ಮಾಜಿ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಇನ್ನಿಲ್ಲ -ಕಿರಣ್ ವಾರ್ತಾ

0
95

ನವದೆಹಲಿ,ಆ .6 : (ಕಿರಣ್ ವಾರ್ತಾ -www.kiranvarta.com) ಮಾಜಿ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ನಿಧನಹೊಂದಿದ್ದಾರೆ . ಮೋದಿಯವರ ಮಂತ್ರಿಮಂಡಲದಲ್ಲಿ ವಿದೇಶ ಮಂತ್ರಿಯಾಗಿ  ಅಸಾಮಾನ್ಯ ಸಾಧನೆ ಗೈದು  ಭಾರತೀಯರೆಲ್ಲರ ಮನಗೆದ್ದಿರುವ ಸುಷ್ಮಾ ಸ್ವರಾಜ್ ಇಂದು ಇಹಲೋಕವನ್ನು ತ್ಯಜಿಸಿರುವುದು ಕೋಟ್ಯಂತರ ಭಾರತೀಯರ ಪಾಲಿಗೆ ದುಃಖದ ಕ್ಷಣವಾಗಿದೆ . ಇತ್ತೀಚೆಗಷ್ಟೇ ಅವರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲಾಗಿತ್ತು . 2019 ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯವನ್ನು ದಾಖಲಿಸಿ ಸರಕಾರವನ್ನು ರಚಿಸಿದ ಸಂದರ್ಭ ಅನಾರೋಗ್ಯ ಕಾರಣದಿಂದ  ಮಂತ್ರಿಮಂಡಲದಿಂದ ದೂರವುಳಿದಿದ್ದರು .

ಸುಷ್ಮಾ ಸ್ವರಾಜ್ ಅವರು 1952 ರ ಫೆಬ್ರುವರಿ 14 ರಂದು  ಹರಿಯಾಣದ  ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಇವರ ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ.ಅವರು ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿಯನ್ನು ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ  ದಲ್ಲಿ ಕಾನೂನು ಅಭ್ಯಾಸ ಮಾಡಿದರು.1973 ರಲ್ಲಿ ರಲ್ಲಿ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.

ಸುಷ್ಮಾ ಸ್ವರಾಜ್ ಅವರು ರಾಜಕೀಯ ವೃತ್ತಿಜೀವನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನೊಂದಿಗೆ 1970 ರಲ್ಲಿ ಆರಂಭಿಸಿದರು. ಅವರ ಪತಿ ಸ್ವರಾಜ್ ಕೌಶಲ್, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಸುಷ್ಮಾ ಸ್ವರಾಜ್ 11975 ರಲ್ಲಿ ಜಾರ್ಜ್ ಫೆರ್ನಾಂಡಿಸ್  ಅವರ ಕಾನೂನು ರಕ್ಷಣಾ ತಂಡದ ಅಂಗವಾಗಿದ್ದರು. ಜಯಪ್ರಕಾಶ ನಾರಾಯಣ  ಒಟ್ಟು ಕ್ರಾಂತಿಯ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ನಂತರ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಾದರು.

ಅವರು 11977 ರಿಂದ 1982 ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. ೨೫ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ ಪಡೆದರು.1977 ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅವರು 1979 ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದರು. ಅವರು 1987 ರಿಂದ 1990 ರ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ-ಲೋಕಸಭೆ ಒಕ್ಕೂಟದ ಸರಕಾರದಲ್ಲಿ ಹರಿಯಾಣದ ಶಿಕ್ಷಣ ಸಚಿವೆಯಾಗಿದ್ದರು.

 1. 1977-2ರಲ್ಲಿ ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
 2. 11977-79 ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
 3.  ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
 4. 197-90 ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
 5. 1990-96ರಲ್ಲಿ ರಾಜ್ಯಸಭೆಗೆ ಆಯ್ಕೆ (1 ನೇ ಅವಧಿ)
 6. 996-97ಹನ್ನೊಂದನೇ ಲೋಕಸಭೆ ಸದಸ್ಯೆ,(ಎರಡನೆಯ ಅವಧಿ)
 7. 1996[16 ಮೇ – 1ಜೂನ್] – ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ
 8. 1998-99 [10ಮಾರ್ಚ್ 1998 – 16 ಏಪ್ರಿಲ್ 1999] ಹನ್ನೆರಡನೆಯ ಲೋಕಸಭೆ ಸದಸ್ಯೆ,(3 ನೇ ಅವಧಿ)
 9. 1998 [16ಮಾರ್ಚ್ – 12ಅಕ್ಟೋಬರ್] ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ
 10. 1998 [13 ಅಕ್ಟೋಬರ್ – 3 ಡಿಸೆಂಬರ್] ದೆಹಲಿಯ ಮುಖ್ಯಮಂತ್ರಿ
 11. 1998[ನವೆಂಬರ್] – ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು
 12. 2000-06 ರಾಜ್ಯಸಭೆ ಸದಸ್ಯೆ,(4ನೇ ಅವಧಿ)
 13. 200-02 [30 ಸೆಪ್ಟೆಂಬರ್ 2000- 26 ಜನವರಿ 2003] ಮಾಹಿತಿ ಮತ್ತು ಪ್ರಸಾರ ಮಂತ್ರಿ
 14. 2003-04 [26 ಜನವರಿ 2003- 22 ಮೇ 2004] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
 15. 2006-09 ರಾಜ್ಯಸಭೆ ಸದಸ್ಯೆ,(೫ ನೇ ಅವಧಿ)
 16. 2009-14[16 ಮೇ 2009 – 18ಮೇ 2014]5 ನೇ ಲೋಕಸಭೆ ಸದಸ್ಯೆ,(6ನೇ ಅವಧಿ)
 17. 2009[3 ಜೂನ್ 2009- 11 ಡಿಸೆಂಬರ್ 2009] ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
 18. 2009-14[21 ಡಿಸೆಂಬರ್ 2009- 18 ಮೇ 2014]ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
 19. 2014[26 ಮೇ]16ನೇ ಲೋಕಸಭೆ ಸದಸ್ಯೆ,(7 ನೇ ಅವಧಿ)
 20. 2014 [26 ಮೇ ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ

ಮಾಹಿತಿ ಮತ್ತು ಪ್ರಸಾರ

ದಕ್ಷಿಣ ದೆಹಲಿ ವಿಧಾನ ಸಭಾ ಕ್ಷೇತ್ರದಿಂದ 199ರ ಮಾರ್ಚ್ನಲ್ಲಿ ಎರಡನೆಯ ಅವಧಿಗೆ ಅವರು 12ನೇ ಬಾರಿಗೆ ಲೋಕಸಭೆಗೆ ಮರು ಚುನಾಯಿತರಾದರು. ಎರಡನೇ ವಾಜಪೇಯಿ ಸರ್ಕಾರದಲ್ಲಿ, ಅವರು ದೂರಸಂಪರ್ಕ ಸಚಿವಾಲಯದ ಮಾಹಿತಿ ಮತ್ತು ಪ್ರಸಾರದ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೇಂದ್ರ ಆರೋಗ್ಯ ಸಚಿವೆ

ಜನವರಿ 2002 ರಿಂದ ಮೇ 2004ರ ವರೆಗೆ ಅವರು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಕೇಂದ್ರ ಆರೋಗ್ಯ ಸಚಿವರಾಗಿ ಅವರು ಭೋಪಾಲ್ (ಎಂಪಿ), ಭುವನೇಶ್ವರ್ (ಒಡಿಶಾ), ಜೋಧಪುರ್ (ರಾಜಸ್ಥಾನ), ಪಾಟ್ನಾ (ಬಿಹಾರ), ರಾಯ್ಪುರ್ (ಛತ್ತೀಸ್ಗಢ) ಮತ್ತು ರಿಷಿಕೇಶ್ (ಉತ್ತರಾಖಂಡ್) ನಲ್ಲಿ ಆರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸ್ಥಾಪಿಸಿದ್ದಾರೆ

ಬಾಹ್ಯ ವ್ಯವಹಾರಗಳ ಸಚಿವೆ

2014 ರ ಮೇ ತಿಂಗಳಿನಿಂದ ಭಾರತೀಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿರಾ ಗಾಂಧಿಯವರ ನಂತರ ಈ ಸ್ಥಾನವನ್ನು ಪಡೆದ ಎರಡನೇ ಮಹಿಳೆ ಇವರು.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ