ಭಾರತಕ್ಕೆ ರಫೇಲ್ ಬಲ-ಕಿರಣ್ ವಾರ್ತಾ 

0
124

ನವದೆಹಲಿ :ಯುದ್ಧವಿಮಾನಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಹ ರಫೇಲ್ ಯುದ್ಧ ವಿಮಾನಗಳು ಇಂದು ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಲು ಹಾರಾಟ ನಡೆಸಿವೆ . 5 ರಫೇಲ್ ವಿಮಾನಗಳು ಇಂದು ಫ್ರಾನ್ಸ್ ನಿಂದ ಆಗಮಿಸಿದ್ದು ಬುಧವಾರ ಭಾರತದ ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ .

    ಭಾರತೀಯ ವಾಯುಪಡೆಯ ಪೈಲಟ್ ಗಳು ವಿಮಾನಗಳನ್ನು ಭಾರತಕ್ಕೆ ಕರೆತರುತ್ತಿದ್ದಾರೆ . ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೆಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳು. ರಫೆಲ್ ಗಂಟೆಗೆ 2,130 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.ಒಂದೆಡೆ ಚೀನಾದೊಂದಿಗೆ ವಿವಾದವು ಮುಂದುವರಿದಿದ್ದು ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ಮಹತ್ತರ ಬಲವನ್ನು ಈ ಯುದ್ಧ ವಿಮಾನಗಳು ಒದಗಿಸಲಿವೆ .


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ