ಹಿಂದಿ ಚಿತ್ರರಂಗದ  ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ 

0
114

ಮುಂಬಯಿ ,ಜುಲೈ . 3:  (ಕಿರಣ್ ವಾರ್ತಾ -www.kiranvarta.com)ಬಾಲಿವುಡ್ ನ ಪ್ರಸಿದ್ಧ  ನೃತ್ಯ ಸಂಯೋಜಕಿ ಸರೋಜ್ ಖಾನ್(72 )ಇಂದು ನಿಧನರಾಗಿದ್ದಾರೆ.  ಹೃದಯಾಘಾತದಿಂದ  ಇಂದು  ವೇಳೆ ಕೊನೆಯುಸಿರೆಳೆದರು ಎಂದು ಅವರ  ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಲಾಕ್ ಡೌನ್ ನಂತರದ ದಿನಗಳಲ್ಲಿ ಬಾಲಿವುಡ್ ನ ಖ್ಯಾತನಾಮ ನಟರು ನಿಧನರಾಗಿದ್ದು ಚಿತ್ರಲೋಕ ಶೋಕತಪ್ತವಾಗಿದ್ದು ಇದೀಗ ಸರೋಜ್ ಖಾನ್ ರವರು ನಿಧನರಾಗಿರುವುದು ಮತ್ತಷ್ಟು ದುಃಖಿತಗೊಂಡಿದೆ . ಸರೋಜ್ ಖಾನ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿದ ಕಾರಣ ಜೂನ್ 20 ರಂದು ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಖ್ಯಾತ ನೃತ್ಯ ಸಂಯೋಜಕಿಯಾಗಿದ್ದ ಇವರು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ