ಮೇ ,13:ಪುಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ

0
76

ಪುಣೆ : (Kiranvarta)ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಗಡಿನಾಡು ಘಟಕ ಮತ್ತು ಕನ್ನಡ ಸಂಘ ಪುಣೆ ಇವರ ಸಂಯುಕ್ತ ಆಶ್ರಯದಲ್ಲಿ ಮೇ 13,  ಸೋಮವಾರ ಸಂಜೆ ಗಂಟೆ 5:00  ರಿಂದ ಪುಣೆ ಕನ್ನಡ ಸಂಘದ ಡಾ।ಕಲ್ಮಾಡಿ ಶ್ಯಾಮರಾವ್ ಹೈಸ್ಕೂಲ್ ಸಭಾಂಗಣ ,ಕೇತ್ಕರ್ ರೋಡ್ ,ಪುಣೆ ಇಲ್ಲಿ  ಕನ್ನಡ  ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ .

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷರಾದ ಬಸವರಾಜ ಮಸೂತಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು  ಪುಣೆಯ ಹಿರಿಯ ಹಾಗೂ ಪುಣೆ ಕನ್ನಡ ಸಂಘದ ಉಪಾಧ್ಯಕ್ಷರಾದ ಇಂದಿರಾ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ .

ಕೃ .ಶಿ .ಹೆಗಡೆ

ಕೃಷ್ಣ ಇತ್ನಾಳ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆಯ ಹಿರಿಯ ಪಾಂಗಾಳ ವಿಶ್ವನಾಥ ಶೆಟ್ಟಿ ,ಗಾಂಧಿವಾದಿ ಹಾಗೂ ಹಿರಿಯ ಸಾಹಿತಿ ಕೃಷ್ಣ ಇತ್ನಾಳ ,ಪುಣೆ ಬಾಲಭಾರತಿಯ ಸಹಾಯಕ ವಿಶೇಷಾಧಿಕಾರಿ ಆರ್ . ಎಮ್ . ಗಣಾಚಾರಿ ,ಕಿರಣ್ ವಾರ್ತಾ ಪ್ರಧಾನ ಸಂಪಾದಕ ,ಪುಣೆಯ ಪತ್ರಕರ್ತರಾದ ಕಿರಣ್ ಬಿ ರೈ ಕರ್ನೂರು ಹಾಗೂ ಡಾ ।ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಚಂದ್ರಕಾಂತ ಹಾರಕುಡೆ ಉಪಸ್ಥಿತರಿರಲಿದ್ದಾರೆ .

ಕಿರಣ್ ಬಿ ರೈ ಕರ್ನೂರು

ಈ ಸಂದರ್ಭ” ಕನ್ನಡ ಸಾಹಿತ್ಯಕ್ಕೆ ಪುಣೆ ಕನ್ನಡಿಗರ ಕೊಡುಗೆ “ವಿಷಯದಲ್ಲಿ ಪುಣೆಯ ಹಿರಿಯ ಸಾಹಿತಿ ಹಾಗೂ ಮರಾಠಿ -ಕನ್ನಡ ಸ್ನೇಹವರ್ಧನ ಕೇಂದ್ರದ ಕಾರ್ಯದರ್ಶಿಗಳಾದ ಕೃ .ಶಿ .ಹೆಗಡೆ ಉಪನ್ಯಾಸ ನೀಡಲಿದ್ದಾರೆ .

ಆರ್ . ಎಮ್ . ಗಣಾಚಾರಿ

ಚಂದ್ರಕಾಂತ ಹಾರಕುಡೆ

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಉಪಸ್ಥಿತರಿರುವಂತೆ  ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷರಾದ ಬಸವರಾಜ ಮಸೂತಿ ,ಗೌರವ ಕಾರ್ಯದರ್ಶಿಗಳಾದ ಸುನೀಲ್  ಗಿರಿಮಲ್ಲಪ್ಪ ಭರಮಾ ,ಗೌರವ ಕೋಶಾಧಿಕಾರಿಗಳಾದ ಶಿವಚಲ ಕುಮಾರ ಸಾಲಿಮಠ ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಪುಣೆಯ ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರುಗಳು ವಿನಂತಿಸಿದ್ದಾರೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ