“ಮತದಾನ ಗುರುತು ಚೀಟಿ” ಹೊಂದಿಲ್ಲದಿದ್ದರೂ ನಿಶ್ಚಿಂತೆಯಿಂದ ಮತದಾನ ಮಾಡಿ .

0
116
ಚುನಾವಣಾ ಆಯೋಗ ವಿವಿಧ 11 ಗುರುತು ಪತ್ರಗಳನ್ನು ತೋರಿಸಿ ಮತದಾನ ಮಾಡಲು ಸೃಷ್ಟೀಕರಣ . 
ಪುಣೆ :(www.kiranvarta.com)ಒಂದು ವೇಳೆ ಮತದಾರ ಯಾದಿಯಲ್ಲಿ ತಮ್ಮ ಹೆಸರಿದ್ದು ಮತದಾರ ಗುರುತಿ ಚೀಟಿ ಇಲ್ಲದಿದ್ದರೆ ಚಿಂತಿಸದಿರಿ . ಅಗತ್ಯವಾಗಿ ತಾವು ನಿಶ್ಚಿಂತೆಯಿಂದ ಮತದಾನ ಮಾಡಬಹುದಾಗಿದೆ . ಚುನಾವಣಾ ಆಯೋಗ  ಸೃಷ್ಟೀಕರಣವೊಂದನ್ನು ನೀಡಿದ್ದು ನಿಮ್ಮಲ್ಲಿರುವ ಸ್ಪಷ್ಟಪಡಿಸಿದ 11 ಗುರುತು ಚೀಟಿಗಳಲ್ಲಿ ಯಾವುದಾದರೂ ಒಂದನ್ನು ಮತದಾನ ಕೇಂದ್ರದಲ್ಲಿ ತೋರಿಸಿ ನೀವು ಮತದಾನ ಮಾಡಬಹುದಾಗಿದೆ . ಆದರೆ ಮತದಾರ ಯಾದಿಯಲ್ಲಿ ನಿಮ್ಮ ಹೆಸರು ಇರಬೇಕಾಗಿದೆ . ಮತದಾನ ಗುರುತು ಚೀಟಿ ನಿಮ್ಮಲ್ಲಿ ಕಳೆದು ಹೋಗಿದ್ದರೆ ಅಥವಾ ಇನ್ನಾವುದೇ ಕಾರಣದಿಂದ ನಿಮ್ಮಲ್ಲಿ ಇರದಿದ್ದರೆ ಮತದಾನಕ್ಕೆ  ತೊಡಕಾಗದಿರಲಿ ,ನಿಮ್ಮ ಹಕ್ಕನ್ನು ನೀವು ಚಲಾಯಿಸಿಸುವಂತಾಗಲು ಚುನಾವಣಾ ಆಯೋಗ ವಿವರಣೆ ನೀಡಿದೆ .
ಚುನಾವಣಾ ಆಯೋಗದಿಂದ ಮಾನ್ಯತೆ ನೀಡಲಾದ 11 ಗುರುತು ಚೀಟಿಗಳ ಮಾಹಿತಿ 
1. ಪಾಸ್ ಪೋರ್ಟ್ 
2. ಡ್ರೈವಿಂಗ್  ಲೈಸನ್ಸ್ 
3. ಫೋಟೋ  ಹೊಂದಿದ ನೌಕರರ ಗುರುತು ಚೀಟಿ (ಕೇಂದ್ರ /ರಾಜ್ಯ ಶಾಸನ  ಉಪಕ್ರಮ /ಸಾರ್ವಜನಿಕ  ಕಂಪೆನಿಗಳ ಗುರುತು ಪತ್ರ )
4. ಫೋಟೋ ಬ್ಯಾಂಕ್ ಪಾಸ್ ಬುಕ್ 
5. ಪಾನ್ ಕಾರ್ಡ್ 
6. ಎನ್ ಪಿ ಆರ್ ಅಂತರ್ಗತ ಆರ್ ಜಿ ಐ ಮುಖಾಂತರ ನೀಡಲಾದ ಸ್ಮಾರ್ಟ್ ಕಾರ್ಡ್ 
7. ಮನರೇಗಾ ಕಾರ್ಯ ಪತ್ರಿಕೆ 
8. ಕಾಮ್ ಗಾರ್ ಮಾತ್ರಾಲಯದಿಂದ ನೀಡಲಾದ  ಸ್ಮಾರ್ಟ್ ಕಾರ್ಡ್ 
9. ಫೋಟೋ ಹೊಂದಿದ ನಿವೃತ್ತಿ ವೇತನದ ದಸ್ತಾವೇಜುಗಳು 
10. ಸಂಸದರು /ಶಾಸಕರು /ವಿಧಾನಪರಿಷತ್ ಸದಸ್ಯರು ನೀಡಿದ ಗುರುತು ಪತ್ರ 
11. ಆಧಾರ್ ಕಾರ್ಡ್ . 
“ಕಡ್ಡಾಯವಾಗಿ ಮತದಾನ ಮಾಡಿ . ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ ,ಸದೃಢ ಭಾರತವನ್ನು ಕಟ್ಟಲು ಸಹಕರಿಸಿ “  

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ