ಇದೀಗ ಮತ್ತೊಂದು ರಾಜ್ಯ ಕಾಂಗ್ರೆಸ್ ಮುಕ್ತ -ಕಿರಣ್ ವಾರ್ತಾ

0
67

ನವದೆಹಲಿ,ಜು.24: (www.kiranvarta.com)ಕಾಂಗ್ರೆಸ್ ಪಾಲಿಗೆ ಆಶಾಕಿರಣವಾಗಿದ್ದ ಕರ್ನಾಟಕದಲ್ಲೂ ಅಧಿಕಾರ ಕಳೆದುಕೊಂಡ ದಯನೀಯ ಸ್ಥಿತಿ ಕಾಂಗ್ರೆಸ್ ಪಾಲಿನದ್ದಾಗಿದೆ . ನಿನ್ನೆಯೇ ಕರ್ನಾಟಕದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಅಧಿಕಾರ ಕಳೆದುಕೊಳ್ಳುವುದರೊಂದಿಗೆ, ಕಾಂಗ್ರೆಸ್‌ ದೇಶದಲ್ಲಿ ಮತ್ತೊಂದು ರಾಜ್ಯವನ್ನು ತನ್ನ ಹಿಡಿತದಿಂದ ಕಳೆದುಕೊಂಡಂತೆ ಆಗಿದೆ. ಹೀಗಾಗಿ ಅದರ ಪಾಲಿಗೆ ಈಗ ಇಡೀ ದೇಶದಲ್ಲಿ ಕೇವಲ 4 ರಾಜ್ಯ ಸರ್ಕಾರಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಉಳಿದುಕೊಂಡಿದೆ. ಪ್ರಸಕ್ತ  ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳೆಂದರೆ ಪಂಜಾಬ್‌, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ.  ದೇಶದೆಲ್ಲೆಡೆ ಅಧಿಪತ್ಯ ಸ್ಥಾಪಿಸುತ್ತಾ ಬಿಜೆಪಿ  16 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ