ಪಾಕಿಸ್ತಾನದ ಜೈಷ್ ಸಂಘಟನೆಯ ಅಡಗು ದಾಣಗಳ ಮೇಲೆ ಭಾರತೀಯ ವೈಮಾನಿಕ ದಾಳಿ: ೩೦೦ ಉಗ್ರರು ಮಟಾಶ್!?

0
208

ಹೊಸದಿಲ್ಲಿ: ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ ಕೈಗೊಳ್ಳುತ್ತಿರುವ ಭಾರತೀಯ ವಾಯುಪಡೆ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ನಾಶ ಮಾಡಿದೆ. ವೈಮಾನಿಕ ದಾಳಿಯ ಮೂಲಕ ಉಗ್ರ ನೆಲೆಗಳು ಧ್ವಂಸಗೊಂಡಿವೆ. ಬಾಲಕೋಟ್‌, ಚಕೋಟಿ, ಮುಜಾಫರಬಾದ್‌ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತೂನ್‌ವಾ ಪ್ರಾಂತ್ಯಕ್ಕೆ ನುಗ್ಗಿದ ಯುದ್ಧ ವಿಮಾನಗಳು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ.
ಬೆಳಗಿನ ಜಾವ 3.30ರ ಸುಮಾರಿಗೆ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಬಂದಿವೆ ಎಂದು  ವರದಿಯಾಗಿದೆ  .

   ಫೆ 14 ರಂದು  ನಮ್ಮ ಯೋಧರ ಮೇಲೆ ಅಮಾನುಷ ದಾಳಿ ನಡೆಸಿದ ಉಗ್ರರ ವಿರುದ್ಧ ಮತ್ತು ಅವರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾದ ವಿರುದ್ಧ ಕೊನೆಗೂ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ವೈಮಾನಿಕ ದಾಳಿ ನಡೆಸಿ ಪುಲ್ವಾಮಾ ದಾಳಿ  ನಡೆಸಿದ ಜೈಷೆ ಉಗ್ರ ಸಂಘಟನೆಯ ಬಾಲಕೋಟ್‌, ಮುಜಾಫರಬಾದ್‌ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.  1000 ಕೆ.ಜಿಗಳನ್ನು ಬಾಂಬ್‌ಗಳನ್ನು ಹೊತ್ತುಕೊಂಡ ಭಾರತೀಯ ವಾಯುಪಡೆಯ 12 ಮಿರಾಜ್ 2 000 ಯುದ್ಧ ವಿಮಾನಗಳು ಜೈಷೆ, ಲಷ್ಕರ್ ಇ ತೋಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ 1971ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು (LoC) ಮೀರಿ ಭಾರತ ದಾಳಿಯನ್ನು ಹಮ್ಮಿಕೊಂಡಿದೆ.
ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದ್ದರೂ ಭಾರತ ಎಂದು ಗಡಿ ನಿಯಂತ್ರಣ ರೇಖೆ ನಿಯಮವನ್ನು ಉಲ್ಲಂಘಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತಿನಂತೆ ಪುಲ್ವಾಮಾ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ