ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಅಮೃತಹಸ್ತಗಳಿಂದ ಎ 29 :ದುರ್ಗಾ ಸಂಜೀವನೀ ಮಣಿಪಾಲ್ ಹಾಸ್ಪಿಟಲ್ ಕಟೀಲು ಸೇವಾರ್ಪಣೆ

0
116

(ಚಿತ್ರ/ವರದಿ :ರೋನ್ಸ್ ಬಂಟ್ವಾಳ್ )

ಮುಂಬಯಿ ಎ 25 : (ಕಿರಣ್ ವಾರ್ತಾ -Kiranvarta) ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (ಮುಂಬಯಿ )ನ ಕಾರ್ಯಾಧ್ಯಕ್ಷರಾಗಿದ್ದು ಮಹಾನಗರ ಮುಂಬಯಿನ ಪ್ರತಿಷ್ಠಿತ  ತುಳು -ಕನ್ನಡಿಗ ವೈದ್ಯಾಧಿಕಾರಿ ಅಂಧೇರಿ ಪೂರ್ವದಲ್ಲಿನ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ  ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್,ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ ನ ಸದಸ್ಯ  ಬಿಎಸ್ ಕೆಬಿ ಅಸೋಸಿಯೇಶನ್ (ಗೋಕುಲ )ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ।ಸುರೇಶ್ ಎಸ್ ರಾವ್ ಕಟೀಲು ಅವರ ಕನಸಿನ ಯೋಜನೆ ಒಂದಾದ ದುರ್ಗಾ ಸಂಜೀವನಿ ಮಣಿಪಾಲ್ ಹಾಸ್ಪಿಟಲ್ ಕಟೀಲು ಇದೇ ಎಪ್ರಿಲ್ 29 ನೇ ಸೋಮವಾರ ಬೆಳಿಗ್ಗೆ ಆಸ್ಪತ್ರೆ ಆವರಣ ಕಟೀಲು ಇಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಅಧೋಕ್ಷಜ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಆಸ್ಪತ್ರೆಯನ್ನು ಲೋಕಾರ್ಪಣೆಗೈಯ್ಯಲಿದ್ದಾರೆ.

ಪೇಜಾವರ ಶ್ರೀಗಳು

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಅನುವಂಶಿಕೆ ಮೊಕ್ತೇಸರರು ,ಅನುವಂಶಿಕ ಅರ್ಚಕ ಶ್ರೀ ವಾಸುದೇವ ಅಸ್ರಣ್ಣ ಕಟೀಲು  ಶ್ರೀ ಕ್ಷೇತ್ರ ಕಟೀಲು ಇದರ ಆಡಳಿತ ಸಮಿತಿ ಅಧ್ಯಕ್ಷ,ಅನುವಂಶಿಕ ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು  ,ಮಣಿಪಾಲ್ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ (ಮಾಹೆ ) ಕುಲಾಧಿಪತಿಗಳಾದ ಡಾ।ಎಚ್ .ಎಲ್ .ಬಲ್ಲಾಳ್  ಮತ್ತು ಡಾ।ರಂಜನ್ ಪೈ ,ಮಾಹೆ ವೈದ್ಯಕೀಯ ಅಧೀಕ್ಷಕ ಡಾ।ಆನಂದ್ ವೇಣುಗೋಪಾಲ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ  ಅಂದು ಬೆಳಿಗ್ಗೆ 8:00 ಗಂಟೆಗೆ ನೆರವೇರಲಿರುವ ಪೂಜಾವಿಧಿಗಳಲ್ಲಿ ಪಾಲ್ಗೊಂಡು ಪೂರ್ವಾಹ್ನ 10:30 ಗಂಟೆಗೆ ಪೇಜಾವರ ಶ್ರೀಗಳು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ .

ಶ್ರೀ ವಾಸುದೇವ ಅಸ್ರಣ್ಣ ಕಟೀಲು

ಸನತ್ ಕುಮಾರ್ ಶೆಟ್ಟಿ

ಡಾ।ಎಚ್ .ಎಲ್ .ಬಲ್ಲಾಳ್

ರಾತ್ರಿ ಗಂಟೆ 8:30 ರಿಂದ ಆಸ್ಪತ್ರೆ ಆವರಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಸೇವೆ ನೆರವೇರಲಿದೆ . ಈ ಎಲ್ಲಾ ಕಾರ್ಯಕ್ರಮಗಳಿಗೆ ಹಾಗೂ ಮಧ್ಯಾಹ್ನ ಮತ್ತು ರಾತ್ರಿನಡೆಯುವ ಅನ್ನಸಂತರ್ಪಣೆಗೆ ತಮ್ಮ ಬಂಧು ,ಮಿತ್ರರೊಡಗೂಡಿ  ಚಿತ್ತೈಸಿ ಕಟೀಲೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ  ಸಂಜೀವನಿ ಚಾರಿಟೇಬಲ್ ಟ್ರಸ್ಟ್ ,ಮುಂಬಯಿ ಅಧ್ಯಕ್ಷ ಡಾ।ಸುರೇಶ್ ರಾವ್ ಕಟೀಲು ,ಟ್ರಸ್ಟಿಗಳಾದ  ಶ್ರೀಮತಿ ವಿಜಯಲಕ್ಷ್ಮಿ ಎಸ್ ರಾವ್ ,ಲಕ್ಷ್ಮೀಶ ಆಚಾರ್ಯ ,ಡಾ।ಶ್ರುತಿ ರಾವ್ ,ಡಾ।ದೇವಿಪ್ರಸಾದ್ ರಾವ್  ಡಾ|ಪ್ರಶಾಂತ್ ರಾವ್ ಈ ಮೂಲಕ ವಿನಂತಿಸಿದ್ದಾರೆ. 

ಡಾ।ಸುರೇಶ ಎಸ್ ರಾವ್

ಡಾ।ರಂಜನ್ ಪೈ

ಡಾ।ಆನಂದ್ ವೇಣುಗೋಪಾಲ್

ಕಟೀಲು ಪರಿಸರ ಮತ್ತು ದುರ್ಗಾ ಸಂಜೀವನಿ ಆಸ್ಪತ್ರೆ 

ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಟ್ರಸ್ಟ್ ಹಾಗೂ ಕೆಎಂಸಿ (ಮಾಹೆ) ಯೋಜನೆ ಇದಾಗಿದ್ದು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಡಾ।ಸುರೇಶ ಎಸ್ ರಾವ್ ತಾನು ಹುಟ್ಟಿ ಬೆಳೆದ ಕಟೀಲು ಪರಿಸರಕ್ಕೆ ಉನ್ನತವಾದ ,ಉತ್ತುಂಗವಾದ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಬೇಕು ಎನ್ನುವ ಮನದ ಇಂಗಿತವನ್ನು ಇರಿಸಿ ತೀರಾ ಗ್ರಾಮೀಣ ಪ್ರದೇಶದ ಪರಿಸರ ಕೃಷಿಕರು ,ರೈತಾಪಿ ವರ್ಗದ ಜನತೆ ,ಕೂಲಿ ಕಾರ್ಮಿಕರು,ಸಣ್ಣ ಉದ್ದಿಮೆದಾರರು ವಾಸಿಸುವ ಕಟೀಲು ಆಸುಪಾಸಿನ ಹಲವು ಗ್ರಾಮಗಳ ಜನತೆಯ ಆರೋಗ್ಯಭಾಗ್ಯಕ್ಕೆ ವರವಾಗಿಸಿ ಬಹುಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ . ಸುಮಾರು ಅರ್ಧ ಎಕರೆ ಜಾಗದಲ್ಲಿ 3 ಅಂತಸ್ತಿನ 10,000 ಚದರ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು ಸ್ಥಾನೀಯ ಜನತೆಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ ಒದಗಿಸಲಿದೆ .  100 ಬೆಡ್ ಗಳ ಅತ್ಯಾಧುನಿಕ ಸೌಲಭ್ಯವುಳ್ಳ ತುರ್ತುನಿಗಾ ಉಪಶಮನದ ವಿಭಾಗ ,24 ಗಂಟೆ ಕಾರ್ಯನಿರ್ವಹಿಸಲಿದೆ . ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ ,ಎಲುಬು ಮತ್ತು ಕೀಲು ,ಜನರಲ್ ಮೆಡಿಸಿನ್ ,ಕಣ್ಣಿನ ವಿಭಾಗ ,ಕಿವಿ ,ಮೂಗು ,ಗಂಟಲು  ಮತ್ತು ಮಕ್ಕಳ ವಿಭಾಗ ,ತುರ್ತು ಚಿಕಿತ್ಸಾ ವಿಭಾಗ ,ಐಸಿಯು ಮತ್ತು ಶವಾಗಾರ ಸೌಲಭ್ಯವೂ ಒಳಗೊಂಡಿದೆ . ಲ್ಯಾಬ್ ,ಔಷಧಾಲಯ ,ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ,ವೈದ್ಯರಿಗೆ ವಸತಿ ನಿಲಯವಿದ್ದು  ದಿನದ 24 ಗಂಟೆ ಕಾರ್ಯನಿರ್ವಹಿಸಲಿರುವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದಾಗಲಿದೆ .  

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ