ಭಾರತ -ಚೀನಾ ಗಡಿಯಲ್ಲಿ ಘರ್ಷಣೆ 20 ಯೋಧರು ಹುತಾತ್ಮ 

0
88

ಹೊಸದಿಲ್ಲಿ: (ಕಿರಣ್ ವಾರ್ತಾ -www.kiranvarta.com)ಭಾರತ -ಚೀನಾ ಗಡಿಯಲ್ಲಿ ಚೀನಾವು  ಕಾಲು ಕೆರೆದು ಘರ್ಷಣೆಗೆ ಮುಂದಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ .  ಭಾರತ-ಚೀನ ನಡುವಣ ನೈಜ ನಿಯಂತ್ರಣ ರೇಖೆ  ಹಾದುಹೋಗುವ ಪೂರ್ವ ಲಡಾಖ್‌ನ ಗಾಲ್ವಾನ್‌ ಪ್ರದೇಶದಲ್ಲಿ ಚೀನದ ಯೋಧರು ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸೇನಾಧಿಕಾರಿ ಸಹಿತ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಈ ಸಂದರ್ಭ  ಚೀನದ 43 ಮಂದಿ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ . ಸೋಮವಾರ ರಾತ್ರಿ ಭಾರತೀಯ ಭೂಪ್ರದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನದ ಯೋಧರು ವಾಪಸ್‌ ತೆರಳಲು ಪ್ರತಿರೋಧ ತೋರಿದ್ದಲ್ಲದೆ, ಭಾರತೀಯ ಯೋಧರೊಂದಿಗೆ ಕಾದಾಟಕ್ಕಿಳಿದರು. ಈ ಸಂದರ್ಭದಲ್ಲಿ ಎರಡೂ ಕಡೆಗಳ ಪಡೆಗಳು ಪರಸ್ಪರ ಮುಖಾಮುಖೀ ಕಾದಾಟಕ್ಕಿಳಿದಿದ್ದು, ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಂಡವು.

ಜಾಹೀರಾತು

ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ  ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿರುವ ಬಗ್ಗೆ ಮಂಗಳವಾರ ರಾತ್ರಿ ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ. ಓರ್ವ ಸೇನಾಧಿಕಾರಿ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ 17 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದರು ಎಂದೂ ಸೇನೆ ತಿಳಿಸಿದೆ.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ