ಪುಣೆಯಲ್ಲಿ ಮೊದಲ ಮಳೆಯ ಸಿಂಚನ-ಕಿರಣ್ ವಾರ್ತಾ

0
118

ಪುಣೆ : (Kiranvarta)ಇಂದು ಭಾರತ ಆಸ್ಟ್ರೇಲಿಯಾ ಹೈ ವೋಲ್ಟೇಜ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದು ಭಾರತದ ಭರ್ಜರಿ ಬ್ಯಾಟಿಂಗ್ ಪ್ರದರ್ಶನವಾಗುತ್ತಿದ್ದರೆ ಪುಣೆಯಲ್ಲಿ ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಜನತೆಗೆ ಮೊದಲ ಮಳೆ ಸುರಿದು ತಂಪೆರೆಯಿತು   ಒಟ್ಟಾರೆಯಾಗಿ ರಜೆಯ ಮಜಾದೊಂದಿಗೆ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದ್ದ ಜನತೆಗೆ ಮೊದಲ ಮಳೆಯ ಸಿಂಚನ ಇನ್ನಷ್ಟು ಮಜಾ ನೀಡಿತು   ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು ಮಳೆಯ ಆಗಮನವನ್ನು ನಿರೀಕ್ಷಿಸುತ್ತಿದ್ದ ಜನರಿಗೆ ಕೊಂಚ ನೆಮ್ಮದಿ ಸಿಕ್ಕಂತಾಯಿತು   ಇಂದು ಸಂಜೆ ಗಂಟೆ 6 ರ ವೇಳೆಗೆ ಮಳೆ  ಆರಂಭಗೊಂಡು ಸುಮಾರು ಒಂದು ತಾಸು ಸುರಿಯಿತು .ನಗರದ ಕೆಲೆವೆಡೆ  ನೀರು ರಸ್ತೆಗಳಲ್ಲಿ ನಿಂತು  ಸವಾರರಿಗೆ ತೊಂದರೆಯಾಯಿತು.   ನಗರದೆಲ್ಲೆಡೆ ಒಮ್ಮೆಲೇ ಸುರಿದ ಮಳೆಯಿಂದಾಗಿ ಟ್ರಾಫಿಕ್ ಸಮಸ್ಯೆ ತಲೆದೋರಿ ವಾಹನ ಸವಾರರು ತಾಸುಗಟ್ಟಲೆ ತೊಂದರೆ ಅನುಭವಿಸುವಂತಾಯಿತು .  ವಾಟ್ಸ್ ಆಪ್ ,ಫೇಸ್ ಬುಕ್ ಗಳಲ್ಲಿ ಜನರು ಮಳೆಯ ಫೋಟೋ ವಿಡಿಯೋ ಗಳನ್ನು ಅಪ್ಲೋಡ್ ಮಾಡುತ್ತಾ ಎಂಜಾಯ್ ಮಾಡಿದರು

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ