ದೇಶದ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ವಿದೇಶದಿಂದ ಆಮದಿಗೆ ಕಡಿವಾಣ :ರಾಜನಾಥ್ ಸಿಂಗ್  

0
391

ಹೊಸದಿಲ್ಲಿ,ಆ .09 : (ಕಿರಣ್ ವಾರ್ತಾ )ದೇಶದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರವರು ಇಂದು ಆ .9 ರಂದು ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದು ರಕ್ಷಣಾ ಮಂತ್ರಾಲಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ . 

ದೇಶದ ರಕ್ಷಣಾ  ಕ್ಷೇತ್ರದಲ್ಲಿ  ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ 101 ವಸ್ತುಗಳನ್ನು ಭಾರತದಲ್ಲೇ ಉತ್ಪಾದಿಸಲಿದ್ದೇವೆ . ವಿದೇಶದಿಂದ ಆಮದಾಗುವ  ರಕ್ಷಣಾ ಸಾಮಾಗ್ರಿಗಳಿಗಳನ್ನು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 ರಕ್ಷಣಾ ವಲಯದ ಸುಮಾರು  101 ರಕ್ಷಣಾ ವಲಯದ ಉತ್ಪನ್ನಗಳನ್ನು ಪಟ್ಟಿ ಮಾಡಿದ್ದು . ಆಧುನಿಕ ತಂತ್ರಜ್ಞಾನದ ಆರ್ಟಿಲರಿ ಗನ್ಸ್, ರೈಫಲ್ಸ್, ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ಗಳು, ರಾಡಾರ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದರು .

 2020ರಿಂದ 2024ರ ನಡುವೆ ದೇಶದಲ್ಲಿ ಹೆಚ್ಚಿನ ಉತ್ಪಾದನೆ ಮಾಡಲು ಒತ್ತು ನೀಡಲಾಗುವುದು. ಭೂ ಸೇನೆ ಮತ್ತು ವಾಯುಸೇನೆಗೆ 1,30,000 ಕೋಟಿ. ರೂ ಮತ್ತು ನೌಕಾ ಸೇನೆಗೆ 1,40,000 ಕೋಟಿ ರೂ ಮೀಸಲಿಡುವುದಾಗಿ ಸಚಿವರು ಘೋಷಿಸಿದರು.


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)   

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ