ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆ 

0
158
ನವದೆಹಲಿ ,ಜುಲೈ,4 : (ಕಿರಣ್ ವಾರ್ತಾ -www.kiranvarta.com)ಜಗತ್ತಿನಾದ್ಯಂತ ಕೊರೋನಾ ರೋಗಿಗಳ ಸಂಖ್ಯೆ ಕೋಟಿಗೂ ಮಿಕ್ಕಿ ಏರಿಕೆಯಾದರೆ ಭಾರತದಲ್ಲಿಯೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಆತಂಕದ ವಿಚಾರವಾಗಿದೆ 
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದಾಖಲೆಯ ಮಟ್ಟದಲ್ಲಿ 22,771 ಹೊಸ ರೋಗಿಗಳು ಸೇರ್ಪಡೆಯಾಗಿದ್ದು ೪೪೨ ರೋಗಿಗಳು ಸಾವನ್ನಪ್ಪಿದ್ದಾರೆ . ದೇಶದಲ್ಲಿ ಇದುವರೆಗೆ ಒಟ್ಟು 6,48,315 ಕೊರೋನಾ ಸೋಂಕಿಗೊಳಗಾಗಿದ್ದಾರೆ . 18665 ರೋಗಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ . ದೇಶದಲ್ಲಿ ಸರಾಸರಿ ಶೇಕಡಾ 60.80 ಜನರು ಗುಣಮುಖರಾಗಿರುವುದು ನೆಮ್ಮದಿಯ ವಿಚಾರವಾಗಿದೆ ಎಂದು ಕೇಂದ್ರೀಯ ಆರೋಗ್ಗ್ಯಾ ಮಂತ್ರಾಲಯ ಮಾಹಿತಿ ನೀಡಿದೆ . ಪ್ರಸ್ತುತ ದೇಶದಲ್ಲಿ 23,5433 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . 3,94,227 ರೋಗಿಗಳು ಚಿಕಿತ್ಸೆಯ ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ . 

(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )   

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ