ಪುಣೆ ಬಂಟರ  ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸಮ್ಮಾನ ಸಮಾರಂಭ- ಕಿರಣ್ ವಾರ್ತಾ

0
139
ಸಮಾಜಕ್ಕಾಗಿ ಸೇವೆ ಸಲ್ಲಿಸಿದ  ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸುವುದು ನಮ್ಮ ಕರ್ತವ್ಯ -ಸಂತೋಷ್ ಶೆಟ್ಟಿ 
 
 ಪುಣೆ : (www.kiranvarta.com)ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಪ್ರಾಮಾಣಿಕ ವಾಗಿ ಶ್ರಮಿಸಿದ ಹಾಗೂ ನಮ್ಮ ಸಮಾಜದ ಉದ್ಧಾರಕ್ಕಾಗಿ  ಸದಾ ತತ್ಪರರಾಗಿರುವ ನಮ್ಮ ಸಂಘದ ಮಾಜಿ ಅಧ್ಯಕ್ಷರಾದ ಪ್ರೊ ।ಸುಬ್ಬಣ್ಣ ಶೆಟ್ಟಿ ಹಾಗೂ ನಿವೃತ್ತ ಮೇಜರ್ ಜನರಲ್ ಡಾ ।ಜಯಕರ ಶೆಟ್ಟಿಯವರನ್ನು ಗೌರವಿಸುವುದು ನಮ್ಮ ಕರ್ತವ್ಯವೆಂದು ನಾನು ಭಾವಿಸುತ್ತೇನೆ  ಸಂಘದ ಭವನದ ಲೋಕಾರ್ಪಣೆಯ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಗಿತ್ತು . ಆದರೆ ಆ ಕಾರ್ಯಕ್ರಮಕ್ಕೆ ಅವರಿಗೆ ಬರಲಾಗದಿದ್ದುದರಿಂದ ಇಂದಿನ  ಈ ಕಾರ್ಯಕ್ರಮವನ್ನೇರ್ಪಡಿಸಿದ್ದು ಇಂದು ಅವರನ್ನು ಸಮ್ಮಾನಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು .
ಅವರು ಸೆ 26 ರಂದು ಸಂಘದ  ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ “ಮೊಳಹಳ್ಳಿ ಮಂಜಯ್ಯ ಹೆಗ್ಡೆ” ಸಭಾಭವನದಲ್ಲಿ ಹಮ್ಮಿಕೊಂಡ ಸಂಘದ ಮಾಜಿ ಅಧ್ಯಕ್ಷರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಮ್ಮ ಭವನ ನಿರ್ಮಾಣಗೊಂಡ ನಂತರ  ಸಂಘದ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಅದಕ್ಕೆ ಪೂರಕವಾಗಿ ನಮ್ಮ ಹಿರಿಯರನ್ನು ಗೌರವಿಸುವಂತಹ ಇಂದಿನ ಕಾರ್ಯಕ್ರಮ ಅರ್ಥಪೂರ್ಣವೆಂಬ ಭಾವನೆ ನನ್ನದಾಗಿದೆ. ನಮ್ಮ ಸಂಘವು ಇಂದು  ಸುಸಜ್ಜಿತವಾದ ಭವನವನ್ನು ಹೊಂದಿದ್ದರೆ ಅಥವಾ ಸಂಘವು ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದ್ದರೆ ನಮ್ಮ ಹಿರಿಯರಾದ ಮಾಜಿ ಅಧ್ಯಕ್ಷರುಗಳ ಮಾರ್ಗದರ್ಶನ ,ಸಂಘದ ಪದಾಧಿಕಾರಿಗಳೆಲ್ಲರ ಶ್ರಮ ಹಾಗೂ ದಾನಿಗಳ ನೆರವಿನಿಂದಾಗಿದೆ . ಅವರೆಲ್ಲರೂ ಸಂಘದ ಆಧಾರ  ಆಧಾರ ಸ್ಥಂಭವಾಗಿದ್ದಾರೆ . ಸಂಘದ ಮಹಾದಾನಿಗಳನ್ನೊಳಗೊಂಡ ಚಿಂತಕರ ಚಾವಡಿಯನ್ನು ಈಗಾಗಲೇ ರಚಿಸಲಾಗಿದ್ದು ಭವಿಷ್ಯದಲ್ಲಿ ಸಂಘದ . ಅಭಿವೃದ್ಧಿಗೆ ಚಿಂತಕರ ಚಾವಡಿಯಲ್ಲಿ ಸಮಾಲೋಚಿಸಿ ಮುಂದಡಿಯಿಡಲಾಗುವುದು ಎಂದರು  .
ಸಂಘದ ಮಾಜಿ ಅಧ್ಯಕ್ಷರಾದ ಪ್ರೊ । ಸುಬ್ಬಣ್ಣ ಶೆಟ್ಟಿ ಹಾಗೂ ನಿವೃತ್ತ ಮೇ.  ಜ .ಡಾ।ಜಯಕರ ಶೆಟ್ಟಿಯವರನ್ನು ಸಂಘದ ವತಿಯಿಂದ ಹೊದೆಸಿ ,ಪೇಟ ತೊಡಿಸಿ , ಸ್ಮರಣಿಕೆ  ,ಫಲ ಪುಷ್ಪ ,ಸಮ್ಮಾನ ಪತ್ರಗಳನ್ನು ನೀಡಿ ಸಮ್ಮಾನಿಸಲಾಯಿತು .     ವೇದಿಕೆಯಲ್ಲಿ ಅತಿಥಿಗಳಾಗಿ ನಾರಾಯಣ ನೇತ್ರಾಲಯ ಬೆಂಗಳೂರು  ಕಾರ್ಯಾಧ್ಯಕ್ಷರಾದ ಡಾ। ಕೆ . ಭುಜಂಗ ಶೆಟ್ಟಿ ,ದಾವಣಗೆರೆ-ಚಿತ್ರದುರ್ಗ  ಬಂಟರ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ,ಮ್ಯಸೂರು ಬಂಟರ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ  ಗಣೇಶ್ ಎನ್ ಹೆಗ್ಡೆ ,ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ , ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ,ಮೋಹನ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಕೋಶಾಧಿಕಾರಿ ವೈ . ಚಂದ್ರಹಾಸ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ,ಯುವ  ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ , ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ ಶೆಟ್ಟಿ ಉಪಸ್ಥಿತರಿದ್ದರು . ಈ ಸಂದರ್ಭ ಸಮ್ಮಾನಕ್ಕುತ್ತರಿಸಿ ಪ್ರೊ |ಸುಬ್ಬಣ್ಣ  ಶೆಟ್ಟಿಯವರು ಮಾತನಾಡುತ್ತಾ ನನ್ನ 90 ನೆಯ ಹುಟ್ಟುಇಹಬ್ಬದ ಸಂದರ್ಭ ದೊರೆತ ಸಂಘದ ಪ್ರೀತಿಯ ಸಮ್ಮಾನಕ್ಕೆ ಸಂಘದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳಿಗೆ ಚಿರಋಣಿಯಾಗಿದ್ದೇನೆ . ಈ ಸಂಘ ಬೆಳೆದ ರೀತಿಯನ್ನು ಇಂದು ಕಾಣುವಾಗ ಬಹಳಷ್ಟು ಸಂತೋಷವಾಗುತ್ತಿದೆ .  ಈ ಸಂಘ ಸ್ಥಾಪನೆಯ  ಸಂದರ್ಭದಲ್ಲಿ ಸಂಘದೊಂದಿಗಿದ್ದು ನಂತರದ  ದಿನಗಳಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಸಂಘದೊಂದಿಗೆ ತಾವಿದ್ದ  ಕಾಲದಲ್ಲಿ ಸಂಘದ ಚಟುವಟಿಕೆಗಳನ್ನು ಮೆಲುಕು ಹಾಕಿದರು .
ಪ್ರೊ |ಸುಬ್ಬಣ್ಣ  ಶೆಟ್ಟಿ

ಮೇ . ಜ . ಡಾ|ಜಯಕರ ಶೆಟ್ಟಿಯವರು ಮಾತನಾಡಿ ಪುಣೆ ಬಂಟರ ಸಂಘದಿಂದ ಮಾಜಿ  ಅಧ್ಯಕ್ಷನಾಗಿ ಕಿಂಚಿತ್ ಸೇವೆ ಸಲ್ಲಿಸಿದ ನನಗೆ ಇಂದು ಕರೆದು ಗೌರವಿಸಿರುವುದಕ್ಕೆ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ . ಸಂಘವು ವಿವಿಧ  ಸಾಮಾಜಿಕ ,ಸಾಂಸ್ಕೃತಿಕ ,ಶೈಕ್ಷಣಿಕ ಕಾರ್ಯಗಳ ಮೂಲಕ ಅದ್ಭುತ ಪ್ರಗತಿಯನ್ನು ಸಾಧಿಸಿರುವುದನ್ನು ಕಂಡು ನಿಜಕ್ಕೂ ಹೆಮ್ಮೆಯಾಗುತ್ತಿದೆ .ಇದರೊಂದಿಗೆ ಸಮಾಜಬಾಂಧವರೆಲ್ಲರ ಸಹಕಾರದಿಂದ ಸುಂದರವಾದ ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿರುವುದು ಮಹತ್ತರವಾದ ಸಾಧನೆಯಾಗಿದೆ . ನಾವು ದೈನಂದಿನ ಜೀವನದಲ್ಲಿ ನಮ್ಮ ಆರೋಗ್ಯವಂತರಾಗಿ ಬಾಳಬೇಕಾದರೆ ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಹಾಗೂ ಯಾವ ರೀತಿಯ ಸಾತ್ವಿಕ ಆಹಾರಗಳನ್ನು ಸೇವಿಸಬೇಕಾಗಿದೆ ಎಂಬ ಆರೋಗ್ಯ ಮಾಹಿತಿಯನ್ನು ನೀಡಿದರು .

ಡಾ|ಜಯಕರ ಶೆಟ್ಟಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ನಾರಾಯಣ ನೇತ್ರಾಲಯ ಬೆಂಗಳೂರು  ಕಾರ್ಯಾಧ್ಯಕ್ಷರಾದ ಡಾ। ಕೆ . ಭುಜಂಗ ಶೆಟ್ಟಿಯವರು ಮಾತನಾಡಿ ಇಂದಿನ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳಷ್ಟು ಸಂತೋಷ ನೀಡಿದೆ . ಸಂಘವನ್ನು ಕಟ್ಟಿ ಬಿ ಬೆಳೆಸಿದ ಹಿರಿಯರನ್ನು ಗೌರವಿಸುವ ಕಾರ್ಯ ಅಭಿನಂದನೀಯವಾಗಿದೆ . ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳೆಲ್ಲರಿಗೂ ವಂದನೆಗಳು . ಭವಿಷ್ಯದ್ಲಲಿ ಈ ಸಂಘ ಉತ್ತರೋತ್ತರ ಪ್ರಗತಿಯನ್ನು ಕಾಣಲಿ  ಎಂದರು .  ದಾವಣಗೆರೆ-ಚಿತ್ರದುರ್ಗ  ಬಂಟರ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮಾತನಾಡಿ ಪುಣೆ ಬಂಟರ ಸಂಘದ ಸಮಾಜಮುಖಿ ಕಾರ್ಯಗಳು ಅಭಿನಂದನೀಯವಾಗಿದೆ .ಮಾಜಿ ಅಧ್ಯಕ್ಷರುಗಳ ಹಾಗೂ  ಉತ್ಸಾಹಿ ಕಾರ್ಯಕರ್ತರ ತಂಡ ಸಂಘವನ್ನು ಉತ್ತಮವಾಗಿ ಬೆಳೆಸಿದೆ . ಭವಿಷ್ಯದಲ್ಲಿ ಸಂಘ ಇನ್ನಷ್ಟು ಪ್ರಗತಿಯನ್ನು ಕಾಣಲಿ ಎಂದರು .  ಮ್ಯಸೂರು ಬಂಟರ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ  ಗಣೇಶ್ ಎನ್ ಹೆಗ್ಡೆ ಮಾತನಾಡಿ ಪುಣೆ ಬಂಟರ ಸಂಘದ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾಗಿದೆ . ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಸುಂದರವಾದ ಭವನ ನಿರ್ಮಾಣವೂ ಸಂಘದ ಹೆಗ್ಗಳಿಕೆಯಾಗಿದೆ . ಸಂಘಕ್ಕಾಗಿ ದುಡಿದ ಹಿರಿಯರು ,ಕಾರ್ಯಕಾರಿ ಸಮಿತಿ ಸದಸ್ಯರು ,ಮಹಿಳಾ ವಿಭಾಗ ,ಯುವ ವಿಭಾಗ ,ಹಿರಿಕಿರಿಯರೆಲ್ಲರ ಒಗ್ಗೂಡುವಿಕೆ ಸಂಘದ ಯಶಸ್ಸಿನ ಗುಟ್ಟಾಗಿದೆ .ಈ ಸಂಘ ಇನ್ನಷ್ಟು ಬೆಳವಣಿಗೆಯನ್ನು ಕಾಣಲಿ .ಭವಿಷ್ಯದಲ್ಲಿ ಯುವ ಸಮುದಾಯವನ್ನು  ಸಂಘದೊಂದಿಗೆ ಜೋಡಿಸುವಲ್ಲಿ ಹೆಚ್ಚು ಒತ್ತು  ನೀಡಬೇಕಾಗಿದೆ ಎಂದರು .
 ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ದಿ . ಗೋವರ್ಧನ ಶೆಟ್ಟಿಯವರ ಧರ್ಮಪತ್ನಿ ಚಂದ್ರಕಲಾ ಜಿ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು .
ಅಧ್ಯಕ್ಷ ಸಂತೋಷ್ ಶೆಟ್ಟಿ ಸ್ವಾಗತಿಸಿದರು . ನಿಧಿ ಕೆ ರೈ ಹಾಗೂ ಎ . ಪ್ರಶಾಂತ್ ಶೆಟ್ಟಿ ಸಮ್ಮಾನ ಪತ್ರವನ್ನು  ವಾಚಿಸಿದರು . ಪತ್ರಕರ್ತ ಕಿರಣ್ ಬಿ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು . ಸಂಘದ ಪದಾಧಿಕಾರಿಗಳಾದ  ವಿಶ್ವನಾಥ ಶೆಟ್ಟಿ ವಂದಿಸಿದರು . ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಕುಶಲ್  ಹೆಗ್ಡೆ ,ಜಯಂತ್ ಶೆಟ್ಟಿ ,ಸೀತಾರಾಮ ಶೆಟ್ಟಿ ,ಸದಾನಂದ ಕೆ ಶೆಟ್ಟಿ ,ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ,ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ವಿಜಯ್ ಎಸ್ ಶೆಟ್ಟಿ ಬೋರ್ಕಟ್ಟೆ , ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ನಾರಾಯಣ ಕೆ ಶೆಟ್ಟಿ ಎರ್ಮಾಳ್ ,ವಿಶ್ವನಾಥ ಶೆಟ್ಟಿ ಎರ್ಮಾಳ್ ,ಎರ್ಮಾಳ್ ಸೀತಾರಾಮ ಶೆಟ್ಟಿ ,ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷರಾದ ಆನಂದ್ ಶೆಟ್ಟಿ ಮಿಯ್ಯಾರ್ ,ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ಯಾರ್ ,ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ,ಯುವ ವಿಭಾಗ ,ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ,ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಉಪಸ್ಥಿತರಿದ್ದರು . ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ