ಜಮ್ಮು ಕಾಶ್ಮೀರ: ಉಗ್ರರಿಂದ ಆತ್ಮಹತ್ಯಾ ದಾಳಿ ; 44 CRPF ಯೋಧರು ಹುತಾತ್ಮ

0
162

ಶ್ರೀನಗರ ಫೆ  14: ಜಮ್ಮು ಕಾಶ್ಮೀರದಲ್ಲಿ  ಉಗ್ರರ ಗುಂಪೊಂದು ಇಂದು ಗುರುವಾರ ಪುಲ್ವಾಮಾದ ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಆತ್ಮಹತ್ಯಾ ದಾಳಿಯ ಮೂಲಕ  ಐಇಡಿ ಬ್ಲಾಸ್ಟ್‌ ನಡೆಸಿದ್ದು 44 ಸಿಆರ್‌ಪಿಎಫ್ ಸೈನಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.  ಐಇಡಿ ಬ್ಲಾಸ್ಟ್‌ನ ತೀವ್ರತೆಯಲ್ಲಿ  ಹಲವಾರು ಯೋಧರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಉರಿ ಆತಂಕವಾದಿ ದಾಳಿಯ ನಂತರ ಅತೀ ದೊಡ್ಡ  ದಾಳಿ ಇದೆಂದು ನಂಬಲಾಗಿದೆ 2500 ಕ್ಕೂ ಹೆಚ್ಚು ಕೇಂದ್ರ ಮೀಸಲು ಪದೇ ಪೊಲೀಸ್ ಸಿಬ್ಬಂದಿಗಳು ೭೮ ಬಸ್ಸುಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಈ ಭೀಕರ ಭಯೋತ್ಪಾದಕ ದಾಳಿ ನಡೆದಿದೆ . ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ .ಆತ್ಮಹತ್ಯಾ ಬಾಂಬರ್‌ ಒಬ್ಬ ಸ್ಕಾರ್ಪಿಯೋ ಕಾರಿನಲ್ಲಿ 350 ಕೆ.ಜಿ. ಸ್ಫೋಟಕಗಳನ್ನು ತುಂಬಿಸಿಕೊಂಡು ಸಿಆರ್‌ಪಿಎಫ್ ಯೋಧರು ತೆರಳು ತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆಸಿ ಬಾಂಬ್‌ ಸ್ಫೋಟಿಸಿದ್ದಾನೆ. 2001ರ ಬಳಿಕದ ಅತ್ಯಂತ ಘೋರ ಘಟನೆಗೆ ಶ್ರೀನಗರ ಸಾಕ್ಷಿಯಾಗಿದೆ. ತತ್‌ಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಕಾರಣಕ್ಕೂ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದಾರೆ
ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರರು ಇದು ತಮ್ಮದೇ ಕೃತ್ಯವೆಂದು ಹೇಳಿಕೊಂಡಿದ್ದಾರೆ. ಸಿಆರ್‌ಪಿಎಫ್ ಯೋಧರ ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ. ಸಿಆರ್‌ಪಿಎಫ್ ಯೋಧರ ವಾಹನವನ್ನು ಜೈಶ್‌ ಉಗ್ರರು ಜಮ್ಮು ಕಾಶ್ಮೀರ ಹೈವೇಯಲ್ಲಿನ ಆವಂತಿಪುರ ಪ್ರದೇಶದಲ್ಲಿ  ಸ್ಫೋಟಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಘಟನೆ ನಡೆದ ಸುದ್ದಿ ತಿಳಿದೊಡನೆಯೇ ಹೆಚ್ಚುವರಿ ಭದ್ರತಾ ಪಡೆಯನ್ನು ಬ್ಲಾಸ್ಟ್‌ ನಡೆದ ತಾಣಕ್ಕೆ ರವಾನಿಸಲಾಗಿದ್ದು ಇಡಿಯ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 35ಕ್ಕೊ ಹೆಚ್ಚು ಸಿ ಆರ್ ಪಿ ಎಫ್ ಯೋಧರು ಒಂದು ಬಸ್ಸಿನ ಮೂಲಕ ಪ್ರಯಾಣಿಸುತ್ತಿದ್ದರು .ಜಮ್ಮು ಕಾಶ್ಮೀರದ ಬಡಗಾಂವ್‌ನಿಲ್ಲ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆಗೆ ಪ್ರತೀಕಾರವಾಗಿ ಉಗ್ರರು ಇಂದಿನ ಐಇಡಿ ಬ್ಲಾಸ್ಟ್‌ ನಡೆಸಿರಬೇಕೆಂದು ಶಂಕಿಸಲಾಗಿದೆ.

ವೀಡಿಯೋ ಸಂದೇಶ
ಜೈಷ್ -ಎ -ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾಳಿ ಮಾಡಿ ಸಾಯುವುದಕ್ಕೂ ಮುನ್ನ ವಿಡಿಯೋ ಸಂದೇಶ ನೀಡಿದ್ದಾನೆ . ನನ್ನ ಹೆಸರು  ಆದಿಲ್‌. ನಾನು ವರ್ಷದ ಹಿಂದೆ ಜೈಶ್‌ ಸೇರಿದ್ದೆ. ಒಂದು ವರ್ಷ ಕಾದ ಬಳಿಕ ನನಗೆ ನನ್ನ ಉದ್ದೇಶ ಈಡೇರಿಸುವ ಅವ ಕಾಶ ಬಂದಿದೆ. ಈ ವೀಡಿಯೋ ನಿಮ್ಮನ್ನು ತಲುಪುವ ವರೆಗೆ ನಾನು ಸ್ವರ್ಗದಲ್ಲಿರುತ್ತೇನೆ. ಇದು ಕಾಶ್ಮೀರದ ಜನರಿಗೆ ನನ್ನ ಕೊನೆಯ ಸಂದೇಶ’ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ