ಪಂಚ ರಾಜ್ಯಗಳಿಗೆ ನಿಷೇಧ ಹೇರಿದ ಕರ್ನಾಟಕ -ಕಿರಣ್ ವಾರ್ತಾ

0
161
ಬೆಂಗಳೂರು ;ಮೇ. 29: (ಕಿರಣ್ ವಾರ್ತಾ -www.kiranvarta.com)ಕರ್ನಾಟಕ ರಾಜ್ಯದಲ್ಲಿ  ಕೊರೋನ ಸೋಂಕಿತರ ಸಂಖ್ಯೆ  ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಸರಕಾರವು  ಐದು ರಾಜ್ಯಗಳಿಂದ ಬರುವ ವಿಮಾನ,  ರೈಲು ,ಇನ್ನಿತರ ವಾಹನಗಳಿಗೆ ನಿಷೇಧವನ್ನು ಹೇರಿದೆ . ಮಹಾರಾಷ್ಟ್ರ ,ತಮಿಳ್ನಾಡು ,ಮಧ್ಯಪ್ರದೇಶ ,ರಾಜಸ್ತಾನ ಮತ್ತು ಗುಜರಾತ್ ನಿಂದ ಆಗಮಿಸುವ ಜನರಿಗೆ ನಿಷೇಧವನ್ನು ಹೇರಿದ್ದು ಕಳೆದ ಮೂರು ವಾರಗಳಿಂದ   ರಾಜ್ಯಕ್ಕೆ ಆಗಮಿಸಿದ ಹೊರರಾಜ್ಯದವರಿಂದಾಗಿಯೇ  ಕೋರೋನ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ  ಹೆಚ್ಚಾಗಿದ್ದು  ಇದಕ್ಕಾಗಿಯೇ ತಡೆಯನ್ನು ಹೇರಲಾಗಿದೆ . 
ಅಂತಾರಾಜ್ಯ ಪ್ರಯಾಣಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರಿಗೆ ಕರ್ನಾಟಕ ಪ್ರವೇಶಕ್ಕೆ ಅವಕಾಶ ಕೊಟ್ಟ ಬಳಿಕ ರಾಜ್ಯದಲ್ಲಿ ಕೋವಿಡ್‌-19 ಪೀಡಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಾಗಿ  ಮಹಾರಾಷ್ಟ್ರ, ತ.ನಾಡು, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶದಿಂದ ಆಗಮಿಸುವ ರೈಲು ,ಇನ್ನಿತರ ವಾಹನಗಳು ಹಾಗು ವಿಮಾನ ಯಾನವನ್ನು ನಿರ್ಬಂಧಿಸಲು ತೀರ್ಮಾನಿಸಿದೆ.  ಐದು ರಾಜ್ಯಗಳಿಂದ ವಿಮಾನ ಪ್ರಯಾಣವನ್ನು ಸಂಪೂರ್ಣ ಬಂದ್‌ ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಜೆ ಮಾಧ್ಯಮಕ್ಕೆ ತಿಳಿಸಿದ್ದರು.

 
(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )   

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ