ಪುಣೆ ಹೋಟೆಲ್ ಉದ್ಯಮಿ ಆತ್ಮಹತ್ಯೆ -ಕಿರಣ್ ವಾರ್ತಾ 

0
6446
ಪ್ರೇಮನಾಥ್ ಕೃಷ್ಣ ಶೆಟ್ಟಿ
ಪುಣೆ ,ಜೂನ್ . 25: (ಕಿರಣ್ ವಾರ್ತಾ -www.kiranvarta.com) ಲಾಕ್ ಡೌನ್  ಸಂದರ್ಭದಲ್ಲಿ ಪುಣೆ ನಗರದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಆತಂಕದ ವಿಷಯವಾಗಿದೆ , ಕಳೆದ ಒಂದು ವಾರದಲ್ಲೇ ನಗರದಲ್ಲಿ ಅಲ್ಲಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇದೆ . ಇದೇ ನಿಟ್ಟಿನಲ್ಲಿ ಇಂದು ಜೂನ್ 25 ರಂದು ಗುರುವಾರ ಬೆಳಗ್ಗೆ ಗಂಟೆ 9 ರ ಹೊತ್ತಿಗೆ ನಗರದ  ಸಿಂಹಘಡ್ ರಸ್ತೆಯ ಧಾಯರಿ ಪರಿಸರದ ರಾಜ್ ಹೋಟೆಲಿನಲ್ಲಿ ಹೋಟೆಲ್ ಉದ್ಯಮಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ . 
 ಸಿಂಹಘಡ್ ರಸ್ತೆಯ ಪೊಲೀಸ್ ಠಾಣೆಯ  ಮಾಹಿತಿಯಂತೆ ಪ್ರೇಮನಾಥ್ ಕೃಷ್ಣ ಶೆಟ್ಟಿ (43,ಹೋಟೆಲ್ ರಾಜ್ ,ಧಾಯರಿ ,ಹವೇಲಿ ತಾಲೂಕ್ ,ಪುಣೆ )ಯವರು ಆತ್ಮಹತ್ಯೆ ಮಾಡಿಕೊಂಡಿರುವ ಹೋಟೆಲ್ ಉದ್ಯಮಿಯಾಗಿದ್ದು  ಕಳೆದ 7 ವರ್ಷಗಳಿಂದ ರಾಜ್ ಹೋಟೆಲ್ ನಲ್ಲಿ ಪಾಲುದಾರರಾಗಿದ್ದರು . ಲಾಕ್ ಡೌನ್ ನಿಂದಾಗಿ ಕಳೆದ 4 ತಿಂಗಳಿನಿಂದ ಹೋಟೆಲ್ ಬಂದ್ ಆಗಿದ್ದು ಡಿಪ್ರೆಶನ್ ನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ . ಗುರುವಾರ ಬೆಳಗ್ಗೆ ಗಂಟೆ 9:30 ರ ಸುಮಾರಿಗೆ ಹೋಟೆಲ್ ಕಾರ್ಮಿಕನೊಬ್ಬ ಹೋಟೆಲ್ ತೆರೆದಾಗ  ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ಕಂಡುಬಂದಿದೆ . ಮೃತರು ಈ ಬಗ್ಗೆ ಡೆತ್ ನೋಟ್  ನ್ನು ಬರೆದಿಟ್ಟಿದ್ದು “ಲಾಕ್ ಡೌನ್ ನಿಂದಾಗಿ ಹೋಟೆಲ್ ಬಂದ್ ಆಗಿದ್ದು ಪರಿಸ್ಥಿತಿ ಹದಗೆಟ್ಟಿದ್ದು  ತೀವ್ರ ಡಿಪ್ರೆಶನ್  ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ . ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ . ನಾನು ಸ್ವತಃ ಇಚ್ಚೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ “ಎಂದು ಬರೆಯಲಾಗಿದೆ .  
  ಮೂಲಗಳ ಪ್ರಕಾರ ಮೃತರು ಅವಿವಾಹಿತರಾಗಿದ್ದು ಯಾವುದೇ ರೀತಿಯ ಉದ್ವೇಗದ ಮಾನಸಿಕತೆಯನ್ನು ಹೊಂದಿರಲಿಲ್ಲ. ಹೋಟೆಲ್ ಹಿಂದುಗಡೆಯೇ ಫ್ಲಾಟ್ ನಲ್ಲಿ ವಾಸವಾಗಿದ್ದರು .ಇವರು ತಮ್ಮ ಸಹೋದರನಿಗೆ ನಾಲ್ಕು ದಿನ ತಾನು ಹೊರಹೋಗುವುದಾಗಿ ಮೆಸೇಜ್ ನ್ನು ಕಳುಹಿಸಿದ್ದರು . ಈ ಬಗ್ಗೆ ಸಂದೇಹಗೊಂಡು ಅವರಿಗೆ ಫೋನಾಯಿಸಿದಾಗ ಮೊಬೈಲ್ ಕರೆ ಸ್ವೀಕರಿಸುತ್ತಿರಲಿಲ್ಲ . ನಂತರ ಹೋಟೆಲ್ ಮ್ಯಾನೇಜರ್ ಕೋಡಾ ಮೊಬೈಲ್ ಗೆ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿರಲಿಲ್ಲ . ಸಂದೇಹದಿಂದ ಅವರ ಫ್ಲಾಟ್ ಗೆ ಹೋದಾಗ ಬೀಗ ಹಾಕಲಾಗಿತ್ತು . ನಂತರ  ಹೋಟೆಲ್ ಗೆ ಬಂದಾಗ ಹೋಟೆಲ್  ಬಾಗಿಲು ಹಾಕಲಾಗಿತ್ತು  . ಆದರೆ ಬೀಗ ಹಾಕಿರಲಿಲ್ಲ . ನಂತರ ಹೋಟೆಲ್ ತೆರೆದು ಒಳಗಡೆ ನೋಡಿದಾಗ ಫ್ಯಾನ್ ನಲ್ಲಿ ದೇಹ ನೇತಾಡುತ್ತಿತ್ತು ಎನ್ನಲಾಗಿದೆ .  
 ಅವರ ಸಮೀಪದ ಮಿತ್ರರೊಬ್ಬರನ್ನು ಈ ಬಗ್ಗೆ ಸಂಪರ್ಕಿಸಿದಾಗ ” ಪ್ರೇಮ್ ತುಂಬಾ ನಗುನಗುತ್ತಿರುವ ಬಿಂದಾಸ್ ವ್ಯಕ್ತಿಯಾಗಿದ್ದರು .ಇಂದು ಬೆಳಗ್ಗೆ 7 ಗಂಟೆಗೂ ವಾಟ್ಸ್ ಆಪ್ ನಲ್ಲೂ ಗುಡ್ ಮಾರ್ನಿಂಗ್ ಸಂದೇಶವನ್ನು ಕಳುಹಿಸಿದ್ದರು . ಎರಡು ದಿನಗಳ ಹಿಂದೆ ಕರೆ ಮಾಡಿ ಲಾಕ್ ಡೌನ್ ಬಗ್ಗೆ ಮಾತನಾಡಿ ಲಾಕ್ಡೌನ್ ನಿಂದಾಗಿ ಹೋಟೆಲ್ ಉದ್ಯಮ ಕಷ್ಟಕರವಾಗಿದ್ದು ಪ್ರತಿಯೊಬ್ಬರಿಗೂ ಆತಂಕದ ಸ್ಥಿತಿ ನಿರ್ಮಾಣವಾಗಿದೆ . ಜನರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಮೂರ್ಖತನವಾಗಿದೆ . ನಟ ಸುಶಾಂತ್ ಮೂರ್ಖತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ನಾನು ಮಾತ್ರ ಲಾಕ್ ಡೌನ್ ನಲ್ಲಿ ಉಂಡು ತಿಂದು ಆರಾಮವಾಗಿದ್ದೇನೆ “ಎಂದಿದ್ದರು . ಅವರ ಆತ್ಮಹತ್ಯೆ ನಂಬಲಾಗುತ್ತಿಲ್ಲ ಎಂದರು . 
ಪ್ರೇಮ್ ನಾಥ್ ಶೆಟ್ಟಿಯವರು ಇಂದು ಬೆಳಗ್ಗೆ ಗಂಟೆ 6:14 ಕ್ಕೆ  ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಾಕಿಕೊಂಡ ತನ್ನ ಜೀವನದ  ಕೊನೆಯ ಪೋಸ್ಟ್ ಗಳು . 


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )


ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ