ಪುಣೆ – ಬೆಂಗಳೂರು ಹೆದ್ದಾರಿಯಲ್ಲಿ ಭೂಕುಸಿತ ಮುಂಬಯಿ -ಮಂಗಳೂರು ಬಸ್ಸು ಸಂಚಾರ ಸ್ಥಗಿತ- -ಕಿರಣ್ ವಾರ್ತಾ

0
264
ಪುಣೆ : (ಕಿರಣ್ ವಾರ್ತಾ -www.kiranvarta.com)`ಬೆಳಗಾವಿಯಲ್ಲಿ  ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ. ಮುಂಬಯಿಯಿಂದ  ಮಂಗಳೂರು ಹಾಗೂ ಬೆಂಗಳೂರಿಗೆ ತೆರಳುವ ಎಲ್ಲಾ ಬಸ್ ಸಂಚಾರ ರದ್ದು ಪಡಿಸಲಾಗಿದೆ .  ಮಂಗಳೂರಿನಿಂದಲೂ ಇಂದು ಬಸ್ ಗಳನ್ನು  ಬಿಡಲಿಲ್ಲ . ಮುಂಗಡ ಟಿಕೆಟ್ ಕಾದಿರಿಸಿದ  ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು .
 ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.ರಾಜ್ಯದ ಗಡಿಪ್ರದೇಶದಲ್ಲಿ  ನಿನ್ನೆ ಸಂಜೆಯಿಂದಲೇ ವಾಹನ ಸಂಚಾರಕ್ಕೆ ತಡೆ ನೀಡಿರುವುದರಿಂದ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೆಲವು ವಾಹನಗಳು ವಾಪಸ್ ತೆರಳಿವೆ.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ