ಕರಾಚಿ-ಲಾಹೋರ್ ಪಿಐಎ ವಿಮಾನ ಪತನ

0
125

ಇಸ್ಲಾಮಾಬಾದ್,ಮೇ.22  : ( ಕಿರಣ್ ವಾರ್ತಾ -www.kiranvarta.com)ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣ ಸಮೀಪ ಜಿನ್ನಾ ಗಾರ್ಡನ್,ಮಾಡೆಲ್ ಕಾಲನಿ ಜನನಿಬಿಡ ಪ್ರದೇಶದಲ್ಲಿ ಪತನಕ್ಕೀಡಾಗಿದ್ದು, ವಿಮಾನದಲ್ಲಿ 98 ಮಂದಿ ಪ್ರವಾಸಿಗರು  ಇದ್ದರೆನ್ನಲಾಗಿದೆ . PK-8303ವಿಮಾನ ಲ್ಯಾಂಡ್ ಆಗುವ ಒಂದು ನಿಮಿಷದ ಮೊದಲು ಈ ದುರಂತ ಸಂಭವಿಸಿರುವುದಾಗಿ ವರದಿ ತಿಳಿಸಿದೆ.

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ಪಾಕಿಸ್ತಾನ ಜಿಯೋ ಮಾಧ್ಯಮದ  ವರದಿ ಪ್ರಕಾರ, ವಿಮಾನದಲ್ಲಿ 98 ಮಂದಿ ಪ್ರಯಾಣಿಸುತ್ತಿದ್ದರು. ಸಮೀಪದ ಮನೆಗಳಿಗೆ ಬೆಂಕಿಹೊತ್ತಿಕೊಂಡಿರುವ ಹಾಗೂ ಸಂಪೂರ್ಣ ಪ್ರದೇಶ ಹೊಗೆಯಿಂದ  ಆವರಿಸಿದ್ದು  ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿರುವುದಾಗಿ ವರದಿ ತಿಳಿಸಿದೆ . ಪಾಕಿಸ್ತಾನ  ಕ್ವಿಕ್ ರಿಯಾಕ್ಷನ್ ಫೋರ್ಸ್ ರಕ್ಷಣಾ  ತೊಡಗಿಸಿಕೊಂಡಿದೆ . ತಾಂತ್ರಿಕ ತೊಂದರೆಯಿಂದಾಗಿ ವಿಮಾನ ಪತನವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ