ಅಯೋಧ್ಯೆಯಲ್ಲಿ ಇತಿಹಾಸ ನಿರ್ಮಾಣಕ್ಕೆ ಕ್ಷಣಗಣನೆ 

0
388

ಲಕ್ನೋ,ಆ. : (ಕಿರಣ್ ವಾರ್ತಾ – www.kiranvarta.com)ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯವಾದ ಶ್ರೀರಾಮ ಮಂದಿರಕ್ಕಾಗಿ ನಡೆಯಲಿರುವ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು  ಬುಧವಾರ ಆ.5 ದೆಹಲಿಯಿಂದ ಲಕ್ನೋಗೆ ಆಗಮಿಸಿದ್ದಾರೆ. 12.44ಕ್ಕೆ ಭೂಮಿ ಪೂಜೆ ನೆರವೇರಲಿದೆ. ಈ ಪವಿತ್ರ ಐತಿಹಾಸಿಕ ಕ್ಷಣಕ್ಕಾಗಿ ಕ್ಷಣಗಣನೆ ಆರಂಭಗೊಂಡಿದ್ದು ಕೋಟ್ಯಂತರ ರಾಮಭಕ್ತರಿಗೆ ಇದೊಂದು ಸಾರ್ಥಕದ ಕ್ಷಣವಾಗಿದೆ .  ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಲಕ್ನೋಗೆ ಬಂದಿಳಿದಿದ್ದಾರೆ.

ಅಯೋಧ್ಯೆಗೆ ಬಂದ ಬಳಿಕ ಪ್ರಧಾನಿ ಮೋದಿ ಅವರು ಹನುಮಾನ್ ಗಡಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಐತಿಹಾಸಿಕ ಘಳಿಗೆಯ ಕಾರ್ಯಕ್ರಮಕ್ಕಾಗಿ ಇಡೀ ಅಯೋಧ್ಯೆ ನಗರಿ ಶೃಂಗಾರಗೊಂಡಿದ್ದು, ಎಲ್ಲೆಡೆ ಹೂವಿನ ಅಲಂಕಾರಗಳು , ಬೃಹತ್ ಎಲ್ ಇಡಿ, ಸಿಸಿಟಿವಿ ಸ್ಕ್ರೀನ್ ಇಡಲಾಗಿದ್ದು, ಸಾರ್ವಜನಿಕರು ಭೂಮಿ ಪೂಜೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ . www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ