ಪುಣೆ ಕಾಂಗ್ರೆಸ್ ಗೆ ಆಘಾತ  ,ಕಾಂಗ್ರೆಸ್ ಉಪಾಧ್ಯಕ್ಷ ,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಕೆ ಶೆಟ್ಟಿ ಬಿಜೆಪಿಗೆ ಸೇರ್ಪಡೆ- ಕಿರಣ್ ವಾರ್ತಾ

0
249

ಪುಣೆ : (ಕಿರಣ್ ವಾರ್ತಾ -www.kiranvarta.com)ಕಾಂಗ್ರೆಸ್ ಉಪಾಧ್ಯಕ್ಷ ,ಪುಣೆಯ ಮಾಜಿ ನಗರಸೇವಕ ,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಕೃಷ್ಣ ಶೆಟ್ಟಿಯವರು ಅ . 10 ರಂದು ಕಾಂಗ್ರಸ್ ತೊರೆದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು . ಈ ಸಂದರ್ಭ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ,ಸಂಸದರಾದ ಸಂಜಯ್ ಕಾಕಡೆ ,ಪುಣೆ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ನಗರಸೇವಕ ಗಣೇಶ್ ಬಿಡ್ಕರ್ ಉಪಸ್ಥಿತರಿದ್ದರು . ಇವರೊಂದಿಗೆ ಕಾಂಗ್ರೆಸ್ ಯುವ ವಿಭಾಗದ ನಗರ ಉಪಾಧ್ಯಕ್ಷ  ನ್ಯಾ। ರೋಹನ್ ಪಿ ಶೆಟ್ಟಿಯವರೂ  ಬಿಜೆಪಿಗೆ ಸೇರ್ಪಡೆಗೊಂಡರು .

ಸದಾನಂದ  ಶೆಟ್ಟಿಯವರ ಪತ್ನಿ ಸುಜಾತಾ ಎಸ್ ಶೆಟ್ಟಿ ಕಾಂಗ್ರಸ್ ನಿಂದ ಗೆದ್ದು ನಗರಸೇವಕಿಯಾಗಿದ್ದಾರೆ . ಸದಾನಂದ ಶೆಟ್ಟಿಯವರ ಸೇರ್ಪಡೆಯಿಂದ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ -ಶಿವಸೇನೆ  ಮೈತ್ರಿ ಅಭ್ಯರ್ಥಿ ಸುನಿಲ್ ಕಾಂಬ್ಳೆ ಯವರಿಗೆ ಲಾಭವಾಗಲಿದೆ . ಮಂಗಳ್ ವಾರ್ ಪೇಟೆ ,ಸೋಮವಾರ್  ಪೇಟ್ ,ರಾಸ್ತಾ ಪೇಟ್ ,ಕಸ್ಬಾ ಪೆಟ್ ಪರಿಸರದಲ್ಲಿ ಸದಾನಂದ್ ಶೆಟ್ಟಿಯವರ ಪ್ರಸಿದ್ಧಿ ಹೆಚ್ಚಾಗಿದ್ದು ಅಪಾರ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದಾರೆ . ಮಂಗಳ್ ವಾರ್ ಪೇಟ್ ಪರಿಸರದಿಂದ ಬಹಳಷ್ಟು ವರ್ಷಗಳಿಂದ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದು ಇಲ್ಲಿನ ಜೋಪಡಿ ನಿವಾಸಿಗಳಿಗೆ ಪುನರ್ವಸತಿ ನಿರ್ಮಿಸಿಕೊಡುವಲ್ಲಿ ಇವರ ಕೊಡುಗೆ ಬಹಳಷ್ಟಿದೆ . ಇವರ ಹಿರಿಯ ಸಹೋದರ ಜಯ ಕೆ ಶೆಟ್ಟಿ ೧೯೭೨ ರಲ್ಲಿ ಪುಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಕನ್ನಡಿಗ ನಗರಸೇವಕರಾಗಿ ಆಯ್ಕೆಗೊಂಡಿದ್ದರು . ಇವರ ಸಹೋದರಿ ದೇವಕಿ ಶೆಟ್ಟಿಯವರೂ ಮಾಜಿ ನಗರಸೇವಕಿಯಾಗಿ ಸೇವೆ ಸಲ್ಲಿಸಿದ್ದಾರೆ .

ಸದಾನಂದ ಶೆಟ್ಟಿಯವರು ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್  ಬಯಸಿದ್ದರು . ಆದರೆ ಕಾಂಗ್ರೆಸ್ ಟಿಕೆಟ್ ನೀಡದೆ ನಗರದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ರಮೇಶ್ ಬಾಗ್ವೆಯವರಿಗೆ ಟಿಕೆಟ್ ನೀಡಿತ್ತು . ಇದರಿಂದ ನೊಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಕೊನೆಘಳಿಗೆಯಲ್ಲಿ ನಾಮಪತ್ರ ಹಿಂದೆಗೆದುಕೊಂಡಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ