ಜೂನ್. 29,ತುಳು ಸಂಘ ಪಿಂಪ್ರಿ -ಚಿಂಚ್ವಾಡ್ ವಿದ್ಯಾನಿಧಿ ವಿತರಣೆ -ಕಿರಣ್ ವಾರ್ತಾ

0
114
ಹರೀಶ್ ಶೆಟ್ಟಿ ಕುರ್ಕಾಲ್

ಪುಣೆ : (www.kiranvarta.com)ತುಳು ಸಂಘ ಪಿಂಪ್ರಿ -ಚಿಂಚ್ವಾಡ್ ವತಿಯಿಂದ   ಆರ್ಥಿಕವಾಗಿ ಹಿಂದುಳಿದ ತುಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ “ವಿದ್ಯಾನಿಧಿ -2019” ಕಾರ್ಯಕ್ರಮವನ್ನು ತಾ. 29.6.19 ನೇ ಶನಿವಾರ ಬೆಳಗ್ಗೆ ಗಂಟೆ  10 ರಿಂದ  ಪಿಂಪ್ರಿ ಚಿಂಚ್ವಾಡ್  ಲಿಂಕ್ ರೋಡ್ ನಲ್ಲಿರುವ ಹೋಟೇಲ್ ತೃಷ್ಣಾ ಗಾರ್ಡನ್  ಇಲ್ಲಿ ಆಯೋಜಿಸಲಾಗಿದೆ .

ಎರ್ಮಾಳ್ ಸೀತಾರಾಮ ಶೆಟ್ಟಿ

ಸಂಘದ ಅಧ್ಯಕ್ಷ  ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅದ್ಯಕ್ಷತೆಯಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ  ನಿತಿನ್ ಶೆಟ್ಟಿ ನಿಟ್ಟೆ  ಇವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ  ಪ್ರಸಿದ್ಧ ಉದ್ಯಮಿ ಹಾಗೂ  ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ  ಮಾಜಿ ಅಧ್ಯಕ್ಷರಾದ ಎರ್ಮಾಳ್  ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ .

ಸುನೀತಾ ಶಿರಗುಪ್ಪಿ

ಈ ಸಂದರ್ಭ “ಆಧುನಿಕ  ಶಿಕ್ಷಣ – ಒತ್ತಡ ಮತ್ತು ನಿರ್ವಹಣೆ” ಈ ವಿಷಯದಲ್ಲಿ ಡಾ।ಶ್ಯಾಮರಾವ್ ಕಲ್ಮಾಡಿ ಹೈಸ್ಕೂಲಿನ ನಿವ್ರತ್ತ ಮುಖ್ಯೋಪಾಧ್ಯಾರಾದ  ಸುನೀತಾಶಿರಗುಪ್ಪಿ  ಇವರಿಂದ ವಿದ್ಯಾರ್ಥಿ ಮತ್ತು ಪಾಲಕರಿಗೆ ಮಾರ್ಗದರ್ಶನ ನೀಡಲಿದ್ದಾರೆ . ಇದೇ ಸಂಧರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಸಿ  ಹಾಗೂ ಹೆಚ್ ಎಸ್ ಸಿ  ಪರೀಕ್ಷೆಯಲ್ಲಿ ಶೇಕಡಾ ೮೦ಅಥವಾ ಅಧಿಕ  ಅಧಿಕ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸತ್ಕರಿಸಲಾಗುವುದು.

ನಿತಿನ್ ಶೆಟ್ಟಿ ನಿಟ್ಟೆ
ವಿನಯ್ ಶೆಟ್ಟಿ ನಿಟ್ಟೆ

ಸಂಘದ ವಿದ್ಯಾನಿಧಿಯ ಪ್ರಯೋಜನ ಪಡೆಯಲು  ಮಕ್ಕಳ ಅಂಕಪಟ್ಟಿ ಪ್ರತಿಯೊಂದಿಗೆ ಅರ್ಜಿಯನ್ನು  ಹೋಟಿಲ್ ಜಂಜೀರ ,ಸ್ಪೈನ್ ರೋಡ್; ಹೋಟಿಲ್ ಹರ್ಷ ಡಾಂಗೆ ಚೌಕ್; ಜೀವನ್ ಲಾಡ್ಜ್ ಚಿಂಚವಡ್;  ದುರ್ಗಾ ರೂಮ್ಸ್ ವಾಕಡ್ ಮತ್ತು ಹೋಟೆಲ್ ಬಾಲಾಜಿ ಖರಾಳ್ ವಾಡಿ ಇಲ್ಲಿ ಕೊಡಬಹುದು. ಹೆಚ್ಚಿನ  ಮಾಹಿತಿಗಾಗ ದಿನೇಶ್ ಶೆಟ್ಟಿ ಉಜಿರೆ -9850642237 ಮತ್ತು ನೂತನ್ ಸುವರ್ಣ -9371009074 ಸಂಪರ್ಕಿಸಬಹುದೆಂದು ಸಂಘದ ಪ್ರಧಾನ ಕಾರ್ಯದರ್ಶಿ  ವಿನಯ್ ಶೆಟ್ಟಿ ನಿಟ್ಟೆ ಪ್ರಕಟಣೆ ನೀಡಿರುತ್ತಾರೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ