ಪುಣೆಯಲ್ಲಿ 25 ವರ್ಷದ ಗರ್ಭವತಿ ನರ್ಸ್ ಕೊರೋನಾ ಗೆ ಬಲಿ -ಕಿರಣ್ ವಾರ್ತಾ 

0
193
ಪುಣೆ : ಕೊರೋನಾ ಮಹಾಮಾರಿ ಯಾವುದೇ ಜಾತಿ ,ಮತ ,ಬಡವ ,ಶ್ರೀಮಂತನೆನ್ನುವ ಭೇದವಿಲ್ಲದೆ ಎಲ್ಲರನ್ನೂ ಮಾರಿಯನ್ನಾಗಿ ಕಾಡುತ್ತಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ . ದೇಶದಾದ್ಯಂತ ಈಗಾಗಲೇ ಸಾವಿರಾರು ಜನರನ್ನು ತನ್ನ ತೆಕ್ಕೆಯಲ್ಲಿ ಬಲಿ  ತೆಗುದುಕೊಂಡಿದ್ದು ಇಂತಹದೇ ಘಟನೆ ಪುಣೆಯಲ್ಲಿ ವರದಿಯಾಗಿದೆ . ಪುಣೆ ವಾರ್ಜೆ ಮಾಲ್ವಾಡಿಯಲ್ಲಿ 25 ವರ್ಷದ ಗರ್ಭವತಿ ನರ್ಸ್ ಒಬ್ಬರು ಕೊರೋನಾ ಬಾಧಿತಗೊಂಡು ಸಾವನ್ನಪ್ಪಿದ ದುಃಖಕರ ಘಟನೆ ನಡೆದಿದೆ . 
ಘಟನೆ ನಡೆಯುವ ಎರಡು ದಿವಸಕ್ಕೆ ಮೊದಲು ನರ್ಸ್ ಸೇವೆಯಲ್ಲಿ ತೊಡಗಿಕೊಂಡಿದ್ದರು . ಮೃತ ಮಹಿಳೆ ನಗರದ ಡೆಕ್ಕನ್ ನಲ್ಲಿನ ಸಂಜೀವನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು . ಅವರ ಪತಿ ಭಂಡಾರ್ ಕರ್  ರೋಡ್ ನಲ್ಲಿರುವ ಖಾಸಗಿ  ಲ್ಯಾಬ್ ನಲ್ಲಿ ಸೇವೆಯಲ್ಲಿದ್ದಾರೆ . ಐದು ತಿಂಗಳ ಗರ್ಭವತಿಯಾಗಿದ್ದ ಮಹಿಳೆ ಎರಡು ದಿವಸಕ್ಕೆ ಮೊದಲು ಗರ್ಭ ಧರಿಸಿರುವ ಹಿನ್ನೆಲೆಯಲ್ಲಿ  ರಜೆಯನ್ನು ತೆಗೆದುಕೊಂಡಿದ್ದರು . 
  ಶನಿವಾರದಂದು ಮೃತ ಮಹಿಳೆಗೆ ಸ್ವಲ್ಪ ಮಟ್ಟಿನ ಅಸೌಖ್ಯ ಗೋಚರಿಸಿದ್ದು  ಪತಿ ವಾರ್ಜೆಯಲ್ಲಿನ ಮಾಯಿ ಮಂಗೇಶ್ಕರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ನೀಡಿ ಸ್ವಲ್ಪ ಸಮಯದಲ್ಲಿ ಮನೆಗೆ ವಾಪಸಾಗಿದ್ದರು . ನಂತರ ಶನಿವಾರ ಆರೋಗ್ಯವಾಗಿದ್ದ ಇವರು ರವಿವಾರ ಮತ್ತೊಮ್ಮೆ ವಾಂತಿ ಹಾಗೂ ತಳಮಳಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು . ಅಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಅಧಿಕವಿದ್ದುದರಿಂದ ಸ್ವಲ್ಪ ಸಮಯದ ನಂತರ ತಪಾಸಣೆ ನಡೆಸಿ ಮನೆಗೆ ಬಂದಿದ್ದರು . ತಪಾಸಣೆಯಲ್ಲಿ ಕೋವಿಡ್ -19 ಪಾಸಿಟಿವ್ ಬಂದಿದ್ದು ಮತ್ತೊಮ್ಮೆ ತೀವ್ರತರದ ಅಸೌಖ್ಯವುಂಟಾಗಿದ್ದರಿಂದ ಸೋಮವಾರ ಬೆಳಗ್ಗೆ ಸಂಜೀವನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು ಆದರೆ ಬೆಳಗ್ಗೆ 11 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು .ಅವರ ಪತಿಯೂ ಕೊರೋನಾ ಪಾಸಿಟಿವ್ ಆಗಿದ್ದು ಹೋಮ್ ಕ್ವಾರಂಟೈನ್ ಮಾಡಲಾಗಿದೆ .  

 
  (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ