ್ ವಾರ್ತಾkiranvarta.com)ಕನ್ನಡ ಸಂಘ ಪುಣೆಯ ಕಾವೇರಿ ವಿದ್ಯಾ ಸಮೂಹದ ಕಾಲೇಜಿನ ವತಿಯಿಂದ ಸೆ 7 ರಂದು  ವಿದ್ಯಾರ್ಥಿಗಳಿಗೆ ಒಂದು ವಿಶಿಷ್ಟ ಮತ್ತು ಜಗತ್ಪ್ರಸಿದ್ಧ ಮುಂಬೈಯ ದುಬ್ಬಾವಾಲರ ಅನುಭವ ಕಥನವನ್ನು ಶಕುಂತಲಾ ಜಗನ್ನಾಥ ಶೆಟ್ಟಿ  ಸಭಾಗೃಹದಲ್ಲಿ ಏರ್ಪಡಿಸಲಾಗಿತ್ತು . ಡಬ್ಬಾವಾಲರ  ಶಿಸ್ತು ,ಸಮಯದಲ್ಲಿ  ಮನೆಯಿಂದ ಆಫೀಸು,ಆಫೀಸಿನಿಂದ ಮನೆಗಳಿಗೆ ಮಧ್ಯಾಹ್ನದ ಊಟ ಒದಗಿಸುವ ಅತ್ಯಂತ ಸಮಾಜೋಪಯೋಗಿ ವ್ಯವಸ್ಥೆಯನ್ನು ನೇರವಾಗಿ ತುಲುಪಿಸುವ ಮುಂಬೈಯ ಡಬ್ಬಾವಾಲಾ  ಸಂಸ್ಥೆಯ ಮುಖ್ಯಸ್ಥ  ಸುಭಾಷ್ ತಲೆಕರ್ ಮತ್ತು ಸಹಕಾರಿಗಳು ವಿದ್ಯಾರ್ಥಿ ,ಪಾಲಕರು ,ಶಿಕ್ಷಕರು ಮತ್ತು ಕನ್ನಡ ಸಂಘದ ಪದಾಧಿಕಾರಿಗಳಿಗೆ ತಮ್ಮ ಅನುಭವಗಳನ್ನು ಪ್ರಸ್ತುತಪಡಿಸಿದರು .

ತಲೆಕರ್ ರವರು ಮಾತನಾಡುತ್ತಾ ೧೩೦ ವರ್ಷಗಳಿಂದ ನಿರಂತರ ಸುಮಾರು ನಾಲ್ಕು ಲಕ್ಷ್ಯಕ್ಕೂ ಮೇಲ್ಪಟ್ಟು ಊಟದ ದುಬ್ಬ ಗಳನ್ನೂ ಸಮಯಕ್ಕೆ ಸರಿಯಾಗಿ ತಲಪಿಸುತ್ತಿರುವ ಈ ಸಂಸ್ಥೆ ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿದೆ . ಪ್ರಾಕೃತಿಕ ,ಸಾಮಾಜಿಕ, ರೈಲ್ವೆಯ ಹಲವು ಅಡೆ ತಡೆಗಳನ್ನುಎದುರಿಸುತ್ತ ಸೈಕಲ್ ನಲ್ಲಿ ಮನೆಯಿಂದ  ಮನೆಗೆ ಮಡಿಯಿಂದ ಮಹಡಿಗೆ ಸುಮಾರು ೭೦ ಕಿಲೋ ವಜನದ ಡಬ್ಬಗಳನ್ನು ಹೊತ್ತುಕೊಂಡು ಕಾಲಿಡಲೂ ಜಾಗವಿಲ್ಲದ ಮುಂಬೈ ಯ ಲೋಕಲ್ ನಲ್ಲಿ ಏರಿಳಿಸುತ್ತ ಕ್ಲಿಪ್ತ ಸಮಯದಲ್ಲಿ  ಮಧ್ಯಾಹ್ನದ ಊಟ ಒದಗಿಸುವ ಈ ಮಹಾನ್ ಕಾರ್ಯದ ರೋಮಾಂಚನಕಾರಿ ಕಾರ್ಯದ ವ್ಯವಸ್ಥೆಯನ್ನು ಸಪೂರ್ಣ ಜಗತ್ತು ಬೆರಗಾಗಿ ನೋಡುತ್ತಿದೆ .ಮೂಲತಃ ಪುಣೆ ಜಿಲ್ಲೆಯವರಾದ ತಲೆಕರ್ ಕಳೆದ ನಾಲ್ಕು ಪೀಳಿಗೆಗಳಿಂದ ನಡೆದು ಬಂದ ದಾರಿ ಅಡೆತಡೆಗಳು ಮತ್ತು ಪಟ್ಟ ಕಷ್ಟ ಅನುಭವಗಳನ್ನು ಉದಾಹರಣೆಗಳ ಮೂಲಕ ವಿವರಿಸಿದರು.

ದುಬ್ಬವಾಲರ ಕಾರ್ಯವನ್ನು ಗೌರವಿಸುತ್ತಾ ಅವರ  ಪರಿವಾರ ಮತ್ತು ಕಾರ್ಯಗಳನ್ನು ಗುರುತಿಸಿಕೊಂಡು  ದೇಶ ವಿದೇಶಗಳ ಆಡಳಿತ ತಜ್ಞರು ಇಲ್ಲಿ ಬಂದು ಇವರ ಕಾರ್ಯ ವೈಖರಿ ದಕ್ಷತೆಯನ್ನು ವಿವಿಧ ಸಂಸ್ಥೆಗಳಲ್ಲಿ  ಆಚರಣೆಗೆ ತರಲು ಪ್ರಯತ್ನ ಪಡುತ್ತಿದ್ದಾರೆ .ಭಾರತದ ವಿದೇಶದ ಮಹಾನ್ ಉದ್ಯೋಗ ಸಂಸ್ಥೆಗಳು ,ಆಡಳಿತ ಸಂಶೋಧನಾ ಸಂಸ್ಥೆಗಳು ಭಾರತ ಸರಕಾರ ,ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಮುಂತಾದವರು ಕಂಡು ಬೆರಗಾಗಿ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ .ಊಟದಡದುಬ್ಬದ ಜೊತೆಗೆ ಬಟ್ಟೆ ಬ್ಯಾಂಕ್ ಸಾಮಾಜಿಕ ವಿದ್ಯಾ ಮತ್ತು ಸ್ವಚ್ಚತೆಯ ಬಗ್ಗೆ ಹಲವಾರು ಅಭಿಯಾನಗಳನ್ನು ನಡೆಸುತ್ತಿದ್ದಾರೆ ಎಂದರು .  ತಲೆಕರ್ ಮತ್ತು  ಅವರ ಮುಂದಿನ ಪೀಳಿಗೆಯ ಸದಸ್ಯರನ್ನು ಪರಿಚಯಿಸಿ ಸತ್ಕರಿಸಲಾಯಿತು .
ವಿದ್ಯಾರ್ಥಿಗಳು ,ಶಿಕ್ಷಕರು ,ಪಾಲಕರು ,ಆಡಳಿತಾಧಿಕಾರಿಗಳು ಆಸಕ್ತಿಯಿಂದ ಈ ಕಾರ್ಯಕ್ರಮವನ್ನು ಮೆಚ್ಚಿ ಪ್ರಶೋತ್ತರ ದಲ್ಲಿ ಸಹಭಾಗಿಗಳಾದರು. ಅಧ್ಯಾಪಕರಾದ ಅಶೋಕ್  ಅಗರವಾಲ್ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು . ಸಂಘದ ಅಧ್ಯಕ್ಷ  ಕುಶಲ್ ಹೆಗ್ಡೆ ಮಾತನಾಡಿ  ಇಂತಹ ಮಾದರಿ  ಉಪಕ್ರಮಗಳು ದೇಶದ ಅಭಿವೃದ್ಧಿಗೆ ಹಾಗೂ ಹೊಸ ಉದ್ಯೋಗಗಳಿಗೆ ಒಂದು ಮಾರ್ಗದರ್ಶನ ಎಂದು ಶುಭ ಹಾರೈಸಿದರು .ಕಾರ್ಯದರ್ಶಿ ಮಾಲತಿ ಕಲ್ಮಾಡಿ ಅತಿಥಿಗಳನ್ನು ಸತ್ಕರಿಸುತ್ತಾ ನಮ್ಮ ಅಕ್ಕ ಪಕ್ಕದಲ್ಲಿ ನಡೆಯುತ್ತಿರುವ ಇಂತಹ ಸಂಸ್ಥೆಗಳಿಂದ ಎಲ್ಲರಿಗೂ ಉಪಯುಕ್ತ ಅನುಭವಗಳು ದೊರೆಯುತ್ತವೆ ಎಂದರು . ಜತೆ ಕೋಶಾಧಿಕಾರಿ  ರಾಧಿಕಾ ಶರ್ಮ, ವಿಶ್ವಸ್ಥರಾದ ಡಾ ।ಬಾಲಾಜಿತ್ ಶೆಟ್ಟಿ , ಉಪ ಪ್ರಾಧ್ಯಾಪಿಕೆ  ಮುಕ್ತ ಕರಮರ್ಕರ್ ಉಪಸ್ಥಿತರಿದ್ದರು  .  ಕಾರ್ಯಕ್ರಮದಲ್ಲಿ ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ , ರಾಗಿಣಿ ಕಲ್ಮಾಡಿ ,ವಿವಿಧ ಸಂಸ್ಥೆಗಳ  ಶಿಕ್ಷಕ ,ಶಿಕ್ಷಕಿಯರು, ವಿದ್ಯಾರ್ಥಿಗಳು, ಪಾಲಕರು ಆಸಕ್ತಿಯಿಂದ ಭಾಗವಹಿಸಿದರು.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ