ಸಚಿನ್ ಪೈಲಟ್  ಗುಂಪಿಗೆ ತಾತ್ಕಾಲಿಕ ರಿಲೀಫ್ ;ಯಥಾಸ್ಥಿತಿ ಮುಂದುವರೆಸಲು ಕೋರ್ಟ್ ಆದೇಶ 

0
258

ಜೈಪುರ,ಜುಲೈ .24 : ರಾಜಸ್ತಾನದಲ್ಲಿ ರಾಜಕೀಯದ ಅತಂತ್ರತೆ ಮುಂದುವರಿದಿದ್ದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ  ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರ ವಿರುದ್ಧ ಸೋಮವಾರದವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು. ಯಥಾಸ್ಥಿತಿಯನ್ನು  ಮುಂದುವರಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಇಂದು ರಾಜಸ್ಥಾನ ವಿಧಾನಸಭಾ ಸ್ಪೀಕರ್ ಗೆ ಆದೇಶ ನೀಡಿದೆ. ಪೈಲಟ್ ಮತ್ತು ಬೆಂಬಲಿತ 18 ಶಾಸಕರನ್ನು ಸ್ಪೀಕರ್ ಸಿ ಪಿ ಜೋಶಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಪೀಠ, ಸಚಿನ್ ಪೈಲಟ್ ಗುಂಪು  ಮನವಿ ಮಾಡಿಕೊಂಡ ಕಾರಣ ಯೂನಿಯನ್ ಆಫ್ ಇಂಡಿಯಾವನ್ನು ಕಕ್ಷಿದಾರರನ್ನಾಗಿ ಪರಿಗಣಿಸಲು ಇಂದು ಒಪ್ಪಿಗೆ ನೀಡಿದೆ. ಈ ಆದೇಶದಿಂದ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಶಾಸಕರಿಗೆ  ತಾತ್ಕಾಲಿಕ ಸಿಕ್ಕಿದೆ.


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ   )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ