ಡಿ .1 ,ಪುಣೆ ಬಂಟರ ಸಂಘದಿಂದ “ನಮ್ಮ ನಡಿಗೆ ಬಂಟರ ಮನೆಯೆಡೆಗೆ “ಎನ್ನುವ ನೂತನ ಅಭಿಯಾನಕ್ಕೆ ಚಾಲನೆ-ಕಿರಣ್ ವಾರ್ತಾ  

0
339
ಸಂತೋಷ್ ಶೆಟ್ಟಿ
ಪುಣೆ : ( ಕಿರಣ್ ವಾರ್ತಾ -www.kiranvarta.com)ಪುಣೆ ಬಂಟರ ಸಂಘದ ವತಿಯಿಂದ  “ನಮ್ಮ ನಡಿಗೆ ಬಂಟರ ಮನೆಯೆಡೆಗೆ “ಎನ್ನುವ ನೂತನ ಅಭಿಯಾನ ಆರಂಭಗೊಳ್ಳಲಿದ್ದು ಡಿ. 1 ರಂದು ರವಿವಾರ ಬೆಳಗ್ಗೆ ಗಂಟೆ 11 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಇಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ .
ಅಧ್ಯಕ್ಷ ಸಂತೋಷ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಪುಣೆಯಲ್ಲಿರುವ ಸಮಾಜಬಾಂಧವರ ಮನೆ ಮನೆಗೆ  ಮುಖತಾ ಭೇಟಿ ನೀಡಿ  ಪ್ರತಿಯೊಬ್ಬ ಸಮಾಜಬಾಂಧವರನ್ನು ಸಂಘದೊಂದಿಗೆ ಬೆಸೆಯುವ ಯೋಜನೆ ಇದಾಗಿದೆ .
  ಈ ಯೋಜನೆಯ ಇತರ ಉದ್ದೇಶವೆಂದರೆ ಪುಣೆ ಬಂಟರ ಭವನಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬ ಸಮಾಜಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದು ,ಸಮಾಜಬಾಂಧವರ ಆಶೀರ್ವಾದ ಪಡೆಯುವುದು ,ಕುಟುಂಬದ ಛಾಯಾಚಿತ್ರದೊಂದಿಗೆ ಸಂಘದ ಸದಸ್ಯತ್ವ ನೋಂದಣಿ ,ಸಂಘದ ತ್ರೈಮಾಸಿಕ ಕಲ್ಪವೃಕ್ಷ  ಪತ್ರಿಕೆ ಯ ಸದಸ್ಯತ್ವ ನೋಂದಣಿ ,ಸಂಘದ ಯೋಜನೆಗಳ ಮಾಹಿತಿ ನೀಡುವುದು ಹಾಗೂ ಸಂಘದ ಭವಿಷ್ಯದ ಉದ್ದೇಶಿತ ಯೋಜನೆಗಳಿಗೆ ಅಭಿಮತ ಸಂಗ್ರಹ ಮುಂತಾದವುಗಳಾಗಿವೆ .  ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಸಂಘದ ಇನ್ನಿತರ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ  ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳೊಂದಿಗೆ  ಸ್ವತಃ ಪುಣೆ ಪರಿಸರದಲ್ಲಿರುವ ಸಮಾಜಬಾಂಧವರ ಮನೆಗಳಿಗೆ ಭೇಟಿ ನೀಡಲಿದ್ದು  ವಾರದಲ್ಲಿ ಒಂದು ಅಥವಾ ಎರಡು ದಿವಸಗಳನ್ನು ಇದಕ್ಕಾಗಿ ಮೀಸಲಿಡಲಿದ್ದಾರೆ . ಈ ಯೋಜನೆ ಯಶಸ್ವಿಯಾಗಲು ಸಮಾಜಬಾಂಧವರು ಸಹಕರಿಸುವಂತೆ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ,ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ,ಮೋಹನ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಗೌರವ ಕೋಶಾಧಿಕಾರಿ ವೈ . ಚಂದ್ರಹಾಸ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ,ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ ,ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ಗಣೇಶ್ ಪೂಂಜಾ ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ