ತುಳು ಸಂಘ ಪಿಂಪ್ರಿ ಚಿಂಚ್ವಾಡ್ ವಿದ್ಯಾನಿಧಿ ಕಾರ್ಯಕ್ರಮ -ಕಿರಣ್ ವಾರ್ತಾ

0
178
ಶೈಕ್ಶಣಿಕ ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಘಕ್ಕೆ ನೆರವಾಗಿ  -ಎರ್ಮಾಳ್ ಸೀತಾರಾಮ ಶೆಟ್ಟಿ 
ಪುಣೆ : (www.kiranvarta.com)ನಮ್ಮ ಜೀವನದಲ್ಲಿ ವಿದ್ಯೆಗೆ ಮಹತ್ತರವಾದ ಸ್ಥಾನವಿದೆ . ವಿದ್ಯೆಗೆ ಪ್ರೋತ್ಸಾಹ ನೀಡುವಂತಹ ಕಾರ್ಯವನ್ನು ಪಿಂಪ್ರಿ ತುಳುಸಂಘವು ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ . ಇಲ್ಲಿ ಸಂಘದಿಂದ ಸಹಾಯ ಪಡೆದಂತಹ ವಿದ್ಯಾರ್ಥಿಗಳು ಮುಂದೆ ವಿದ್ಯಾವಂತರಾಗಿ ಉತ್ತಮ  ಸಂಪಾದನೆಯನ್ನು  ಗಳಿಸುವಂತಹ ಕಾಲದಲ್ಲಿ ಸಂಘವನ್ನು ಮರೆಯದೆ ನೆರವು ನೀಡುವಂತಾಗಬೇಕಾಗಿದೆ  ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ಸೀತಾರಾಮ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ನುಡಿದರು .
 ಅವರು ಜೂನ್ 29 ರಂದು ನಗರದ ತೃಷ್ಣಾ ಗಾರ್ಡೆನ್ ಹೋಟೆಲ್ ಸಭಾಂಗಣದಲ್ಲಿ ನಡೆದ ತುಳುಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಿದ್ಯಾನಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಸಂಘವು ಎಲ್ಲರನ್ನೂ  ಒಗ್ಗೂಡಿಸಿಕೊಂಡು ಮಾಡುತ್ತಿರುವ ಸಾಮಾಜಿಕ ,ಸಾಂಸ್ಕೃತಿಕ ಕಾರ್ಯಗಳಿಗೆ ತುಳುಕನ್ನಡಿಗರು ಸಹಕಾರ ನೀಡಬೇಕೆಂದರು .
ಅತಿಥಿಗಳಾಗಿ ಉಪಸ್ಥಿತರಿದ್ದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ  ಮಾಧ್ಯಮ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯಿನಿ,ಯೋಗ ಶಿಕ್ಷಕಿ  ಸುನೀತಾ ಶಿರಗುಪ್ಪಿ ಮಾತನಾಡಿ ನನ್ನನ್ನು ನಿಮ್ಮೆಲ್ಲರ ಅಕ್ಕನೆಂದು ಭಾವಿಸಿ  ಇಂದಿನ  ಕಾರ್ಯಕ್ರಮದಲ್ಲಿ  ಭಾಗವಹಿಸಲು ಅವಕಾಶ ನೀಡಿರುವುದಕ್ಕೆ  ಸಂತೋಷವಾಗುತ್ತಿದೆ . ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವಲ್ಲಿ ಕಾಳಜಿವಹಿಸಬೇಕಾಗಿದೆ . ವಿದ್ಯೆಯೊಂದಿಗೆ ನಮ್ಮ ದೈಹಿಕ ಹಾಗೂ ಮಾನಸಿಕ  ಆರೋಗ್ಯ ಕ್ಕೆ ಯೋಗಾಭ್ಯಾಸ  ರೂಢಿಸಿಕೊಳ್ಳುವುದು ಉತ್ತಮವಾಗಿದೆ .  ಈ ನಿಟ್ಟಿನಲ್ಲಿ ತುಳುಸಂಘಕ್ಕೆ ನೆರವಾಗಲು ಬಯಸುತ್ತೇನೆ ಎಂದರು .
  ಸಂಘದ ಅಧ್ಯಕ್ಷ ಹರೀಶ್  ಶೆಟ್ಟಿ ಕುರ್ಕಾಲ್ ಮಾತನಾಡಿ  ನಮ್ಮ ಸಂಘದ ಮೂಲಕ ಪ್ರತೀ ವರ್ಷ ಶಿಕ್ಷಣ ಪಡೆಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದಾನಿಗಳ  ಸಹಕಾರದಿಂದ ಕಿಂಚಿತ್ ಧನಸಹಾಯವನ್ನು ನೀಡುತ್ತಾ ಬಂದಿದ್ದೇವೆ . ಸಂಘದ ಪದಾಧಿಕಾರಿಗಳು ಹಾಗೂ ದಾನಿಗಳು ಈ  ಕಾರ್ಯಕ್ಕೆ ಬೆಂಬಲಿಸಿದ್ದು ಅವರೆಲ್ಲರಿಗೂ ಸಂಘ ಚಿರಋಣಿಯಾಗಿದೆ . ಮಕ್ಕಳು ಹೆಚ್ಚಾಗಿ ಮೊಬೈಲ್ ,ಇಂಟರ್ ನೆಟ್ ಗಳಲ್ಲಿ  ಕಾಲ ಕಳೆಯದೆ ವಿದ್ಯೆಯ ಕಡೆಗೆ ಹೆಚ್ಚು ಗಮನ ನೀಡಿ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ . ವಿದ್ಯೆಯೊಂದಿಗೆ ಸಂಸ್ಕಾರವಂತರಾಗಿ  ತುಳುನಾಡಿನ ಸಭ್ಯ ಸಂಸ್ಕೃತಿಯನ್ನು ಉಳಿಸುವಲ್ಲಿ ಕೊಡುಗೆ ನೀಡಬೇಕಾಗಿದೆ ಎಂದರು .
ವೇದಿಕೆಯಲ್ಲಿ  ಪಿಂಪ್ರಿ ಚಿಂಚ್ವಾಡ್  ಬಂಟರ ಸಂಘದ ಅದ್ಯಕ್ಷರಾದ  ವಿಜಯ ಶೆಟ್ಟಿ ಬೋರ್ಕಟ್ಟೆ, ಮಾಜಿ ನಗರಸೇವಕ  ಪ್ರಸಾದ ಶೆಟ್ಟಿ ,ಉದ್ಯಮಿ ರಮೇಶ ಕೋರೆ,  ಉಪಾದ್ಯಕ್ಷರುಗಳಾದ ದಿನೇಶ ಶೆಟ್ಟಿ ಉಜಿರೆ,  ಶೇಖರ ಪೂಜಾರಿ ಚಿತ್ರಾಪು ,ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ  ನಿತಿನ್ ಶೆಟ್ಟಿ ನಿಟ್ಟೆ ,ಪ್ರದಾನ ಕಾರ್ಯದರ್ಶಿ ವಿನಯ್ ಶೆಟ್ಟಿ , ಕೋಶಾಧಿಕಾರಿ  ಗಣೇಶ ಅಂಚನ್ ಉಪಸ್ಥಿತರಿದ್ದರು.ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಎಸ್ . ಎಸ್ ಸಿ ಹಾಗೂ ಹೆಚ್ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು  ಸತ್ಕರಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು .
ಶಿಕ್ಷಣ  ಮತ್ತು ಸಾಮಾಜಿಕ ಸಮಿತಿಯ ಉಪಾದ್ಯಕ್ಷರಾದ ಜಯ ಶೆಟ್ಟಿ ದೆಹೂ ರೋಡ್, ಮಾಜಿ ಅದ್ಯಕ್ಷ ರುಗಳಾದ  ಮಹೇಶ ಹೆಗ್ಡೆ ಕಟ್ಟಿಂಗೇರಿ ಮನೆ,  ಶ್ಯಾಮ ಸುವರ್ಣ, ಮಾಜಿ ಕಾರ್ಯದರ್ಶಿ  ದಿನೇಶ ಶೆಟ್ಟಿ ಬಜಗೋಳಿ, ಸದಸ್ಯರಾದ  ಸುಧಾಕರ ಶೆಟ್ಟಿ ಪೆಲತ್ತೂರು ,  ಚೇತನ್ ಶೆಟ್ಟಿ, ಕುಶ ಶೆಟ್ಟಿ , ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು
 ದಿನೇಶ ಶೆಟ್ಟಿ ಉಜಿರೆ ಸ್ವಾಗತಿಸಿದರು . ನಿತಿನ್ ಶೆಟ್ಟಿ ನಿಟ್ಟೆಯವರು ಪ್ರತಿಭಾವಂತ  ವಿದ್ಯಾರ್ಥಿಗಳ ಸತ್ಕಾರ ನಿರವೇರಿಸಿದರು. ಅತಿಥಿ ಗಳನ್ನು   ಕುಸುಮ ಸಾಲ್ಯಾನ್ ಪರಿಚಯಿಸಿದರು . ನೂತನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು .   ವಿನಯ್ ಶೆಟ್ಟಿ ನಿಟ್ಟೆ ವಂದಿಸಿದರು .  ಕಾರ್ಯಕ್ರಮದ ಕಡೆಯಲ್ಲಿ  ಸುನೀತಾ ಶಿರಗುಪ್ಪಿಯವರು ಉಚಿತವಾಗಿ  ನೀಡಿದ ಯೋಗ ಮಾಹಿತಿ ಪುಸ್ತಕ ವನ್ನು ವಿತರಿಸಲಾಯಿತು . ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ  ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ