ಮುಂಬಯಿ ಸಿಎಸ್ ಟಿ :ಪಾದಾಚಾರಿ ಮೇಲ್ಸೇತುವೆ ಕುಸಿದು 5 ಬಲಿ, ಹಲವಾರು ಜನರು ಗಂಭೀರ

0
150

ಮುಂಬಯಿ :(www.kiranvarta.com)ಮುಂಬಯಿ ನಗರದ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲ್ವೇ ನಿಲ್ದಾಣದ ಬಳಿ ಇರುವ ಪಾದಾಚಾರಿ ಮೇಲ್ಸೇತುವೆ ಗುರುವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಐವರು  ದಾರುಣವಾಗಿ ಸಾವನ್ನಪ್ಪಿದ್ದಾರೆ.ಅವಘಡದಲ್ಲಿ  ೩೬ ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಕೆಲ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ 7.35 ರ ವೇಳೆಗೆ ಈ ಭೀಕರ ಅವಘಡ ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ. ಘಟನೆ ನಡೆದ ತಕ್ಷಣ ಎನ್‌ಡಿಆರ್‌ಎಫ್, ಅಗ್ನಿ ಶಾಮಕ ದಳ, ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಎಂಆರ್‌ಸಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ಲಭ್ಯವಾಗುವಲ್ಲಿ ಕ್ರಮ ಕೈಗೊಂಡಿದ್ದಾರೆ. ಆಜಾದ್ ಮೈದಾನ್ ಪೊಲೀಸ್ ಠಾಣೆ, ಟೈಮ್ಸ್‌ ಆಫ್ ಇಂಡಿಯಾ ಕಟ್ಟಡವನ್ನು ರೈಲ್ವೆ ನಿಲ್ದಾಣದೊಂದಿಗೆ ಈ ಸೇತುವೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದೆ. ಕನ್ನಡಿಗರಾದ ರವಿ ಶೆಟ್ಟಿ (40) ಎನ್ನುವವರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ . ಈ ಮೇಲ್ಸೇತುವೆ ಶಿಥಿಲಗೊಂಡಿದ್ದು ಪಾದಾಚಾರಿಗಳು ಈ ಸೇತುವೆ ಮೂಲಕ ಸಾಗುವಾಗ   ಅಲ್ಲಾಡುವಂತಹ ಅನುಭವವಾಗುತ್ತಿತ್ತು ಎಂದು ದೈನಂದಿನ ಪ್ರಯಾಣಿಕರು ತಮ್ಮ ಅನುಭವವನ್ನು ಬಚ್ಚಿಟ್ಟಿದ್ದಾರೆ . ಮುಂಬಯಿ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ  ಹಿಡಿಶಾಪ ಹಾಕುತ್ತಿದ್ದಾರೆ . 2017ರಲ್ಲಿ ಮುಂಬೈನ ಎಲ್ಫಿನ್’ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ಸಂಭವಿಸಿ 22 ಜನರು ಸಾವನ್ನಪ್ಪಿದ್ದರು.  ನಿಲ್ದಾಣದಲ್ಲಿರುವ ಮೇಲ್ಸೇತುವೆ (ಫೂಟ್ ಓವರ್ ಬ್ರಿಜ್) ಬಳಿ ಬೆಳಗ್ಗೆ 10:30ಕ್ಕೆ ಸಂಭವಿಸಿದ ಈ ದುರಂತ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಾ ಕ್ರಮ ಅಳವಡಿಸಿಕೊಂಡಿಲ್ಲ ಎಂಬುದನ್ನು ಸಾರಿ ಹೇಳಿತ್ತು.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ