ಪುಣೆ ಬಂಟರ ಸಂಘ ಭಕ್ತಿ ಸಂಭ್ರಮದ ಗಣೇಶೋತ್ಸವ,ಗಣಪತಿ ವಿಸರ್ಜನೆ -ಕಿರಣ್ ವಾರ್ತಾ

0
218

ಪುಣೆ :  (ಕಿರಣ್ ವಾರ್ತಾ -www.kiranvarta.com)ಪುಣೆ ಬಂಟರ ಸಂಘದ ವತಿಯಿಂದ ಸೆ ೨ ಸೋಮವಾರದಂದು ಪ್ರಥಮ ವರ್ಷದ  ಗಣೇಶೋತ್ಸವಕ್ಕೆ  ಸಂಘದ  ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ  ಚಾಲನೆ ನೀಡಲಾಯಿತು  .  ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರ ನೇತೃತ್ವದಲ್ಲಿ  ಬೆಳಗ್ಗೆ  ಬಂಟರ ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ಗಣೇಶ ಮೂರ್ತಿಯನ್ನು  ಪ್ರತಿಷ್ಠಾಪಿಸಲಾಯಿತು  . ಸೆ ೪ ರಂದು  ಹರೀಶ್ ಭಟ್ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳು ಪೂಜಾ ವಿಧಿಗಳಲ್ಲಿ ಭಾಗವಹಿಸಿ ಆರತಿ ಬೆಳಗಿ  ಪ್ರಾರ್ಥಿಸಿದರು .

ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಮುಂಬಯಿ ಇವರಿಂದ “ಭಕ್ತ ಗೋರ ಕುಂಬಾರ ” ಹರಿಕಥಾ ಕಾಲಕ್ಷೇಪ ನಡೆಯಿತು .ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಹಾಗೂ ಬಳಗದವರನ್ನು ಪುಷ್ಪಗುಚ್ಛ ,ಸ್ಮರಣಿಕೆ ನೀಡಿ ಗೌರವಿಸಲಾಯಿತು .  ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ಗಣಪತಿ ದೇವರಿಗೆ ಮಹಾಮಂಗಳಾರತಿ ನಡೆದು ತೀರ್ಥಪ್ರಸಾದ ವಿತರಣೆಯಾಯಿತು . ನಂತರ ಗಣಪತಿ ದೇವರನ್ನು ಬ್ಯಾಂಡ್ ವಾದ್ಯಗಳೊಂದಿಗೆ  ಶೋಭಾಯಾತ್ರೆಯ ಮೂಲಕ ಭವನದ ಆವರಣದಲ್ಲಿ ವಿಸರ್ಜಿಸಲಾಯಿತು . ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷರಾದ ಆನಂದ್ ಶೆಟ್ಟಿ ಮಿಯ್ಯಾರ್ ,ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಗೌರವ ಕೋಶಾಧಿಕಾರಿ ವೈ . ಚಂದ್ರಹಾಸ ಶೆಟ್ಟಿ ,ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಪುತ್ತೂರು ,ತಾರಾನಾಥ ರೈ ಮೇಗಿನಗುತ್ತು ,ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಪೂಂಜಾ ಮತ್ತು ಪದಾಧಿಕಾರಿಗಳು ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಮತ್ತು ಸದಸ್ಯರು ,ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ ಮತ್ತು ಸದಸ್ಯರು  ಮತ್ತಿತರರು ಉಪಸ್ಥಿತರಿದ್ದರು . ಅನ್ನಸಂತರ್ಪಣೆಯೊಂದಿಗೆ  ಕಾರ್ಯಕ್ರಮ ಕೊನೆಗೊಂಡಿತು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ