ಮುಂಬಯಿ ಕನ್ನಡ ದೈನಿಕ “ಕರ್ನಾಟಕ ಮಲ್ಲ” ಪತ್ರಿಕಾ ಸಮೂಹದ ಮಾಲಕ ಮುರಳೀಧರ್ (ಬಾಬಾ) ಶಿಂಗೋಟೆ ನಿಧನ-ಕಿರಣ್ ವಾರ್ತಾ

0
2332
ದಿ। ಮುರಳೀಧರ್ (ಬಾಬಾ) ಶಿಂಗೋಟೆ
ಪುಣೆ ,ಆ .06 :ಪತ್ರಿಕೋದ್ಯಮದಲ್ಲಿ ವಿಶಿಷ್ಟ ರೀತಿಯಿಂದ ಗುರುತಿಸಿಕೊಂಡು ತಾನೋರ್ವ ಮರಾಠಿಗರಾಗಿದ್ದರೂ ಕೂಡಾ ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಯನ್ನು ಬೆಳೆಸಿ ಕ ನ್ನಡ ಭಾಷೆಗೆ ಮಾನ್ಯತೆ ನೀಡಿ ಭಾಷಾ ಸೇತುವಾಗಿ ಕೊಡುಗೆಯನ್ನು ನೀಡಿದ ಮುಂಬಯಿ ಕನ್ನಡಿಗರ ಅಚ್ಚುಮೆಚ್ಚಿನ ಕನ್ನಡ ದೈನಿಕ “ಕರ್ನಾಟಕ ಮಲ್ಲ” ದ ಮಾಲಕ ಮುರಳೀಧರ್ ಅನಂತ ಅಲಿಯಾಸ್ ಬಾಬಾ ಶಿಂಗೋಟೆ, ಜುನ್ನರ್ ತಾಲೂಕಿನ ಗೈಮುಖ್ ವಾಡಿಯ ಸ್ವಗೃಹದಲ್ಲಿ ಇಂದು ಆಗಸ್ಟ್ 6, 2020 ರಂದು ನಿಧನರಾದರು.
ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಉಂಬ್ರಾಜ್ ಗ್ರಾಮದಲ್ಲಿ ಜನಿಸಿದ ಬಾಬಾ ಶಿಂಗೋಟೆ ನಾಲ್ಕನೇ ತರಗತಿ ತನಕ ಕಲಿತು ಹೊಟ್ಟೆಪಾಡಿಗಾಗಿ ಮುಂಬೈ ತಲುಪಿದರು. ಆರಂಭದಲ್ಲಿ ಹಣ್ಣು ಮಾರಾಟ,ನಂತರ ಬುವಾಶೇಠ್ ದಾಂಗಟ್ ಅವರಲ್ಲಿ ಪತ್ರಿಕೆಗಳನ್ನು ವಿತರಿಸಲು ಪ್ರಾರಂಭಿಸಿದರು. 1994 ರಲ್ಲಿ ಅವರು ಮುಂಬೈ ಚೌಫೇರ್ ಎಂಬ ಮರಾಠಿ ಭಾಷೆಯ ದಿನಪತ್ರಿಕೆಯನ್ನು ಪ್ರಕಟಿಸಿ ಇತರ ಭಾಷಾ ದಿನಪತ್ರಿಕೆಗಳಾದ ಕರ್ನಾಟಕ ಮಲ್ಲ, ದೈನಿಕ್ ಆಪ್ಲಾ ವಾರ್ತಾಹರ್, ದೈನಿಕ್ ಯಶೋಭೂಮಿ, ದೈನಿಕ್ ತಮಿಳ್ ಟೈಮ್ಸ್, ದೈನಿಕ್ ಹಿಂದ್ಮಾತಾ ಮತ್ತು ದೈನಿಕ್ ಪುಣ್ಯನಗರಿಯನ್ನು ಪ್ರಾರಂಭಿಸಿದರು.
ಅವರು ಪತ್ನಿ, ಮೂವರು ಗಂಡು ಮಕ್ಕಳು, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮುರಳೀಧರ್ ಶಿಂಗೋಟೆ ಅವರ ನಿಧನದಿಂದಾಗಿ ದಿನಪತ್ರಿಕೆಗಳ ಮಾರಾಟದಿಂದ ಮೊದಲ್ಗೊಂಡು ಪತ್ರಿಕಾ ವಿತರಕರಾಗಿ ನಂತರ ಪತ್ರಿಕಾ ಸಂಪಾದಕರಾಗಿ ಮುಂದೆ ಪತ್ರಿಕಾ ಸಮೂಹ ಬಳಗದ ಮಾಲಕನಾಗಿ ಅವರು ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆ ಅಪಾರವಾದುದಾಗಿದೆ .ಕನ್ನಡ -ಮರಾಠಿ ಭಾಷೆಗಳ ನಡುವಣ ಬಾಂಧವ್ಯವನ್ನು ಬೆಸೆದು ಓರ್ವ ಅಪ್ರತಿಮ ಮಾದರಿ ಪತ್ರಿಕೋದ್ಯಮಿಯಾಗಿ ಆದರ್ಶರಾಗಿ ಗುರುತಿಸಿಕೊಳ್ಳುವ ದಿವಂಗತ ಮುರಳೀಧರ ಶಿಂಗೊಟೆಯವರ ಆತ್ಮಕ್ಕೆ ಭಗವಂತ ಸದಾ ಚಿರಶಾಂತಿ ಸದ್ಗತಿಯನ್ನು ಕರುಣಿಸಲೆಂದು ದೇವರಲ್ಲಿ ಕಿರಣ್ ವಾರ್ತಾ ಬಳಗದ ಪ್ರಾರ್ಥನೆ .

  (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ . www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ