ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಅಂಕಿತ ,ಶಿವಸೇನೆಯ ಎಡಬಿಡಂಗಿತನಕ್ಕೆ ತಾತ್ಕಾಲಿಕ ಶಾಸ್ತಿ!-ಕಿರಣ್ ವಾರ್ತಾ

0
115

 ನವದೆಹಲಿ: (www.kiranvarta.com) ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಬಿಕ್ಕಟ್ಟು  ಮುಂದುವರಿದಿರುವ ನಡುವೆಯೇ ರಾಜ್ಯಪಾಲರಾದ ಭಗತ್ ಸಿಂಗ್ ಕೋಶಿಯಾರಿ  ರಾಷ್ಟ್ರಪತಿ ಆಡಳಿತ ಹೇರಿಕೆಗೆ ಶಿಫಾರಸ್ಸು ಮಾಡಿದ್ದು, ರಾಷ್ಟ್ರಪತಿಯವರು ರಾಷ್ಟ್ರಪತಿ ಆಳ್ವಿಕೆಗೆ ಮುದ್ರೆಯನ್ನೊತ್ತಿದ್ದು  ಮುಖ್ಯಮಂತ್ರಿ ಗಾದಿಯ ಮೇಲೆ ಮೋಹ ಹೊಂದಿದ್ದ  ಶಿವಸೇನೆಯ ಎಡಬಿಡಂಗಿತನದ ರಾಜಕಾರಣಕ್ಕೆ ತಾತ್ಕಾಲಿಕ ಶಾಸ್ತಿಯಾಗಿದ್ದಂತೂ ಸತ್ಯ . ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ  ಫಲಿತಾಂಶ ಪ್ರಕಟವಾಗುತ್ತಲೇ  ೫೦:೫೦ ಫಾರ್ಮುಲಾ ರಾಗಾಲಾಪನೆ ಮಾಡಿ  ಬಿಜೆಪಿ ಸಖ್ಯವನ್ನು ತೊರೆದು ವಿರೋಧ ಸಿದ್ಧಾಂತಗಳನ್ನು ಹೊಂದಿದ ಕಾಂಗ್ರೆಸ್ -ಎನ್ ಸಿಪಿ ಯೊಂದಿಗೆ ಸರ್ಕಾರ ರಚಿಸುವ  ಆತುರ ತೋರಿದ್ದಲ್ಲದೆ  ರಾಜ್ಯಪಾಲರು ನೀಡಿದ ಅವಧಿಯಲ್ಲಿ  ಬಹುಮತದ  ಸಂಖ್ಯೆಗಳನ್ನು ನಿರೂಪಿಸಲು ಕಾಂಗ್ರೆಸ್ -ಎನ್ ಸಿಪಿ ಸಕಾಲಿಕ ಬೆಂಬಲ ವ್ಯಕ್ತವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ  ಹೇರಲಾಗಿದೆ .  ಈ ಬೆಳವಣಿಗೆ ಹಿನ್ನೆಲೆಯಲ್ಲಿರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಶಿವಸೇನೆ ನಿರ್ಧರಿಸಿದೆ. ಸರ್ಕಾರ ರಚಿಸಲು ಹಾಗೂ ಬಹುಮತ ಸಾಬೀತುಪಡಿಸಲು ಮೂರು ದಿನಗಳ ಕಾಲಾವಕಾಶ ನೀಡಲು ನಿರಾಕರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿರುದ್ಧ ದೂರು ದಾಖಲಿಸುವುದಾಗಿ ಶಿವಸೇನೆ ತಿಳಿಸಿದೆ.

ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಕಾನೂನು ಸಮರ ನಡೆಸುವ ಬಗ್ಗೆ ಸಮಾಲೋಚನೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಎನ್ ಸಿಪಿ ವಿಫಲವಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಗವರ್ನರ್ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಇಂದು ಮುಂಬಯಿಯಲ್ಲಿ ಶಿವಸೇನೆ -ಕಾಂಗ್ರೆಸ್ -ಎನ್ ಸಿಪಿ  ಪಕ್ಷಗಳ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದ್ದು ಎನ್ ಸಿ ಪಿ ಇದೀಗ ಶಿವಸೇನೆಗೆ ೫೦:೫೦ ಫಾರ್ಮುಲಾ ಸರಕಾರ ನಡೆಸಲು ಹೊಸ ಷರತ್ತನ್ನು ನೀಡಿ ಶಿವಸೇನೆಯನ್ನು ಪೇಚಿಗೆ ಸಿಲುಕಿಸಿದ ವರದಿಯಾಗಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ