ಲಾಕ್ ಡೌನ್ ಜೂನ್ 30 ರ ವರೆಗೆ ವಿಸ್ತರಣೆ-ಅನ್ ಲಾಕ್ 1.0 ಜಾರಿ -ಕಿರಣ್ ವಾರ್ತಾ

0
204

ನವದೆಹಲಿ ,ಮೇ .30 : (ಕಿರಣ್ ವಾರ್ತಾ -www.kiranvarta.com)ದೇಶದಾದ್ಯಂತ 4 ನೇ ಹಂತದ ಲಾಕ್ ಡೌನ್  ನಾಳೆ ಮೇ 31 ಕ್ಕೆ ಮುಕ್ತಾಯಗೊಳ್ಳುತ್ತಿದ್ದು  ಮುಂದೆ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ಕೇಂದ್ರ ಗೃಹ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ.ಈ ಲಾಕ್ ಡೌನ್ ನ್ನು ಅನ್ ಲಾಕ್ 1.0 ಜಾರಿ ಎಂದು ಕರೆಯಲಾಗಿದೆ .  

ಕಂಟೈನ್ಮೆಂಟ್ ಪ್ರದೇಶಗಳಿಗೆ ಮಾತ್ರ ಲಾಕ್ ಡೌನ್ ಸೀಮಿತಗೊಳಿಸಲಾಗಿದೆ, ಸದ್ಯಕ್ಕೆ ಈ ಪ್ರದೇಶಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ.ರಾತ್ರಿ 9ರಿಂದ ಬೆಳಿಗ್ಗೆ 5 ರವರೆ ಕರ್ಫ್ಯೂ ಜಾರಿಯಲ್ಲಿರಲಿದೆ.  ದಾರ್ಮಿಕ ಕೇಂದ್ರಗಳು ಹಾಗೂ ಶಾಪಿಂಗ್ ಮಾಲ್ ಗಳನ್ನು ಜೂನ್ 8ರ ಬಳಿಕ ತೆರೆಯಲು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಲಾಗಿದೆ.ಸಭೆ ಸಮಾರಂಭಗಳಿಗೆ ನಿರ್ಬಂಧ ಮುಂದುವರೆದಿದ್ದು ಮದುವೆಗೆ 50 ಜನ ಹಾಗೂ ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರೋಗ್ಯ ಇಲಾಖೆಯಿಂದ ಕೊರೋನಾ ತಡೆಗಾಗಿ ಹೊಸ ನಿಯಮಗಳನ್ನು ಬಿಡುಗಡೆಗೊಳಿಸಲಿದೆ  . ದೇಶದಲ್ಲಿ ಯಾವುದೇ ರಾಜಕೀಯ ರ್ಯಾಲಿಗಳಿಗೆ ಅವಕಾಶವಿಲ್ಲ . 


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ