ಶ್ರೀರಾಮ ಮಂದಿರಕ್ಕೆ ಮೋದಿ ಅಡಿಗಲ್ಲು ;ಮಂದಿರ ನಿರ್ಮಾಣ ರಾಷ್ಟ್ರವನ್ನು ಒಗ್ಗೊಡಿಸುವ ಪ್ರಕ್ರಿಯೆ -ನರೇಂದ್ರ ಮೋದಿ 

0
128

ಅಯೋಧ್ಯೆ : (ಕಿರಣ್ ವಾರ್ತಾ -www.kiranvarta.com) ಕೊನೆಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ದೇಶದ ಲಕ್ಷಾಂತರ ರಾಮಭಕ್ತರ ಕನಸು ನನಸಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಆಗಸ್ಟ್ 5-2020, 12.44ಕ್ಕೆ ಭೂಮಿ ಪೂಜೆ  ನೆರವೇರಿಸಿದ್ದಾರೆ.ಇದರ ಮೂಲಕ ಕೋಟ್ಯಂತರ ರಾಮಭಕ್ತರ ಕನಸೊಂದು ನೆರವೇರಿದೆ . ಸುಮಾರು ಐನೂರು ವರ್ಷಗಳ ಹೋರಾಟದ ಫಲ ಇಂದು ಕೈಗೂಡಿದ ಸಾರ್ಥಕತೆ ರಾಮ ಭಕ್ತರದ್ದಾಗಿದೆ .

ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮ ಮಂದಿರದ  ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ “ಶ್ರೀರಾಮನ ದೇವಸ್ಥಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ . ಶ್ರೀರಾಮ ಮರ್ಯಾದಾ ಪುರುಷೋತ್ತಮ . ಶ್ರೀರಾಮ ಎಲ್ಲರ ಮನಸ್ಸಿನಲ್ಲೂ ನೆಲೆಸಿದ್ದಾನೆ . ಮಂದಿರ ನಿರ್ಮಾಣವು ರಾಷ್ಟ್ರವನ್ನು ಒಗ್ಗೂಡಿಸುವ ಪ್ರಕ್ರಿಯೆಯಾಗಿದೆ . ಇಂದು ಇಡೀ ದೇಶವೇ ರಾಮಮಯವಾಗಿದೆ .ಸಂಪೂರ್ಣ ಭಾರತವಾಸಿಗಳು ರೋಮಾಂಚನಗೊಂಡಿದ್ದಾರೆ .ಪ್ರತೀ ಮನ ದೀಪಗಳಂತೆ ಬೆಳಗುತ್ತಿದೆ .  ವಿಶ್ವಾದ್ಯಂತ ರಾಮನ ಘೋಷವಾಕ್ಯ ಮೊಳಗುತ್ತಿದೆ. ಎಷ್ಟೋ ರಾಮಭಕ್ತರ ತ್ಯಾಗ ,ಹೋರಾಟದ ಫಲ ಇಂದು ದೊರಕಿದೆ .  ದೇಶದ ಕೋಟ್ಯಂತರ ರಾಮಭಕ್ತರಿಗೆ ವಂದನೆಗಳು .  ಸರಯೂ ನದಿ ತಟದಲ್ಲಿ ಇಂದು ಸುವರ್ಣಯುಗದ ಆರಂಭವಾಗಿದೆ . ಐತಿಹಾಸಿಕ ಕ್ಷಣಕ್ಕೆ ಭಾಗಿಯಾಗಿದ್ದು ನನ್ನ ಸೌಭಾಗ್ಯವಾಗಿದೆ . ರಾಮಜನ್ಮಭೂಮಿ ಟ್ರಸ್ಟ್ ಗೆ ಆಭಾರಿಯಾಗಿದ್ದೇನೆ  .  ಯಾವುದೇ ಕೆಲಸವಾಗಬೇಕಾದರೂ ಶ್ರೀರಾಮನತ್ತ ನೋಡುತ್ತೇವೆ. ನಾನು ಈ ಕಾರ್ಯ ಮಾಡುವ ಮೊದಲು ರಾಮಭಕ್ತ ಹನುಮಾನ್ ಆಶೀರ್ವಾದ ಪಡೆದು ಬಂದಿದ್ದೇನೆ . ರಾಮಮಂದಿರ ಮುಂದಿನ ಪೀಳಿಗೆಗೆ ಭಕ್ತಿ ,ಸಂಕಲ್ಪದ ಪ್ರೇರಣೆ ನೀಡಲಿದೆ . ವಿಶ್ವದಾದ್ಯಂತ ರಾಮಭಕ್ತರು ಇಲ್ಲಿಗೆ ಬರುವಂತಾಗಲಿ . ಈ ದೇಗುಲ ನಿರ್ಮಾಣವಾದ ಬಳಿಕ ಅಯೋಧ್ಯೆ ಭವ್ಯತೆ ಮಾತ್ರವಲ್ಲ, ಈ ಕ್ಷೇತ್ರದ ಆರ್ಥಿಕ ವ್ಯವಸ್ಥೆಯೂ ಬದಲಾಗಲಿದೆ. ಎಂದರು . 

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ