ಆಗಸ್ಟ್ 5 ರಿಂದ  ಅನ್ ಲಾಕ್ -3 ಕೇಂದ್ರದಿಂದ ಹೊಸ ಮಾರ್ಗಸೂಚಿ ಜಾರಿ

0
136
ನವದೆಹಲಿ;ಜು.30:   ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಆಗಸ್ಟ್ 5 ರಿಂದ  ಕೇಂದ್ರ ಸರ್ಕಾರ ಅನ್ ಲಾಕ್ – 3  ಮಾರ್ಗಸೂಚಿ ಬಿಡುಗಡೆ ಮಾಡಿದೆ.  ಆಗಸ್ಟ್  5  ರಿಂದ ಇದುವರೆಗೆ ಜಾರಿಯಲ್ಲಿದ್ದ ನೈಟ್ ಕರ್ಪ್ಯೂ ಇರುವುದಿಲ್ಲ.  ಯೋಗ ಮತ್ತು ಜಿಮ್ ಗಳುತೆರೆಯಲಿವೆ .  ಅಂತರ್ ರಾಜ್ಯ ಓಡಾಟದ ನಿಯಮವನ್ನು ತೆಗೆದು ಹಾಕಲಾಗಿದೆ. ಇದು ಕೇಂದ್ರ ಸರ್ಕಾರದ ನಿಯಮಾವಳಿಯಾಗಿದ್ದು ಆಯಾ ರಾಜ್ಯ ಸರ್ಕಾರಗಳು ಕೊರೋನಾ ತಡೆಗೆ ತಮ್ಮದೆ ಆದ ಲಾಕ್ ಡೌನ್ ಮಾಡಿಕೊಂಡಿವೆ.   
ಅನ್ ಲಾಕ್  3  ಮಾರ್ಗಸೂಚಿ ಆಗಸ್ಟ್  5  ರಿಂದ ಜಾರಿಯಾಗಲಿದ್ದು * ಯೋಗ ಕೇಂದ್ರ, ಜಿಮ್ ತೆರೆಯಲು ಅವಕಾಶ(ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ) * ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆ * ಶಾಲಾ ಕಾಲೇಜುಗಳು ಆಗಸ್ಟ್ ಅಂತ್ಯದವರೆಗೆ ತೆರೆಯಲು ಅವಕಾಶವಿಲ್ಲ * ವಂದೇ ಭಾರತ್ ಮಿಶನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಸೀಮಿತ ಅವಕಾಶ  ಕಲ್ಪಿಸಲಾಗಿದೆ * ಮೆಟ್ರೋ, ಸಿನಿಮಾ ಥಿಯೇಟರ್,  ಎಂಟರ್ ಟೈನ್ ಮೆಂಟ್ ಪಾರ್ಕ್, ಬಾರ್, ಪಾರ್ಕ್, ಅಡಿಟೋರಿಯಂ, ಅಸೆಂಬ್ಲಿ ಹಾಲ್  ಸದ್ಯಕ್ಕೆ ಇಲ್ಲ(ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು .* ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ * ಕಂಟೈನ್ ಮೆಂಟ್ ಝೋನ್ ಝೋನ್ ನಲ್ಲಿ ಆಗಸ್ಟ್  31  ರವರೆಗೂ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ.

(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ