ಕನ್ನಡ ಸಂಘ ಪುಣೆ -ಕಾವೇರಿ ಸಾಂಸ್ಕೃತಿಕ ಮಂಚ ಶುಭಾರಂಭ – ಕಿರಣ್ ವಾರ್ತಾ

0
88
ಪುಣೆ : (www.kiranvarta.com)ಪುಣೆ ಕನ್ನಡ ಸಂಘದ ವತಿಯಿಂದ  ಜುಲೈ 21 ರಂದು  “ಭಾಷೆ ,ಕಲೆ ,ಸಾಹಿತ್ಯಗಳ ಬೆಳವಣಿಗೆಗೆ  ಪೂರಕವಾಗಿ “ಸಾಂಸ್ಕೃತಿಕ ಮಂಚ ” ಆರಂಭಿಸಲಾಯಿತು . ಇದರ  ಉದ್ಘಾಟನೆಯನ್ನು ಡಾ। ಗುರುರಾಜ್ ಕುಲಕರ್ಣಿ , ಕೃಷ್ಣ ಹೆಗ್ಡೆ,ಮರಾಠಿ ಕನ್ನಡ ಸ್ನೇಹವರ್ಧನ ಸಂಘ ಹಾಗು ಪ್ರಸಿದ್ಧ ಮರಾಠಿ ಸಾಹಿತ್ಯ ಸಮೀಕ್ಷಕ  ಡಾ .ಜಯಂತ್ ಗಾದಗೀಲ್  ನೆರವೇರಿಸಿದರು . ಈ ಸಂದರ್ಭ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ ಉಪಸ್ಥಿತರಿದ್ದರು .
      ಸಾಂಸ್ಕೃತಿಕ ನಗರ ಪುಣೆಯಲ್ಲಿ ಕಳೆದ ಆರು ದಶಕಗಳಿಂದ ಸಾಂಸ್ಕೃತಿಕ ,ಶೈಕ್ಶಣಿಕ  ಮತ್ತು ಸಾಮಾಜಿಕ  ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕನ್ನಡಿಗರ ಹಾಗೂ ಸ್ಥಳೀಯ ಮಹಾರಾಷ್ಟ್ರೀಯರ ಜೊತೆಗೂಡಿ ಯಶಸ್ಸಿನಿಂದ ಮುಂದುವರಿಯುತ್ತಿರುವ ಕನ್ನಡ ಸಂಘ ಗಣೇಶ್ ನಗರದಲ್ಲಿರುವ ಮುಖ್ಯ ಸಂಕುಲದಲ್ಲಿ  ಒಂದು ವಿವಿದೋದ್ದೇಶ ಸಾಂಸ್ಕೃತಿಕ ಮಂಚವನ್ನು ಆರಂಬಿಸಿರುತ್ತದೆ .
ಕನ್ನಡ ಸಂಸ್ಕೃತಿಯನ್ನು ಪುಣೆಯ ಕನ್ನಡಿಗರಿಗೆ ಮತ್ತು ಆಸಕ್ತಿಯುಳ್ಳ ಮಹಾರಾಷ್ಟ್ರೀಯರಿಗೆ ಪರಿಚಯಿಸುವುದು ,ಕನ್ನಡ ಮರಾಠಿ ಸಾಹಿತ್ಯ ಕಲೆಗಳ ಭಾಷಾಂತರ, ಪ್ರದರ್ಶನಗಳನ್ನೂ ಆಯೋಜಿಸಿ ಎರಡು ರಾಜ್ಯಗಳ ಸಾಂಸ್ಕೃತಿಕ ಸಂಬಂಧಗಳನ್ನು ವೃದ್ಧಿಸುವುದು,ಪುಸ್ತಕ ಪರಿಚಯ, ಕಾವ್ಯ ವಿಮರ್ಶೆ ಸಂವಾದಗಳನ್ನು ಆಯೋಜಿಸಿ ಉಭಯ ರಾಜ್ಯಗಳ ಕವಿ ಕಲಾಕಾರರನ್ನು ಗುರಿತಿಸಿ ಆಹ್ವಾನಿಸಿ  ಸನ್ಮಾನಿಸುವುದು ಈ ಮಂಚದ ಮುಖ್ಯ ಧ್ಯೇಯ ವಾಗಿರುತ್ತದೆ .
ಪುಣೆಯ ಪ್ರಸಿದ್ಧ ಭಾಷಾoತರಕಾರ ,ಕುಮರವ್ಯಾಸಭಾರತವನ್ನು ಕನ್ನಡದಿಂದ ಮರಾಠಿಗೆ  ಭಾಷಾಂತರಿಸಿರುವ ಡಾ। ಗುರುರಾಜ್ ಕುಲಕರ್ಣಿಯವರನ್ನು ಪ್ರಮುಖ ಸಲಹಗಾರನ್ನಾಗಿ ನೇಮಿಸಲಾಗಿದೆ .
ಕನ್ನಡ ಸಂಘ ತನ್ನ ಗಣೇಶ್ ನಗರದ ಸಂಕುಲದಲ್ಲಿ ತನ್ನ ಗ್ರಂಥಾಲಯವನ್ನು ಸುಸಜ್ಜಿತವಾಗಿ ನವೀಕರಿಸಿದ್ದು ಇಲ್ಲಿ ಕನ್ನಡ ಕಲಿಕೆ ,ವಿಚಾರ ಸಂಕೀರ್ಣಗಳಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸಲಾಗಿದೆ .ಆಸಕ್ತರು ಕನ್ನಡ ಸಂಘದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ