ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ಎಸ್ ಎಸ್ ಸಿಯಲ್ಲಿ ಶೇಕಡಾ 100 ಫಲಿತಾಂಶ -ಕಿರಣ್ ವಾರ್ತಾ

0
347

ಪುಣೆ ,ಜುಲೈ . 30 : (ಕಿರಣ್ ವಾರ್ತಾ-www.kiranvata.com) ಕನ್ನಡ ಸಂಘ ಪುಣೆ ವತಿಯಿಂದ ನಡೆಸಲ್ಪಡುವ ಡಾ . ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ  2019-20 ಸಾಲಿನ  ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ . ಪರೀಕ್ಷೆಗೆ ಹಾಜರಾದ ಒಟ್ಟು 80 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು   17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ,24 ಫರ್ಸ್ಟ್ ಕ್ಲಾಸ್ ,30 ಸೆಕಂಡ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.  
    ಖಾಂಡೇರಾವ್ ಭೀಮಣ್ಣ ಬಂಡಾಗರ್   ಶೇಕಡಾ 87 ಅಂಕಗಳನ್ನು ಗಳಿಸಿ ತರಗತಿಯಲ್ಲಿ  ಪ್ರಥಮ ಸ್ಥಾನಿಯಾಗಿದ್ದಾರೆ  . ರೋಹಿತ್ ರಜಕ್ ನಾಟಿಕರ್ ಶೇಕಡಾ 84. 2  ಅಂಕ ಳನ್ನು ಪಡೆದು ದ್ವಿತೀಯ ಸ್ಥಾನಿಯಾದರೆ ನಿಖಿಲ್ ಬಾಬು ವಡ್ಡಾರ್  ಶೇಕಡಾ 84 ಅಂಕಗಳನ್ನು ಪಡೆದಿರುತ್ತಾರೆ ಐಶ್ವರ್ಯ ಗುಂಡಪ್ಪ ನಾಟಿಕರ್ ಶೇಕಡಾ 83. 4 ಅಂಕಗಳು ,ಶಿವಕುಮಾರ್ ಸಾದಪ್ಪ ಕೋಲಿ ಶೇಕಡಾ 83,ಅಂಜನಯ್ಯ ಹನುಮಂತ ಕೋಲಿ ಶೇಕಡಾ 81 .4 ,ಸ್ನೇಹಾ ಪರಶುರಾಮ್ ಸಖಾರೆ ಶೇಕಡಾ 80.8 ,ಅಪ್ ಸಾನ್ ಲಾಲ್ ಬಾಷಾ ಮನಿಯಾರ್ ಶೇಕಡಾ 80. 4,ಭೀಮಾಶಂಕರ್ ಹನುಮಂತ್ ಕೋಲಿ ಶೇಕಡಾ 80 .4 ಅಂಕಗಳನ್ನು ಗಳಿಸಿರುತ್ತಾರೆ .  ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ,ಉಪಾಧ್ಯಕ್ಷರುಗಳಾದ ಶ್ರೀಮತಿ ಇಂದಿರಾ ಸಾಲಿಯಾನ್ ,ನಾರಾಯಣ ಹೆಗಡೆ , ಕಾರ್ಯದರ್ಶಿ ಮಾಲತಿ  ಕಲ್ಮಾಡಿ ,ಕೋಶಾಧಿಕಾರಿ ಶ್ರೀನಿವಾಸ ಆಳ್ವ ,ವಿಶ್ವಸ್ಥರು ,ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ  ಚಂದ್ರಕಾಂತ ಹಾರಕುಡೆ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ .  


  (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)  
   

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ