ಪುಣೆ ಲಾಕ್ ಡೌನ್ ಸಂದರ್ಭದ ದುರುಪಯೋಗ ,ಗ್ರಾಹಕರ ದುಪ್ಪಟ್ಟು ಲೂಟಿ -ಕಿರಣ್ ವಾರ್ತಾ

0
229

ಪುಣೆ:  (ಕಿರಣ್ ವಾರ್ತಾ -www.kiranvarta.com)ಕಳೆದೆರಡು ತಿಂಗಳಿಂದ ಪುಣೆಯಲ್ಲಿ ಕೋವಿಡ್-19 ಪ್ರಯುಕ್ತ ಲಾಕ್ ಡೌನ್ ಹೇರಲಾಗಿದ್ದು ಜನರು ಜೀವನಾವಶ್ಯಕ ವಸ್ತುಗಳಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದ್ದು  ಇದರ ಲಾಭವನ್ನು ಪಡೆಯುತ್ತಿರುವ ಅಗತ್ಯ ವಸ್ತುಗಳ ಅಂಗಡಿಗಳಿಂದ ಗ್ರಾಹಕರನ್ನು ಮನಬಂದಂತೆ ದರ ವಸೂಲಿ ಮಾಡಲಾಗುತ್ತಿದೆ . ವಸ್ತುಗಳ ಎಂಆರ್ ಪಿ ನಿಗದಿಪಡಿಸಿದ್ದ ದರಕ್ಕಿಂತಲೂ 30 ಶೇಕಡಾ ಹೆಚ್ಚು ದರವನ್ನು ವಸೂಲಿ ಮಾಡುತ್ತಿರುವುದನ್ನು ಎಲ್ಲೆಂದರಲ್ಲಿ ಕಾಣಬಹುದಾಗಿದೆ . ಈ ಬಗ್ಗೆ ಪೊಲೀಸರು 40 ಕ್ಕೂ ಹೆಚ್ಚು  ಅಂಗಡಿಗಳ ಮೇಲೆ ಕೇಸನ್ನು ದಾಖಲಿಸಿದ್ದಾರೆ . ದಿನನಿತ್ಯ ಉಪಯೋಗಿಸುವ ಆಹಾರ ದಿನಸಿಗಳ ಮೇಲೆ ಮನಬಂದಂತೆ ದರ ವಸೂಲಿ ಮಾಡುತ್ತಿದ್ದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ . ತಮಗೆ ವಸ್ತುಗಳೇ ಸರಬರಾಜಾಗುತ್ತಿಲ್ಲ . ಇದ್ದುದನ್ನು ಕೊಂಡು ಹೋಗಿ , ದರ ಕೇಳಬೇಡಿ ಎಂಬ ಉಡಾಫೆಯ ಮಾತುಗಳನ್ನು ಗ್ರಾಹಕರಿಗೆ ಅನಂಗಡಿದಾರರು ಆಡುತ್ತಿದ್ದಾರೆ . ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ಅಡತಡೆಯಿಲ್ಲ ,ದಿನಬಳಕೆಯ ಆಹಾರ ಸಾಮಾಗ್ರಿಗಳೂ ಯಾವುದೇ ತೊಂದರೆಯಿಲ್ಲದೆ ಜನರು ಖರೀದಿಸಬಹುದೆಂದು ಸರಕಾರ ಹೇಳುತ್ತಿದ್ದರೂ ಜನರು ಮಾತ್ರ ಅಂಗಡಿದಾರರಿಂದ ಕಷ್ಟಪಡುವಂತಾಗಿದೆ . ಜೀವನಾವಶ್ಯಕ ವಸ್ತುಗಳಲ್ಲೊಂದಾದ ಗ್ಯಾಸ್ ವಿತರಕರೂ ಗ್ಯಾಸ್ ವಿತರಣೆಗಾಗಿ 50 ರಿಂದ 100 ರೂ ಗಳನ್ನೂ ಗ್ರಾಹಕರಿಂದ ವಸೂಲಿಗೈಯ್ಯುತ್ತಿದ್ದಾರೆ . ಲಾಕ್  ಸಂದರ್ಭ ಗ್ಯಾಸ್ ಸಿಲಿಂಡರ್ ಗಳನ್ನೂ ಮನೆಗೆ ವಿತರಣೆ ಮಾಡಲಾಗುವುದಿಲ್ಲ ,ಡೆಲಿವರಿ ಬೇಕಾದರೆ ಇಂತಿಷ್ಟು ನೀಡಬೇಕು ಎಂದು ಗ್ಯಾಸ್ ವಿತರಕರೂ ಕೆಲವೊಂದು ಕಡೆಗಳಲ್ಲಿ ವಸೂಲಿ ಹಣ ಮಾಡುತ್ತಿದ್ದಾರೆ . ಅದೇ ರೀತಿ  ಪರಪ್ರಾಂತೀಯ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬವಣೆ  ಪಡುತ್ತಿದ್ದರೆ ಹೈವೆಗಳಲ್ಲಿ ಟ್ರಕ್ ಚಾಲಕರು ಅವರನ್ನು ಸಾಗಿಸಲು 3 ಸಾವಿರವೋ 4 ಸಾವಿರವೋ ವಸೂಲು ಮಾಡುತ್ತಿದ್ದಾರೆ . ಅದೇ ರೀತಿಯಲ್ಲಿ ಮೆಡಿಕಲ್ ಅಂಗಡಿಗಳಲ್ಲಿ ಮಾಸ್ಕ್ ,ಸ್ಯಾನಿಟೈಸರ್ ಗಳನ್ನುಮಾರಿ  ಮನಬಂದ ದರಗಳನ್ನು ಗ್ರಾಹಕರಿಂದ ಲೂಟಿಗೈಯ್ಯಲಾಗುತ್ತಿದೆ . ಸಿಕ್ಕ ಸಿಕ್ಕ ಕಡೆಗಳಲ್ಲಿ ಹಣ್ಣು  ತರಕಾರಿಗಳನ್ನು ಮಾರಲಾಗುತ್ತಿದ್ದು ಮನಬಂದಂತೆ ದರಗಳನ್ನು ವಸೂಲಿ ಮಾಡುತ್ತಿದ್ದಾರೆ . ಒಟ್ಟಾರೆಯಾಗಿ ಲಾಕ್ ಡೌನ್ ಸಂದರ್ಭದಲ್ಲಿ ಹೋಟೆಲ್ ಗಳು ,ಬಟ್ಟೆ ಅಂಗಡಿಗಳು .ಚಪ್ಪಲ್ ಅಂಗಡಿಗಳು ,ಉಳಿದೆಲ್ಲ ಅಂಗಡಿಗಳು ಬಾಗಿಲೆಳೆದಿದ್ದರೂ ದಿನಸಿ ಅಂಗಡಿಗಳು ,ಮೆಡಿಕಲ್ ಶಾಪ್ ಗಳು ,ಚಿಕನ್ ಅಂಗಡಿಗಳು ,ತರಕಾರಿ ,ಹಣ್ಣು ಮಾರಾಟಗಳು ಎಗ್ಗಿಲ್ಲದೆ ಸಾಗಿದ್ದು ಇವುಗಳು ಗ್ರಾಹಕರನ್ನು ಸಂದರ್ಭದ ಲಾಭವನ್ನು ಪಡೆದು ಭರ್ಜರಿಯಾಗಿ ಲೂಟಿ ಹೊಡೆಯುತ್ತಿರುವುದು ದುರದೃಷ್ಟವಾಗಿದೆ .


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ